ETV Bharat / state

ಚಿಕ್ಕಮಗಳೂರು: ಮಗನ ಪಬ್​ಜಿ ಹುಚ್ಚಿಗೆ ಅಮ್ಮನೇ ಬಲಿ.. ಗುಂಡಿಟ್ಟ ಗಂಡ ಅಂದರ್​​​ - ಚಿಕ್ಕಮಗಳೂರಿನಲ್ಲಿ ಮಗನ ಪಬ್​ಜಿ ಹುಚ್ಚಿಗೆ ಅಮ್ಮ ಬಲಿ

ಪಬ್ ಜಿ ಆಡುತ್ತಿದ್ದ ಮಗನ ಜೊತೆ ಅಪ್ಪ ಜಗಳ ಆಡಿದ್ದು, ಪ್ರತಿಯಾಗಿ ಮಗನೂ ಅಪ್ಪನೊಂದಿಗೆ ಜಗಳಕ್ಕಿಳಿದಿದ್ದಾನೆ. ಕೋಪದಲ್ಲಿ ನಿನ್ನ ಸಾಯಿಸುತ್ತೇನೆಂದು ಮಗನಿಗೆ ವಿರುದ್ಧವಾಗಿ ತೋಟದ ಕೋವಿಯನ್ನು ಅಪ್ಪ ಹಿಡಿದಿದ್ದಾರೆ. ಮಗನಿಗೆ ಹೊಡೆಯುತ್ತಾರೆ ಎಂದು ಅಮ್ಮ ಅಡ್ಡ ಬಂದಿದ್ದಾರೆ. ಕುಡಿದ ಮತ್ತಿನಲ್ಲಿ ಅಪ್ಪ ಗುಂಡು ಹಾರಿಸಿದ್ದು, 40 ವರ್ಷದ ಮೈಮುನಾ ಮೃತಪಟ್ಟಿದ್ದಾರೆ.

ಆರೋಪಿ
ಆರೋಪಿ
author img

By

Published : May 25, 2022, 9:52 PM IST

ಚಿಕ್ಕಮಗಳೂರು: ಮಗನ ಪಬ್ ಜಿ ಹುಚ್ಚಿಗೆ ಅಮ್ಮ ಬಲಿಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹಾಗಲಖಾನ್ ಎಸ್ಟೇಟ್​ನಲ್ಲಿ ನಡೆದಿದೆ. ಮೈಮುನಾ (40) ಮೃತ ದುರ್ದೈವಿ ತಾಯಿ ಎಂಬುದಾಗಿ ತಿಳಿದು ಬಂದಿದೆ.

ಪಬ್ ಜಿ ಆಡುತ್ತಿದ್ದ ಮಗನ ಜೊತೆ ಅಪ್ಪ ಜಗಳ ಆಡಿದ್ದು, ಪ್ರತಿಯಾಗಿ ಮಗನೂ ಅಪ್ಪನೊಂದಿಗೆ ಜಗಳಕ್ಕಿಳಿದಿದ್ದಾನೆ. ಕೋಪದಲ್ಲಿ ನಿನ್ನ ಸಾಯಿಸುತ್ತೇನೆ ಎಂದು ಮಗನಿಗೆ ವಿರುದ್ದವಾಗಿ ತೋಟದ ಕೋವಿಯನ್ನು ಅಪ್ಪ ಹಿಡಿದಿದ್ದಾರೆ. ಮಗನಿಗೆ ಹೊಡೆಯುತ್ತಾರೆಂದು ಅಮ್ಮ ಅಡ್ಡ ಬಂದಿದ್ದಾರೆ. ಕುಡಿದ ಮತ್ತಿನಲ್ಲಿ ಅಪ್ಪ ಗುಂಡು ಹಾರಿಸಿದ್ದು, 40 ವರ್ಷದ ಮೈಮುನಾ ಮೃತಪಟ್ಟಿದ್ದಾರೆ.

ಪತಿ ಇಮ್ತಿಯಾಸ್ ಎಂಬಾತನನ್ನು ಪೊಲೀಸರು ಬಂಧನ ಮಾಡಿದ್ದು, ಆಕೆಯ ಹಿರಿಯ ಮಗ ಅಮ್ಮನನ್ನ ತಕ್ಷಣ ಆಸ್ಪತ್ರೆಗೆ ಕರೆ ತಂದರೂ ಮೈಮನಾ ಕೊನೆಯುಸಿರೆಳೆದಿದ್ದಾಳೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

ಓದಿ: ಮುಹೂರ್ತ ಸಮಯಕ್ಕೆ ಪ್ರಿಯಕರನ ಜೊತೆ ವಧು ಎಸ್ಕೇಪ್..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.