ETV Bharat / state

ಪ್ರೇಮ ವೈಫಲ್ಯದಿಂದ ಮನನೊಂದು ನೇಣಿಗೆ ಶರಣಾದ ಯುವಕ - ಚಿಕ್ಕಮಗಳೂರು ನೇಣಿಗೆ ಶರಣಾದ ಯುವಕ ನ್ಯೂಸ್​

ಪ್ರೇಮ ವೈಫಲ್ಯದಿಂದ ಮನನೊಂದು ಯುವಕನೊಬ್ಬ ನೇಣಿಗೆ ಶರಣಾಗಿರುವ ಘಟನೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದಿದೆ.

ನೇಣಿಗೆ ಶರಣಾದ ಯುವಕ
author img

By

Published : Nov 23, 2019, 4:12 PM IST

Updated : Nov 23, 2019, 11:07 PM IST

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಬಸರಿಕಟ್ಟೆಯ ಯುವಕ ಪ್ರೇಮ ವೈಫಲ್ಯದಿಂದ ನೇಣಿಗೆ ಶರಣಾಗಿದ್ದಾನೆ. ಆತ್ಮಹತ್ಯೆ ಮಾಡಿಕೊಂಡಿರುವ ಯುವಕನನ್ನು ಸತೀಶ್​ ಎಂದು ಗುರುತಿಸಲಾಗಿದೆ.

ಮನನೊಂದು ನೇಣಿಗೆ ಶರಣಾದ ಯುವಕ

ಈತ ಹಾಗೂ ಮೂಡಿಗೆರೆ ತಾಲೂಕಿನ ಹಿರೈಬೈಲಿನ ಯುವತಿ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಇವರ ಪ್ರೇಮದಲ್ಲಿ ಬಿರುಕು ಕಾಣಿಸಿಕೊಂಡಿತ್ತು ಎನ್ನಲಾಗಿದೆ.

ಆ ಯುವತಿಯನ್ನು ಈತನೇ ನರ್ಸಿಂಗ್​ ಓದಿಸಿದ್ದು ಆಕೆಗೆ ಕೆಲಸವೂ ಸಿಕ್ಕಿತ್ತು. ಇದಾದ ಬಳಿಕ ಆಕೆ ಸತೀಶ್​ಗೆ ಸರ್ಕಾರಿ ಕೆಲಸ ಪಡೆಯುವಂತೆ ಹೇಳುತ್ತಿದ್ದಳು. ಆದರೆ ಕಡಿಮೆ ಓದಿದ್ದ ಸತೀಶ್​ಗೆ ಸರ್ಕಾರಿ ಕೆಲಸ ಸಿಕ್ಕಿರಲಿಲ್ಲ. ಈ ವಿಚಾರವಾಗಿ ಇಬ್ಬರ ಮಧ್ಯೆ ಹಲವು ಬಾರಿ ಜಗಳವಾಗಿತ್ತು. ನಂತರ ಆಕೆಯ ಫೋನ್​ ಸ್ವಿಚ್ಡ್​​​​​ ಆಫ್​ ಆಗಿತ್ತು. ಇದರಿಂದ ಮನನೊಂದ ಸತೀಶ್​ ಸಂಬಂಧಿಕರ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಸತೀಶ್ ಸಾಯುವ ಮುನ್ನ ಮೊಬೈಲ್​ನಲ್ಲಿ ನನ್ನ ಸಾವಿಗೆ ಈಕೆಯೇ ಕಾರಣ ಎಂದೂ ಬರೆದುಕೊಂಡಿದ್ದು ಈಕೆಗೆ ತಕ್ಕ ಶಿಕ್ಷೆ ಆಗಬೇಕು ಎಂದು ಯುವಕನ ಮನೆಯವರು ಆಗ್ರಹಿಸಿದ್ದಾರೆ.

Intro:Kn_Ckm_03_Lover_suciede_pkg_7202347Body:ಚಿಕ್ಕಮಗಳೂರು :-

ಅವರದ್ದು ಹಲವು ವರ್ಷಗಳ ಪ್ರೀತಿ.ಆತನಿಗೆ ಆಕೆಯೇ ಜೀವ.ಅವರದ್ದೇ ಪ್ರೇಮಲೋಕ. ಜಗತ್ತಿನಲ್ಲಿ ಎಲ್ಲವನ್ನೂ ಮರೆತು ಪ್ರೀತಿಯ ಪ್ರಯಾಣ ಮಾಡುತ್ತಿದ್ದರು.ಪ್ರೇಯಸಿ ಇದು ಬೇಕು ಅಂದರೇ ತಡ ಮಾಡದೇ ಕೊಡಿಸುತ್ತಿದ್ದ. ಆಕೆಯ ಭವಿಷ್ಯಕ್ಕಾಗಿ ಭವಿಷ್ಯಕ್ಕಾಗಿ ನರ್ಸಿಂಗ್ ಕೂಡ ಮಾಡಿಸಿದ್ದ. ಆದರೇ ಕೆಲವು ಕಾರಣಗಳು ಪ್ರೀತಿಯಲ್ಲಿ ಬಿರುಕು ಮೂಡೋದಕ್ಕೆ ಪ್ರಾರಂಭ ಮಾಡಿ ಇಬ್ಬರ ಮಧ್ಯೆ ಅಂತರ ಹೆಚ್ಚಾಗಿದೆ.ಪ್ರೇಯಸಿಯ ಪ್ರೀತಿ ಉಳಿಸಿಕೊಳ್ಳಲು ಆಗದೇ ಆ ಪ್ರೀಯತಮ್ಮ ಮಾಡಿದ ಕೆಲಸ ಆದರೂ ಏನು ಗೊತ್ತಾ.ಈ ಕುರಿತ ಒಂದು ವರದಿ ಇಲ್ಲಿದೇ ನೋಡಿ.....

ಹೌದು ಈ ಡೆತ್ ನೋಡಿದರೇ ಯಾರ ಕರಳು ಆದರೂ ಹಿಂಡಿ ಬರುತ್ತದೆ.ಈ ಡೆತ್ ನೋಟ್ ಹಿಂದೇ ಇದರ ಹಿಂದೆ ಬಡತನದ ಕಣ್ಣೀರ ಕಥೆಯಿದೆ. ಆಸೆ ಪಟ್ಟಿದ್ದು ಸಿಗದಿದ್ದಾಗ.ಅಂದುಕೊಂಡಿದ್ದು ಆಗಾಗಿದ್ದಾಗ, ಗುರಿ ಮುಟ್ಟಾದಿದ್ದಾಗ ನಂಬಿದವರು ಅರ್ಧದಲ್ಲಿಯೇ ಕೈ ಬಿಟ್ಟು ಹೋದಾಗ ಆತ್ಮಹತ್ಯೆಗೆ ಶರಣಾಗೋದು ಇವತ್ತಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಆದರೇ ಪ್ರೇಮಿಸಿದ ಹುಡುಗಿಯನ್ನು ನೋಡಲು ಹೋದಾಗಲೇ ಜೊತೆಯಲ್ಲಿ ಡೆತ್ ನೋಟ್ ಬರೆದುಕೊಂಡು ಹೋಗಿದ್ದಾನೆ ಅಂದರೇ ಅವನ ಮನಸ್ಸಿಗೆ ಎಷ್ಟು ನೋವಾಗಿರಬಹುದು ಎಂದೂ ಊಹಿಸಿಕೊಳ್ಳುವುದು ಅಸಾಧ್ಯ.ಈತನ ಹೆಸರು ಸತೀಶ್ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬಸರಿಕಟ್ಟೆ ನಿವಾಸಿ. ಮನೆಯಲ್ಲಿ ಬಡತನ ಇದ್ದರೂ ದುಡಿದು ತಿನ್ನುವ ಹಠಗಾರ. ಇತರರಂತೆ ನಾನು ಉತ್ತಮ ಜೀವನ ಮಾಡಬೇಕು ಜೀವನದಲ್ಲಿ ಮೇಲು ಬರಬೇಕು ಎಂದೂ ಸಾಲ ಸೋಲ ಮಾಡಿ ಆಟೋ, ಕಾರು ಮಾಡಿ ಹಗಲು ರಾತ್ರಿ ದುಡಿದು ಸುಂದರ ಜೀವನ ನಡೆಸುತ್ತಿದ್ದ. ಮೂಡಿಗೆರೆ ತಾಲೂಕಿನ ಹಿರೈಬೈಲಿನಲ್ಲಿ ಕೆಲ ವರ್ಷಗಳ ಹಿಂದೇ ಹೋದಾಗ ಪಲ್ಲವಿ ಎಂಬ ಹುಡುಗಿ ಜೊತೆ ಸ್ನೇಹವಾಗಿ ದಿನ ಕಳೆದಂತೆ ಪ್ರೀತಿಗೆ ತಿರುಗಿದೆ.ಮುಂದಿನ ಜೀವನ ಸು:ಖಕರವಾಗಿರಲಿ ಎಂದೂ ಆಕೆಗೆ ನರ್ಸಿಂಗ್ ಕೂಡ ಮಾಡಿಸಿದ್ದಾನೆ.ಈ ಮಧ್ಯೆ ಎರಡೂ ದೇಹ ಒಂದೇ ಜೀವ ಎನ್ನುತ್ತಿದ್ದವರ ಮಧ್ಯೆ ಬಿರುಕು ಮೂಡಿ ಇಬ್ಬರನ್ನೂ ದೂರ ಮಾಡಿತ್ತು.

ದಿನ ಕಳೆದಂತೆ ಪಲ್ಲವಿ ಪೋನ್ ಸ್ವೀಚ್ ಆಪ್ ಆಗುತ್ತಿತ್ತು. ಇಲ್ಲ ನೆಟ್ ವರ್ಕ್ ಪ್ರದೇಶದಿಂದಾ ಹೊರಗಿದ್ದಾರೆ ಎಂಬ ಸಂದೇಶ ಬರುತ್ತಿತ್ತು.ಇತ್ತ ಪಲ್ಲವಿಗೆ ನರ್ಸಿಂಗ್ ಮುಗಿಸದ ಮೇಲೆ ಕೆಲಸವೂ ಆಗಿತ್ತು. ಇತ್ತು ನೀನು ಒಂದು ಸರ್ಕಾರಿ ಉದ್ಯೋಗ ತೆಗೆದುಕೋ ಎಂದೂ ಹೇಳುತ್ತಿದ್ದಳಂತೆ ಪಲ್ಲವಿ. ಪ್ರೌಡಶಾಲೆಯಲ್ಲಿಯೇ ಓದು ನಿಲ್ಲಿಸಿದ್ದ ಸತೀಶನಿಗೆ ಸರ್ಕಾರಿ ಕೆಲಸ ಸಿಗೋದಾದರೂ ಹೇಗೆ ಅಲ್ವಾ. ಈ ವಿಚಾರವಾಗಿ ಹಲವಾರು ಬಾರೀ ಇವರ ಮಧ್ಯೆ ಜಗಳವೂ ಆಗಿದೆ.ಕೊನೆಯಾದಾಗಿ ಆಕೆ ಮನೆಗೆ ಬಂದಾಗ ಎಲ್ಲವನ್ನೂ ಮಾತನಾಡಿ ಸರಿ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾನೆ. ಯಾವುದೂ ಸರಿ ಆಗೋಲ್ಲ ಎಂದೂ ತಿಳಿದ ಸತೀಶ್ ಡೆತ್ ನೋಟ್ ನೋಂದಿಗೆ ತಮ್ಮ ಸಂಭಧಿಕರ ಮನೆಯಲ್ಲಿ ನೇಣಿಗೆ ಶರಣಾಗಿ ಹೋಗಿದ್ದಾನೆ. ಸತೀಶ್ ಸಾಯುವ ಮುನ್ನು ಮೊಬೈಲ್ ನಲ್ಲಿಯೂ ನನ್ನ ಸಾವಿಗೆ ಈಕೆಯೇ ಕಾರಣ ಎಂದೂ ಬರೆದುಕೊಂಡಿದ್ದು ಈಕೆಗೇ ತಕ್ಕ ಶಿಕ್ಷೆ ಆಗಬೇಕು ಎಂದೂ ಮನವಿ ಮಾಡಿ ತನ್ನ ಜೀವನದ ಪ್ರಯಾಣವನ್ನು ಮುಗಿಸಿದ್ದಾನೆ.

ಒಟ್ಟಾರೆಯಾಗಿ ಇವರಿಬ್ಬರದ್ದೂ ಪ್ರೀತಿಯೋ,ಪ್ರೇಮಾವೋ,ಅಥವಾ ಆಕರ್ಷಣೆಯೋ ಆ ದೇವರಿಗೆ ಗೊತ್ತು. ಇಲ್ಲಿ ಯಾರೂ ಯಾರಿಗೇ ಮೋಸ ಮಾಡಿದ್ದಾರೋ ಆ ದೇವರೇ ಬಲ್ಲ. ಪ್ರೀತಿ ಪ್ರೇಮ ಅಂತಾ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದು ಮಾತ್ರ ನಿಜಕ್ಕೂ ದುರಂತ ಕಥೆ.ಹುಚ್ಚು ಪ್ರೀತಿ ಏನು ಬೇಕಾದರೂ ಮಾಡುತ್ತೇ ಎಂಬುದಕ್ಕೆ ಇದೊಂದು ಉತ್ತಮವಾದ ನಿದರ್ಶನ ಎಂದರೇ ತಪ್ಪಾಗಲಾರದು.....

byte:-1 ರಾಜಣ್ಣ........ ಸತೀಶ್ ಸೋದರ ಮಾವ (ಬಾಕ್ಸ್ ಶರ್ಟ್ ಹಾಕಿರುವ ವ್ಯಕ್ತಿ)

byte:-2 ಕುಮಾರ್, ಸ್ನೇಹಿತ

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು......
Last Updated : Nov 23, 2019, 11:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.