ಚಿಕ್ಕಮಗಳೂರು: ಕುಟುಂಬದೊಂದಿಗೆ ಬೈಕ್ನಲ್ಲಿ ತೆರಳುವಾಗ ಬೈಕ್ಗೆ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಪತ್ನಿ ಹಾಗೂ ಮಗು ಗಾಯಗೊಂಡಿರುವ ಘಟನೆ ಎನ್ಆರ್ಪುರ ತಾಲೂಕಿನ ಮಡಬೂರು ಬಳಿ ನಡೆದಿದೆ.
ಹಂತುವಾನಿ ಗ್ರಾಮದ ಶಾಂತರಾಜ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಪತ್ನಿ ಸಂಧ್ಯಾ ಎಂಬಾಕೆಯ ಕಾಲು ಮುರಿದಿದೆ. ಆಕೆಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಎನ್ಆರ್ ಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮಮತಾ ಮೇಲೆ ದಾಳಿ ಪ್ರಕರಣ: ಚುನಾವಣಾ ಆಯೋಗದಿಂದ ವಿಡಿಯೋ ರಿಲೀಸ್!