ಚಿಕ್ಕಮಗಳೂರು: ಸರ್ಕಾರದ ಆದೇಶದ ಪ್ರಕಾರ ಬೇರೆ ಜಿಲ್ಲೆಯಿಂದ ಬರುವ ಜನರನ್ನು ಹೋಂ ಕ್ವಾರಂಟೈನ್ ಮಾಡುವುದಿಲ್ಲ. ಅಲ್ಲದೇ ಅವರ ಕೈಗೆ ಸೀಲ್ ಕೂಡ ಹಾಕೋದಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ನಮ್ಮ ರಾಜ್ಯದ ಒಳಗಡೆ ಪಾಸ್ ತಗೆದುಕೊಂಡು ಅಂತರ್ ರಾಜ್ಯದವರು ಬರಬಹುದು. ಬೇರೆ ಜಿಲ್ಲೆಯಿಂದ ನಮ್ಮ ಜಿಲ್ಲೆಗೆ ಬರುವವರನ್ನು ಹೋಂ ಕ್ವಾರಂಟೈನ್ ಮಾಡುತ್ತಿದ್ದೆವು. ವಿದೇಶ, ಬೇರೆ ರಾಜ್ಯದಿಂದ ಜಿಲ್ಲೆಗೆ ಬರುವವರಿಗೆ ಈ ರೀತಿ ಮಾಡಲಾಗುತ್ತದೆ. ಆದರೆ ನಮ್ಮ ಜಿಲ್ಲೆಯಲ್ಲಿ ಕೊರೊನಾ ಸಮುದಾಯಗಳಿಗೆ ಹರಡುವ ಮಟ್ಟಕ್ಕೆ ಇಲ್ಲ. ಹಾಗಾಗಿ ರೇಡ್ ಝೊನ್ನಿಂದ ಬರುವವರಿಗೆ ಕೇವಲ ಸ್ಕ್ರೀನಿಂಗ್ ಮಾಡುತ್ತಿದ್ದು, ಹೋಂ ಕ್ವಾರಂಟೈನ್ ಹಾಗೂ ಸ್ಟಾಪಿಂಗ್ ಮಾಡುತ್ತಿಲ್ಲ. ಆರೋಗ್ಯ ಸಮಸ್ಯೆ ಹಾಗೂ ಇನ್ನಿತರ ಸಮಸ್ಯೆಗಳು ಕಂಡು ಬಂದರೆ ಅಂತವರಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎಂದರು.