ETV Bharat / state

ಶ್ರೀ ಕ್ಷೇತ್ರ ಹೊರನಾಡಿನಲ್ಲಿ ಸಾಮೂಹಿಕ ವಿವಾಹ: ಹಸೆಮಣೆ ಏರಿದ 30 ಜೋಡಿಗಳು

ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ 30 ನವ ಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟಿವೆ.

author img

By

Published : May 17, 2019, 10:06 PM IST

ಶ್ರೀ ಕ್ಷೇತ್ರ ಹೊರನಾಡಿನಲ್ಲಿ ಸಾಮೂಹಿಕ ವಿವಾಹ

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಶ್ರೀ ಹೊರನಾಡು ಅನ್ನಪೂರ್ಣೆಶ್ವರಿ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಬಡವರ ಅನುಕೂಲಕ್ಕಾಗಿ ಉಚಿತ ಸಾಮೂಹಿಕ ವಿವಾಹವನ್ನು ನಡೆಸಿಕೊಂಡು ಬರಲಾಗುತ್ತಿದೆ. ಇದರ ಅಂಗವಾಗಿ ಕ್ಷೇತ್ರದ ಧರ್ಮಕರ್ತ ಶ್ರೀ ಭೀಮೇಶ್ವರ ಜೋಷಿ ಅವರ ನೇತೃತ್ವದಲ್ಲಿ ಸರಳ ಸಾಮೂಹಿಕ ವಿವಾಹ ನಡೆಸಲಾಯಿತು.

ಶ್ರೀ ಕ್ಷೇತ್ರ ಹೊರನಾಡಿನಲ್ಲಿ ಸಾಮೂಹಿಕ ವಿವಾಹ

ಇಲ್ಲಿಯವರೆಗೂ ಒಂದು ಸಾವಿರಕ್ಕೂ ಅಧಿಕ ಉಚಿತ ಸಾಮೂಹಿಕ ವಿವಾಹಗಳು ನಡೆದಿರೋದು ಈ ಕ್ಷೇತ್ರದ ಮತ್ತೊಂದು ವಿಶೇಷವಾಗಿದೆ. ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳ ಸುಮಾರು 30 ಜೋಡಿಗಳು ನವ ಜೀವನಕ್ಕೆ ಕಾಲಿಟ್ಟರು.

ಈ ಕಾರ್ಯಕ್ರಮದ ನಡುವೆಯೇ ಬಡವರಿಗೆ ಅನೂಕೂಲವಾಗಲೆಂದು ಗ್ರಾಮೀಣ ಅಭಿವೃದ್ಧಿ ಯೋಜನೆಯಡಿಯಲ್ಲಿ ನೂರು ಮನೆಗಳಿಗೆ ಉಚಿತ ಹೆಂಚು ವಿತರಣೆ, ಐವತ್ತು ಮನೆಗಳಿಗೆ ಉಚಿತ ವಿದ್ಯುತ್, ನೂರು ಜನ ರೈತರಿಗೆ ಕೃಷಿ ಉಪಕರಣಗಳ ವಿತರಣೆ ಮತ್ತು ವಿವಿಧ ಕಾರ್ಯಕ್ರಮಗಳಿಗೆ ಎರಡು ಸಾವಿರ ತಟ್ಟೆಗಳನ್ನು ವಿತರಣೆ ಮಾಡಲಾಯಿತು.

ಹೊರನಾಡು ಕ್ಷೇತ್ರದ ಧರ್ಮಕರ್ತರ ಪೂರ್ವಿಕರ ಕಾಲದಿಂದಲೂ ಈ ರೀತಿಯ ಕೆಲಸ ಮಾಡುತ್ತಿದ್ದು, ದೇವಸ್ಥಾನಕ್ಕೆ ಬರುವ ಸಂಪನ್ಮೂಲಗಳು ಬಡವರಿಗೆ ಉಪಯೋಗ ಆಗಲಿ ಎಂಬ ಉದ್ದೇಶದಿಂದ ಇಂತಹ ಕಾರ್ಯಗಳನ್ನ ಮುಂದುವರೆಸಿಕೊಂಡು ಬಂದಿದ್ದಾರೆ.

Intro:R_Kn_Ckm_04_17_Mass marriege_Rajkumar_Ckm_pkg_7202347Body:

ಚಿಕ್ಕಮಗಳೂರು :-

ನಾವು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡುವುದನ್ನು ನೋಡಿರ್ತಿವಿ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಕೋಟ್ಯಾಂತರ ರೂಪಾಯನ್ನು ವ್ಯಯ ಮಾಡಿ ಮಾದುವೆ ಆಗಿರೋರನ್ನು ಕಂಡಿದ್ದೇವೆ. ಆದರೇ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಶ್ರೀ ಕ್ಷೇತ್ರದ ಧರ್ಮಕರ್ತರ ನೇತೃತ್ವದಲ್ಲಿ 30 ನವ ಜೋಡಿ ಸರಳ ಸಾಮೂಹಿಕವಾಗಿ ಉಚಿತ ‌ಮದುವೆ ಹಾಗೂ ಗ್ರಾಮೀಣ ಅಭಿವೃದ್ದಿ ಯೋಜನೆಯಡಿ ವಿವಿಧ ಜನರಿಗೆ ಅನುಕೂಲ ಮಾಡಿಕೊಟ್ಟು, ಬಡವರ ಪಾಲಿಗೆ ಬೆಳಕು ಆಗುವಂತಹ ಕೆಲಸ ಮಾಡಿರುವ ಕುರಿತು ಒಂದು ವರದಿ ಇಲ್ಲಿದೇ ನೋಡಿ.......

ಹೌದು ಒಂದೆಡೆ ಅಲಂಕಾರವಾಗಿ ನವ ಜೀವನಕ್ಕೆ ಕಾಲಿಡಲು ಕೂತಿರುವ 30 ನವ ಜೋಡಿಗಳು. ಮತ್ತೊಂದೆಡೆ ಮಂತ್ರ ವಾದ್ಯಗಳ ಘೋಷಣೆ. ಇನ್ನೊಂದೆಡೆ ಕೂಡಿ ಬಾಳುವ ಪ್ರತಿಜ್ಞೆ ಮಾಡುವ ಮೂಲಕ ನವ ಜೀವನಕ್ಕೆ ಕಾಲಿಟ್ಟ ವಧು, ವರರು. ಹೌದು ಈ ದೃಶ್ಯ ಕಂಡು ಬಂದಿದ್ದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಶ್ರೀ ಹೊರನಾಡು ಅನ್ನಪೂರ್ಣೆಶ್ವರಿ ಕ್ಷೇತ್ರದಲ್ಲಿ. ಕಳೆದ ಅನೇಕ ವರ್ಷಗಳಿಂದ ಈ ಕ್ಷೇತ್ರದಲ್ಲಿ ಬಡವರಿಗೆ ಅನುಕೂಲ ಆಗಲಿ ಎಂಬ ನಿಟ್ಟಿನಲ್ಲಿ ಉಚಿತ ಸಾಮೂಹಿಕ ವಿವಾಹವನ್ನು ನೆಡೆಸಿಕೊಂಡು ಬರಲಾಗುತ್ತಿದೆ. ಇದರ ಅಂಗವಾಗಿ ಕ್ಷೇತ್ರದ ಧರ್ಮಕರ್ತ ಶ್ರೀ ಭೀಮೇಶ್ವರ ಜೋಷಿ ಅವರ ನೇತೃತ್ವದಲ್ಲಿ ಸರಳ ಸಾಮೂಹಿಕ ಮದುವೆ ಮಾಡಲಾಯಿತು. ಮದುವೆ ಆಗಲೂ ಆಗಮಿಸಿದ ವಧು ವರರಿಗೆ ಕ್ಷೇತ್ರದ ವತಿಯಿಂದಾ ತಾಳಿ, ಸೀರೆ, ಮತ್ತು ಬಟ್ಟೆಗಳನ್ನು ವಿತರಣೆ ಮಾಡುವುದರ ಮೂಲಕ ಪೋಷಕರು ಮತ್ತು ಸಂಭಧಿಕರ ಸಮ್ಮುಖದಲ್ಲಿ ತುಂಬಾ ಸರಳವಾಗಿ ಸಾಮೂಹಿಕ ವಿವಾಹ ನೆರೆವೇರಿದ್ದು ಈ ಕಾರ್ಯಕ್ರಕ್ಕೆ ಸಾವಿರಾರೂ ಭಕ್ತಾಧಿಗಳು ಸಾಕ್ಷಿಯಾದರು.ಇಲ್ಲಿಯ ವರೆಗೂ ಕ್ಷೇತ್ರದಲ್ಲಿ ಒಂದು ಸಾವಿರಕ್ಕೂ ಅಧಿಕ ಉಚಿತ ಸಾಮೂಹಿಕ ವಿವಾಹ ಈ ಕ್ಷೇತ್ರದಲ್ಲಿ ನಡೆದಿರೋದು ಮತ್ತೋಂದು ವಿಶೇಷವಾಗಿದೆ.

ಇನ್ನು ಸಾಮೂಹಿಕ ವಿವಾಹದಲ್ಲಿ ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಜಿಲ್ಲೆಯ ಹೊರ ಭಾಗದಿಂದಾ ಸುಮಾರು 30 ಜೋಡಿಗಳ ನವ ಜೀವನಕ್ಕೆ ಕ್ಷೇತ್ರದಲ್ಲಿ ಕಾಲಿಟ್ಟರು. ಸಾಮೂಹಿಕ ವಿವಾಹಕ್ಕೆ ವಿವಿಧ ಗಣ್ಯರು ಸಾಕ್ಷಿಯಾದರು.ಈ ಕಾರ್ಯಕ್ರಮದ ನಡುವೆಯೇ ಬಡವರಿಗೆ ಅನೂಕೂಲ ಆಗಲೆಂದೂ ಗ್ರಾಮೀಣ ಅಭಿವೃದ್ದಿ ಯೋಜನೆಯಡಿಯಲ್ಲಿ ನೂರು ಮನೆಗಳಿಗೆ ಉಚಿತ ಹಂಚು ವಿತರಣೆ, ಐವತ್ತೂ ಮನೆಗಳಿಗೆ ಉಚಿತ ವಿದ್ಯುತ್, ನೂರು ಜನ ರೈತರಿಗೆ ಕೃಷಿ ಉಪಕರಣಗಳ ವಿತರಣೆ, ಮತ್ತು ವಿವಿಧ ಕಾರ್ಯಕ್ರಮಗಳಿಗೆ ಎರಡೂ ಸಾವಿರ ತಟ್ಟೆಗಳನ್ನು ವಿತರಣೆ ಮಾಡಲಾಯಿತು. ಇದರಿಂದ ಬಡವರಿಗೆ ಅನುಕೂಲ ಆಗಲಿದ್ದು ಎಲ್ಲರಿಗೂ ಮಂಗಳ ಪ್ರಾಪ್ತ ಆಗಲಿದ್ದು ಈ ರೀತಿಯಾ ಕೆಲಸ ಮಾಡುವುದರ ಮೂಲಕ ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಕ್ಷೇತ್ರ ತೊಡಗಿಸಿಕೊಂಡಿದೆ ಎಂದೂ ಧರ್ಮಕರ್ತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.....

ಒಟ್ಟಾರೆಯಾಗಿ ಹೊರನಾಡು ಕ್ಷೇತ್ರದ ಧರ್ಮಕರ್ತರ ಪೂರ್ವಿಕರ ಕಾಲದಿಂದಲೂ ಈ ರೀತಿಯಾ ಕೆಲಸ ಮಾಡುತ್ತಿದ್ದು ದೇವಸ್ಥಾನಕ್ಕೆ ಬರುವಂತಹ ಸಂಪನ್ಮೂಲಗಳು ಬಡವರಿಗೆ ಉಪಯೋಗ ಆಗಲಿ. ಬಡವರಿಗೆ ಹಣ ಉಳಿಯುತ್ತದೆ. ಉಳಿದ ಹಣದಿಂದಾ ಜೀವನ ನಡೆಸಲು ಸಹಕಾರಿ ಆಗುತ್ತೆ. ಸಣ್ಣ ಮಟ್ಟದಲ್ಲಿ ಆದರೂ ತುಂಬಾ ಶಾಸ್ತ್ರೋಕ್ತವಾಗಿ ಈ ವಿವಾಹ ಮಹೋತ್ಸವ ನರೆವೇರಿದ್ದು ಇಂದೂ ಮದುವೆಯಾದ ಎಲ್ಲಾ ಜೋಡಿಗಳು ಜೀವನ ಪರ್ಯಂತ ಸಂತೋಷದಿಂದಾ ಜೀವನ ಮಾಡಲಿ ಎಂದೂ ಬಂದಿದ್ದಂತಹ ಸಾರ್ವಜನಿಕರು ನೂತನ ವಧು ವರರಿಗೆ ಆಶೀರ್ವಾದ ಮಾಡಿದರು......

byte:-1 ಡಾ. ಭೀಮೇಶ್ವರ ಜೋಷಿ,,,,,,ಕ್ಷೇತ್ರದ ಧರ್ಮಕರ್ತರು

byte:-2 ರಾಜ ಲಕ್ಷ್ಮಿ ಜೋಷಿ,,,,ಧರ್ಮಕರ್ತರ ಧರ್ಮಪತ್ನಿ.

Conclusion:ರಾಜಕುಮಾರ್,,,,,,
ಈ ಟಿವಿ ಭಾರತ್,,,,,,,
ಚಿಕ್ಕಮಗಳೂರು..........

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.