ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ವಾರದಿಂದ ಸುರಿಯುತ್ತಿದ್ದ ವರುಣ ಈಗ ಸ್ವಲ್ಪ ಶಾಂತವಾಗಿದ್ದಾನೆ.
ಜಿಲ್ಲೆಯ ತುಂಗಾ, ಭದ್ರೆ, ಹೇಮಾವತಿ ನದಿಗಳ ಹರಿವಿನ ಮಟ್ಟವೂ ಇಳಿಕೆಯಾಗಿದ್ದು, ಇದರಿಂದ ಮಲೆನಾಡಿನ ಜನರು ನಿಟ್ಟುಸಿರು ಬಿಡುವಂತಾಗಿದೆ. ಭದ್ರಾ ನದಿಯ ಆರ್ಭಟಕ್ಕೆ ಕಳಸ-ಹೊರನಾಡಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಿತ್ತು. ಅದೀಗ ಯಥಾ ಸ್ಥಿತಿಗೆ ಬಂದಿದೆ.
ಪ್ರವಾಹ ಹೆಚ್ಚಾಗಿದ್ದರಿಂದ ಮೂರು ಅಡಿಗಳಷ್ಟು ಸೇತುವೆ ಮೇಲೆ ನೀರು ಹರಿಯುತ್ತಿತ್ತು. ಅದೀಗ ಕಡಿಮೆಯಾದ ಕಾರಣ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ನಿರಂತರವಾಗಿ ರಸ್ತೆ ಸಂಚಾರ ಆರಂಭವಾಗಿದೆ.