ಚಿಕ್ಕಮಗಳೂರು: ಕೋವಿಡ್-19 ವೈರಸ್ ತಡೆಗಟ್ಟಲು ಪ್ರಧಾನಿ ಮೋದಿ ಅವರು ಎರಡನೇ ಹಂತದ ಲಾಕ್ಡೌನ್ಅನ್ನು ಮೇ 3ರವರೆಗೂ ವಿಸ್ತರಿಸಿರುವುದು ಅನಿವಾರ್ಯ ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ ಹೇಳಿದ್ದಾರೆ.
ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಲು, ಕೋವಿಡ್-19 ಸೋಂಕನ್ನು ಹತೋಟಿಗೆ ತರಲು ಈ ಕ್ರಮ ತೆಗೆದುಕೊಳ್ಳಬೇಕಾಗಿದೆ. ಆದರೆ ಈ ಸಂದರ್ಭದಲ್ಲಿ ಕಾರ್ಮಿಕರಿಗೆ, ಕೂಲಿ ಮಾಡೋರಿಗೆ, ಯಾವುದೇ ರೀತಿಯ ತೊಂದರೆ ಆಗದಂತಹ ಕ್ರಮ ತೆಗೆದುಕೊಳ್ಳಬೇಕಿದೆ. ಅವರ ಜೀವನ ನಿರ್ವಹಣೆಗೆ ಕ್ರಮ ತೆಗೆದುಕೊಂಡು, ಅವರ ಆರ್ಥಿಕ ಜೀವನಕ್ಕೆ ಮಾರ್ಗೋಪಾಯವನ್ನು ಸರ್ಕಾರ ತೆಗೆದುಕೊಳ್ಳಬೇಕು.
ನಮ್ಮ ರಕ್ಷಣೆಗೆ ನಾವೇ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ನಾಲ್ಕು ಜನರಿಗೆ ತಿಳುವಳಿಕೆ ಹೇಳುವ ಪ್ರಯತ್ನ ಸಹ ಎಲ್ಲರೂ ಮಾಡಬೇಕು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿವಿಧ ಪ್ರಮಖ ಮುಖಂಡರು ಹಾಗೂ ಚಿಂತಕರು ಸೇರಿ ಕೋವಿಡ್-19 ಹತೋಟಿಗೆ ತರಲು ಚರ್ಚೆ ಮಾಡಲಾಗಿದ್ದು, ತಮ್ಮದೇ ಆದಂತಹ ಸಲಹೆ ಸೂಚನೆ ನೀಡಿದ್ದಾರೆ. ಕೋವಿಡ್-19 ತಡೆಗಟ್ಟಲು ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಉತ್ತಮ ಕೆಲಸ ಮಾಡುತ್ತಿದೆಯೆಂದು ಅವರನ್ನು ಶ್ಲಾಘಿಸಿದರು.