ಚಿಕ್ಕಮಗಳೂರು: ಸಂಸದ ತೇಜಸ್ವಿ ಸೂರ್ಯ ಅವರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಚಿಗಸೆ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಬಾಳೆಹೊನ್ನೂರಿನ ಗದ್ದೆಯ ಕಣದಲ್ಲಿ ಸ್ಥಳೀಯ ಹುಡುಗರ ಜೊತೆ ಕ್ರಿಕೆಟ್ ಆಡುವ ಮೂಲಕ ಗಮನ ಸೆಳೆದರು.
ಎನ್.ಆರ್.ಪುರ ತಾಲೂಕಿನ ಚಿಗಸೆ ಗ್ರಾಮದ ಮಾಲತೇಶ್ ಎಂಬುವರು ಕೆಲ ದಿನಗಳ ಹಿಂದೆ ತಮ್ಮ ನೂತನ ಮನೆ ಗೃಹ ಪ್ರವೇಶ ಮಾಡಿದ್ದರು. ಆ ಸಮಯದಲ್ಲಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ಆಹ್ವಾನ ನೀಡಿದ್ದರು. ಆದರೆ ಕೆಲಸ ಹಾಗೂ ರಾಜಕೀಯ ಒತ್ತಡದಿಂದ ತೇಜಸ್ವಿ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಚಿಕ್ಕಮಗಳೂರಿಗೆ ಭೇಟಿ ನೀಡಿದ್ದರು.
ಬುಧವಾರ ತಮ್ಮ ಸ್ನೇಹಿತರೊಂದಿಗೆ ಚಿಕ್ಕಮಗಳೂರಿಗೆ ಆಗಮಿಸುತ್ತಿರುವ ವೇಳೆ ಬಾಳೆಹೊನ್ನೂರಿನ ಬಳಿ ಭತ್ತದ ಕಣದಲ್ಲಿ ಸ್ಥಳೀಯ ಹುಡುಗರು ಕ್ರಿಕೆಟ್ ಆಡುತ್ತಿದ್ದುದ್ದನ್ನು ಕಂಡ ಸಂಸದರು, ತಾವೂ ಕೂಡ ಅವರೊಟ್ಟಿಗೆ ಕೆಲಕಾಲ ಆಟವಾಡಿದ್ದಾರೆ. ಬಳಿಕ ಸ್ಥಳೀಯ ಹುಡುಗರ ಜೊತೆ ಬಾಳೆಹೊನ್ನೂರು ಸೇರಿದಂತೆ ಸುತ್ತಮುತ್ತಲ ಕಾಫಿ ತೋಟ, ಪ್ರಕೃತಿ ಸೌಂದರ್ಯ ಸವಿದರು.