ETV Bharat / state

ಇನ್ಮುಂದೆ ಅಧಿಕಾರಿಗಳು ಹಳ್ಳಿಗಳಿಗೆ ತೆರಳಿ ಚಪ್ಪಲಿ ಸವೆಸಲಿ: ಆರ್.ಅಶೋಕ್ - ಕಂದಾಯ ಸಚಿವ ಆರ್ ಅಶೋಕ್

ಇಷ್ಟು ದಿನ ಅಂಚೆ ಕಚೇರಿಯ ಮೂಲಕ ವೃದ್ಧರಿಗೆ, ಹಿರಿಯರಿಗೆ, ವಿಕಲಚೇತನರಿಗೆ ಹಣವನ್ನು ಪಾವತಿ ಮಾಡಲಾಗುತ್ತಿತ್ತು. ಆದರೆ ಮುಂದಿನ ದಿನಗಳಲ್ಲಿ ಬ್ಯಾಂಕ್ ಅಕೌಂಟ್​ ಮೂಲಕ ಅವರಿಗೆ ಹಣವನ್ನು ಸಂದಾಯ ಮಾಡಲಾಗುತ್ತದೆ ಎಂದು ಸಚಿವ ಆರ್​.ಅಶೋಕ್ ತಿಳಿಸಿದ್ದಾರೆ.

Minister R Ashok
ಆರ್​ ಅಶೋಕ್
author img

By

Published : Jan 24, 2021, 5:12 PM IST

ಚಿಕ್ಕಮಗಳೂರು: ಎಲ್ಲಾ ಜಿಲ್ಲಾಧಿಕಾರಿಗಳು ಇನ್ಮುಂದೆ ಹಳ್ಳಿಗಳಿಗೆ ತೆರಳಬೇಕು. ಜನರ ಸಮಸ್ಯೆಗಳನ್ನು ಕೇಳಬೇಕು ಎಂದು ಚಿಕ್ಕಮಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇಲ್ಲಿವರೆಗೂ ಜನ ಸರ್ಕಾರಿ ಕಚೇರಿಗಳಿಗೆ ಅಲೆದು ಅವರ ಚಪ್ಪಲಿ ಸವೆಸುತ್ತಿದ್ದರು. ಇನ್ಮುಂದೆ ಅಧಿಕಾರಿಗಳು ಹಳ್ಳಿಗಳಿಗೆ ತೆರಳಿ ಚಪ್ಪಲಿ ಸವೆಸಲಿ. ಅಧಿಕಾರಿಗಳಿಗೂ ಹಳ್ಳಿಯ ಜೀವನ ಅರ್ಥವಾಗಲಿ. ತಿಂಗಳ ಮೂರನೇ ಶನಿವಾರ ಜಿಲ್ಲಾಧಿಕಾರಿಗಳು ಹಳ್ಳಿಗೆ ತೆರಳಬೇಕು. ಹಳ್ಳಿಗೆ ನಡೆಯಿರಿ, ಹಳ್ಳಿಗಳಲ್ಲಿ ಜಿಲ್ಲಾಧಿಕಾರಿ ನಿಮ್ಮ ಮನೆ ಬಾಗಿಲಿಗೆ ಬರಲಿದ್ದು, ಹಳ್ಳಿ ಕಟ್ಟೆ ಮೇಲೆ ಜಿಲ್ಲಾಧಿಕಾರಿ ಯೋಜನೆ ತರಲಾಗುವುದು. ವೃದ್ಧರಿಗೆ, ಹಿರಿಯರಿಗೆ, ವಿಕಲಚೇತನರಿಗೆ ಮಾಸಾಶನದಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದರು.

ಇಷ್ಟು ದಿನ ಅಂಚೆ ಕಚೇರಿಯ ಮೂಲಕ ಅವರಿಗೆ ಹಣವನ್ನು ಪಾವತಿ ಮಾಡಲಾಗುತ್ತಿತ್ತು. ಆದರೆ ಮುಂದಿನ ದಿನಗಳಲ್ಲಿ ಬ್ಯಾಂಕ್ ಅಕೌಂಟ್​ ಮೂಲಕ ಅವರಿಗೆ ಹಣ ಸಂದಾಯ ಮಾಡಲಾಗುತ್ತದೆ ಎಂದು ಹಳ್ಳಿಗಳ ಅಭಿವೃದ್ಧಿಯ ಕನಸನ್ನು ಸಚಿವ ಆರ್.ಅಶೋಕ್ ಚಿಕ್ಕಮಗಳೂರಿನಲ್ಲಿ ಬಿಚ್ಚಿಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.