ಚಿಕ್ಕಮಗಳೂರು : ಬೆದರಿಕೆ ಕರೆ ಮಾಡುವವರು ಹೇಡಿಗಳು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಕಿಡಿಕಾರಿದರು.
ಉಡುಪಿ ಶಾಸಕ ರಘುಪತಿ ಭಟ್ಗೆ ಬೆದರಿಕೆ ಕರೆ ಬಂದಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಹಿಂದೆಯಿಂದ ಗುದ್ದು ಕೊಡುತ್ತಾರೆ, ತಾಕತ್ತಿದ್ದರೆ ಮುಂದೆ ಬರಲಿ.
ಇಂತಹ ಹೇಡಿಗಳಿಗೆ ನಾವು ಹೆದರಲ್ಲ, ನಮ್ಮ ದೇಶ ಹೇಡಿಗಳಿಗೆ ಬೆಲೆ ಕೊಟ್ಟಿಲ್ಲ. ಈ ರೀತಿಯ ಬೆದರಿಕೆ ಕರೆಗಳು ನನಗೂ ಬಹಳ ಬಂದಿತ್ತು. ಇದನ್ನೆಲ್ಲ ಎದುರಿಸುತ್ತೇವೆ ಅನ್ನೋ ವಿಶ್ವಾಸದಲ್ಲೇ ಈ ಫೀಲ್ಡಿಗೆ ಇಳಿಯಬೇಕು.
ಪೊಲೀಸ್ ಇಲಾಖೆ, ಸಮಾಜ ನಮ್ಮ ಜೊತೆಯಲ್ಲಿದೆ. ಈ ಧೈರ್ಯದ ಮೇಲೆ ನಾವು ಮುಂದೆ ಹೋಗುತ್ತಿದ್ದೇವೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ಪ್ರತಿಕ್ರಿಯೆ ನೀಡಿದರು.