ಚಿಕ್ಕಮಗಳೂರು: ನಿನ್ನೆ ಸಿದ್ದರಾಮಯ್ಯ ಮುನಿರತ್ನ ಕ್ರಿಮಿನಲ್ ಹಿನ್ನೆಲೆಯವರು ಎಂದಿದ್ದಾರೆ. ಎರಡು ಬಾರಿ ಟಿಕೆಟ್ ಕೊಟ್ಟು ಎಂಎಲ್ಎ ಮಾಡಿದ ಪಾರ್ಟಿ ಯಾವುದು?, ಅವರ ಪಕ್ಷದಲ್ಲಿದ್ರೆ ಸಂಭಾವಿತ, ಪಾರ್ಟಿ ಬಿಟ್ರೆ ಕ್ರಿಮಿನಲ್ಲಾ ಎಂದು ಸಚಿವ ಸಿ.ಟಿ.ರವಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ವಿರುದ್ಧ ನಗರದಲ್ಲಿಂದು ಕಿಡಿಕಾರಿದ್ದಾರೆ.
ಡಿ.ಕೆ.ಶಿವಕುಮಾರ್ ಅಣ್ಣಾ. ನಮಗೂ ಅವರು ಅಣ್ಣಾ ಅಂದಿದ್ರು, 2018ರ ಚುನಾವಣೆಯಲ್ಲಿ ಮುನಿರತ್ನ ಇಂದ್ರ, ಚಂದ್ರ, ದೇವೇಂದ್ರ ಎಂದಿದ್ದರು. ಈಗ ಮುನಿರತ್ನ ಪಾರ್ಟಿ ಬಿಟ್ಟ ಕೂಡಲೇ ಬದಲಾಗ್ತಾರಾ?. ಹಳೇ ವಿಡಿಯೋ ತೆಗೆದು ನೋಡಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮುನಿರತ್ನ ಪರ ಮಾಡಿರೋ ಪ್ರಚಾರವನ್ನು ಎಂದರು.
ಡಿ.ಕೆ.ಶಿವಕುಮಾರ್ ಬಾಂಬೆಗೆ ಹೋಗಿದ್ರಲ್ಲಾ ಏನುಕ್ಕೆ ಹೋಗಿದ್ದರು. ಮನವೊಲಿಸಿ ಕರೆತರ್ತೀನಿ ಅಂತ ತಾನೇ, ಹೈಡ್ರಾಮ ಮಾಡಿ ಬಾಂಬೆಯಲ್ಲಿ ನಿಂತಿದ್ದು. ಇವರು ಸರಿ ಇಲ್ಲ ಅನ್ನೋದಾದ್ರೆ ಕರೆತರಲು ಯಾಕೆ ಹೋಗಿದ್ರು. ನಿಮ್ಮನ್ನೆ ಮಂತ್ರಿ ಮಾಡ್ತೀವಿ ಬನ್ನಿ ಎಂದು ಸಿದ್ದರಾಮಯ್ಯ ಯಾಕೆ ಹೇಳಿದ್ರು. ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳಲು ಬಿಜೆಪಿ ಮೇಲೆ ಆರೋಪ ಮಾಡ್ತಿದ್ದಾರೆ ಎಂದು ಚಿಕ್ಕಮಗಳೂರಿನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ವಿರುದ್ಧ ಸಚಿವ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.