ಚಿಕ್ಕಮಗಳೂರು: ಹೊರ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕಿರುವ ನಿರ್ಧಾರ ಖಂಡಿಸಿ ಅವರನ್ನು ಮತ್ತೆ ಕೆಲಸಕ್ಕೆ ನೇಮಿಸಿಕೊಳ್ಳುವಂತೆ ಒತ್ತಾಯಿಸಿ ಮಲ್ಲೇಗೌಡ ಜಿಲ್ಲಾಸ್ಪತ್ರೆಯ ಕಾರ್ಮಿಕರು ಹಾಗೂ ಬಿಸಿಎಂ ಇಲಾಖೆಯಲ್ಲಿ ಅಡುಗೆ ಸಹಾಯಕರಾಗಿ ಕಾರ್ಯನಿರ್ವಹಿಸುವ ನೌಕರರು ಪ್ರತಿಭಟನೆ ನಡೆಸಿದ್ರು.
ಆಜಾದ್ ಪಾರ್ಕ್ ವೃತ್ತದಲ್ಲಿ ಎಐಟಿಯುಸಿ ಹಾಗೂ ಬಿಎಸ್ಪಿ ನೇತೃತ್ವದಲ್ಲಿ ನೂರಾರು ಕಾರ್ಮಿಕರಿಂದ ರಾಜ್ಯ ಸರ್ಕಾರದ ವಿರುದ್ದ ವಿವಿಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ಮಾಡಿದರು.
ಕಳೆದ 15 -20 ವರ್ಷದಿಂದ ಕೆಲಸ ಮಾಡುತ್ತಿದ್ದ ಪುರುಷರು ಹಾಗೂ ಮಹಿಳೆಯರನ್ನು ನೌಕರಿಯಿಂದ ವಜಾಗೊಳಿಸಿ ಕೆಲ ತಿಂಗಳಿನಿಂದ ಕೆಲಸಕ್ಕೆ ಬರುತ್ತಿರುವ ಕಾರ್ಮಿಕರನ್ನು ಮುಂದುವರೆಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ಈ ಹಿಂದೆ ಕುಮಾರಸ್ವಾಮಿ ಅವರ ಸರ್ಕಾರವಿದ್ದಾಗ ಹಲವಾರು ಜನರನ್ನು ಇದೇ ರೀತಿ ಕೆಲಸಕ್ಕೆ ಬಾರದಂತೆ ತೆಗೆದುಹಾಕಿದ್ದರು. ಆದರೆ ಜನ ಪ್ರತಿನಿಧಿಗಳೊಂದಿಗೆ ಮಾತನಾಡಿ ಮತ್ತೆ ಅವರಿಗೆ ಕೆಲಸಕೊಟ್ಟು ಮುಂದುವರಿಸಿದ್ದರು. ಆದರೇ ಯಡ್ಡಿಯೂರಪ್ಪ ಸರ್ಕಾರ ಬಂದ ಕೂಡಲೇ ಈ ರೀತಿಯ ತೀರ್ಮಾನ ಮಾಡಿರೋದು ಸರಿಯಲ್ಲ. ಹಾಗಾಗಿ ಕೂಡಲೇ ಕೆಲಸದಿಂದ ತೆಗೆದು ಹಾಕಿರುವ ಕೆಲಸಗಾರರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಬಗ್ಗೆ ಎಚ್ಚರಿಸಿದ್ರು.