ಚಿಕ್ಕಮಗಳೂರು: ರೋಗಿಯೊಬ್ಬರು ಕೈನಲ್ಲಿ ಗ್ಲೂಕೋಸ್ ಹಾಕಿದ ಬಾಟಲಿ ಸಮೇತ ಒಂದು ವಾರ್ಡ್ನಿಂದ ಮತ್ತೊಂದು ವಾರ್ಡ್ಗೆ ನಡೆದುಕೊಂಡು ಹೋಗಿರುವ ಘಟನೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಜ್ವರ, ಕೈಕಾಲು ನಡುಕವೆಂದು ಮೂಡಿಗೆರೆಯಿಂದ ಬಂದಿದ್ದ ರೋಗಿಗೆ ಆಸ್ಪತ್ರೆಯ ಸಿಬ್ಬಂದಿ ಗ್ಲೂಕೋಸ್ ಹಾಕಿ ಎಮರ್ಜೆನ್ಸಿ ವಾರ್ಡಿನಿಂದ ಮತ್ತೊಂದು ವಾರ್ಡ್ಗೆ ಹೋಗಲು ಸೂಚಿಸಿದ್ದಾರೆ. ಆಗ ರೋಗಿ ಗ್ಲೂಕೋಸ್ ಬಾಟಲಿಯನ್ನು ತನ್ನ ಪೋಷಕರ ನೆರವಿನಿಂದ ಹಿಡಿದುಕೊಂಡು ನಡೆದುಕೊಂಡೇ ಹೋಗಿದ್ದಾರೆ.
ಇದನ್ನು ಗಮನಿಸಿದ ಸಾರ್ವಜನಿಕರು ಈ ಬಗ್ಗೆ ಸಂಬಂಧಪಟ್ಟವರು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.