ETV Bharat / state

ಮಹಿಳಾ ಕಾನ್ಸ್​ಟೆಬಲ್​ ವರ್ಗಾವಣೆ ನಾನು ಮಾಡಿಸಿಲ್ಲ: ಕಡೂರು ಶಾಸಕ ಆನಂದ್​ ಸ್ಪಷ್ಟನೆ - kadur ady constable transfer issue

ವರ್ಗಾವಣೆ ಸಂಬಂಧ ಆಕ್ರೋಶ ವ್ಯಕ್ತಪಡಿಸಿ ಮಹಿಳಾ ಕಾನ್ಸ್​​​ಟೆಬಲ್​ವೊಬ್ಬರು ತಮ್ಮ ಮೇಲೆ ವಾಟ್ಸ್​ಆ್ಯಪ್ ಸ್ಟೇಟಸ್​ ಮೂಲಕ ಮಾಡಿದ್ದ ಆರೋಪವನ್ನು ಕಡೂರು ಶಾಸಕ ಆನಂದ್ ಅಲ್ಲಗಳೆದಿದ್ದಾರೆ.

Etv Bharatkadur-mla-anand-reaction-lady-constable-transfer-allegations
ಮಹಿಳಾ ಕಾನ್ಸ್​ಟೆಬಲ್​ ವರ್ಗಾವಣೆ ನಾನು ಮಾಡಿಸಿಲ್ಲ: ಕಡೂರು ಶಾಸಕ ಆನಂದ್​ ಸ್ಪಷ್ಟನೆ
author img

By

Published : Aug 13, 2023, 9:59 AM IST

ಮಹಿಳಾ ಕಾನ್ಸ್​ಟೆಬಲ್​ ವರ್ಗಾವಣೆ ಆರೋಪದ ಬಗ್ಗೆ ಶಾಸಕ ಆನಂದ್​ ಸ್ಪಷ್ಟನೆ

ಚಿಕ್ಕಮಗಳೂರು: ಮಹಿಳಾ ಕಾನ್ಸ್​ಟೆಬಲ್​ ವರ್ಗಾವಣೆ ವಿಚಾರ ಸಂಬಂಧ ತಮ್ಮ ಮೇಲಿನ ಆರೋಪದ ಬಗ್ಗೆ ಕಡೂರು ಶಾಸಕ ಆನಂದ್ ಸ್ಪಷ್ಟನೆ ನೀಡಿದ್ದಾರೆ. ತಾವು ಯಾರನ್ನೂ ಕೂಡ ದುರುದ್ದೇಶಪೂರ್ವಕವಾಗಿ ವರ್ಗಾವಣೆ ಮಾಡಿಸಿಲ್ಲ. ಮಹಿಳಾ ಕಾನ್ಸ್​ಟೆಬಲ್​ ಯಾರೆಂಬುದೂ ತಮಗೆ ಗೊತ್ತಿಲ್ಲ. ಪೊಲೀಸ್​ ಇಲಾಖೆಯಲ್ಲಿ ವರ್ಗಾವಣೆ ಸಹಜ ಪ್ರಕ್ರಿಯೆ ಎಂದು ಶಾಸಕರು ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಕೆಲ ದಿನಗಳ ಹಿಂದೆ ಮಹಿಳಾ ಕಾನ್ಸ್​ಟೆಬಲ್​ವೊಬ್ಬರು ನಮ್ಮ ಮನೆಗೆ ಬಂದು ನನ್ನನ್ನು ಯಾಕೆ ವರ್ಗಾವಣೆ ಮಾಡಿದ್ದೀರಾ. ಯಾಕೆ ಟ್ರಾನ್ಸ್​ಫರ್​ ಮಾಡಿಸಿದ್ದೀರಾ ಎಂದು ಏರುಧ್ವನಿಯಲ್ಲಿ ಕೇಳಿದರು. ಆಗ ನಾನು ಸೌಜನ್ಯದಿಂದಲೇ ಪ್ರತಿಕ್ರಿಯಿಸಿದ್ದು, ಈ ವಿಚಾರ ನನಗೆ ಗೊತ್ತಿಲ್ಲ. ನಿಮ್ಮ ಹೆಸರೂ ನನಗೆ ತಿಳಿದಿಲ್ಲ. ಹೀಗಿರುವಾಗ ನಾನು ಹೇಗೆ ವರ್ಗಾವಣೆ ಮಾಡಿಸಲಿ. ನಾನು ಪತ್ರ ಕೊಟ್ಟಿದ್ರೆ, ಅದನ್ನು ತೆಗೆದುಕೊಂಡು ಬನ್ನಿ, ರದ್ದುಪಡಿಸಿಕೊಡುತ್ತೇನೆ. ಎಸ್​ಪಿ ಅವರು ವರ್ಗಾವಣೆ ಮಾಡಿರಬಹುದು ಎಂದು ಹೇಳಿ ಕಳಿಸಿದ್ದೆ'' ಎಂದಿದ್ದಾರೆ.

''ಇದಾದ ಬಳಿಕ ಮಹಿಳಾ ಕಾನ್ಸ್​ಟೆಬಲ್​​ವೊಬ್ಬರು ನನ್ನ ಬಗ್ಗೆ ವಾಟ್ಸ್​ಆ್ಯಪ್ ಸ್ಟೇಟಸ್​ನಲ್ಲಿ ಹಾಕಿಕೊಂಡಿರುವ ಬಗ್ಗೆ ಹಲವರು ನನಗೆ ಕರೆ ಮಾಡಿ ತಿಳಿಸಿದರು. ಕಡೂರು ಎಂಎಲ್​ಗೆ ಧಿಕ್ಕಾರ, ನನಗೇನಾದರೂ ಆದರೆ ಕಡೂರು ಎಂಎಲ್​ಎನೇ ಕಾರಣ ಎಂದೆಲ್ಲ ಸ್ಟೇಟಸ್​ ಹಾಕಿಕೊಂಡ ಬಗ್ಗೆ ಮಾಹಿತಿ ತಿಳಿಯಿತು. ಈ ಬಗ್ಗೆ ಪಿಎಸ್​ಐಗೆ ವಿಚಾರಿಸಿದಾಗ ಮಹಿಳಾ ಕಾನ್ಸ್​ಟೆಬಲ್ ಲತಾ ಕಡೂರು ಠಾಣೆಯಿಂದ ತರೀಕೆರೆಗೆ ವರ್ಗಾವಣೆ ಆಗಿ ಒಂದು ತಿಂಗಳಾಗಿದೆ. ಆದರೆ ರಿಲೀವ್​ ಆಗಿಲ್ಲ ಎಂಬ ವಿಚಾರ ಗೊತ್ತಾಯಿತು. ಜೊತೆಗೆ ನನ್ನ ಮನೆಯಿಂದ ತೆರಳಿದ ಬಳಿಕ ಠಾಣೆಗೆ ಬಂದು ಕೆಟ್ಟದಾಗಿ ವರ್ತಿಸಿರುವ ಬಗ್ಗೆಯೂ ತಿಳಿಸಿದರು. ವರ್ತನೆ ಬಗ್ಗೆ ಕ್ಷಮೆ ಇರಲಿ, ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗುವುದೆಂದು ಪಿಎಸ್​ಐ ಮಾಹಿತಿ ನೀಡಿದರು'' ಎಂದು ಶಾಸಕ ಆನಂದ್​ ಹೇಳಿದರು.

''ಪೊಲೀಸ್​ ಇಲಾಖೆಯಲ್ಲಿ ಹಲವರು ವರ್ಗಾವಣೆ ಸಂಬಂಧ ನನ್ನ ಬಳಿ ಬಂದು ಪತ್ರ ತೆಗೆದುಕೊಂಡು ಹೋಗಿದ್ದಾರೆ. ಆದರೆ ನಾನು ಯಾರಿಗೂ ಕೂಡ ಠಾಣೆಯಿಂದ ತೆಗೆಯಿರಿ ಎಂದು ಪತ್ರ ಕೊಟ್ಟಿಲ್ಲ, ಅಂತಹ ದುರುದ್ದೇಶ ನನಗಿಲ್ಲ. ಕಾನ್ಸ್​ಟೆಬಲ್​ ಲತಾ ವಿಚಾರದಲ್ಲಿ ನಾನು ಯಾವುದೇ ಪತ್ರ ನೀಡಿಲ್ಲ. ಅವರು ನನ್ನ ಮನೆಗೆ ಬಂದಾಗಲೇ ನನಗೆ ಅವರ ಪರಿಚಯ ಆಗಿದೆ'' ಎಂದು ಶಾಸಕರು ಸ್ಪಷ್ಟನೆ ನೀಡಿದರು.

ವಿಡಿಯೋ ಬಗ್ಗೆ ಶಾಸಕರ ಸ್ಪಷ್ಟನೆ: ವಿಡಿಯೋ ವೈರಲ್​ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ''ಅದು ಸುಮಾರು ಎರಡು ವರ್ಷಗಳ ಹಿಂದಿನ ವಿಡಿಯೋ ಆಗಿದೆ. ದಂಡ ವಿಧಿಸುವ ಸಂದರ್ಭದಲ್ಲಿ ಅಂದಿನ ಪಿಎಸ್​ಐವೊಬ್ಬರಿಗೆ ನಾನು ತಿಳಿಹೇಳಿದ ವಿಡಿಯೋ ಅದಾಗಿದೆ. ಜನರಿಗೆ ತೊಂದರೆ ಕೊಡಬೇಡಿ, ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಯಾಗುತ್ತದೆ ಎಂದು ಹೇಳಿದ್ದೆ. ಆಗ ಮಾತನಾಡುತ್ತಿರುವ ಸಂದರ್ಭವು ವಿಡಿಯೋದಲ್ಲಿದೆ. ಆ ವೇಳೆ ಈ ಕಾನ್ಸ್​ಟೆಬಲ್​ ಇದ್ದರು ಎಂಬ ವಿಚಾರ ನನಗೆ ಗೊತ್ತಿಲ್ಲ. ಉದ್ದೇಶಪೂರ್ವಕವಾಗಿ ನಾನು ಪತ್ರವನ್ನೂ ಕೊಟ್ಟಿಲ್ಲ, ವರ್ಗಾವಣೆಯನ್ನೂ ಮಾಡಿಸಿಲ್ಲ. ಅವಧಿ ಮುಗಿದ ಮೇಲೆ ಸಹಜವಾಗಿ ವರ್ಗಾವಣೆ ಆಗುತ್ತದೆ'' ಎಂದರು.

''ಸಹಜವಾಗಿ ಈ ಹಿಂದೆ ನಾವು ವಿರೋಧಪಕ್ಷದಲ್ಲಿದ್ದಾಗ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವಾಗ ಕೆಲವೊಮ್ಮೆ ನಮಗೂ ಪೊಲೀಸರಿಗೂ ಮಾತಿಗೆ ಮಾತು ಆಗಿರಬಹುದು. ಆದರೆ ಎಲ್ಲರೂ ಸ್ನೇಹಿತರಂತೆಯೇ ಇದ್ದೇವೆ. ಇದೀಗ ನಮ್ಮ ಸರ್ಕಾರದಲ್ಲೂ ಅವರೆಲ್ಲ ಮೊದಲಿನಂತೆಯೇ ಕೆಲಸ ಮಾಡುತ್ತಿದ್ದಾರೆ. ಮಾಧ್ಯಮದಲ್ಲಿ ಸುದ್ದಿ ನೋಡಿದ ಮೇಲೆಯೇ ಮಹಿಳಾ ಕಾನ್ಸ್​ಟೆಬಲ್ ಅವರು ಸ್ಥಳೀಯರಾಗಿದ್ದಾರೆ ಎಂಬ ವಿಚಾರ ನನಗೆ ಗೊತ್ತಾಗಿದೆ. ನನಗಾಗದ ಕೆಲವರ ಮಾತು ಕೇಳಿಕೊಂಡು ಅವರು ರಾಜಕೀಯ ಪ್ರೇರಿತವಾಗಿ ಈ ರೀತಿ ಆರೋಪ ಮಾಡುತ್ತಿರಬಹುದು'' ಎಂದು ಶಾಸಕ ಆನಂದ್ ಹೇಳಿದರು.

ಕಾನ್ಸ್​ಟೆಬಲ್​ ಅಮಾನತು: ವರ್ಗಾವಣೆ ಆದೇಶ ಪಾಲನೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ಅದರಂತೆ ಕಾನ್ಸ್​ಟೆಬಲ್​ ಲತಾ ಅವರನ್ನು ವರ್ಗಾವಣೆಗೊಳಿಸಿ ಕಡೂರು ಠಾಣೆಯಿಂದ ಬಿಡುಗಡೆಗೊಳಿಸಲಾಗಿತ್ತು. ಆದರೆ, ಲತಾ ಅವರು ಮೇಲಾಧಿಕಾರಿಗಳ ಆದೇಶ ಪಾಲನೆ ಮಾಡಿಲ್ಲ. ಜೊತೆಗೆ ವರ್ಗಾವಣೆ ವಿರೋಧಿಸಿ ಕಡೂರು ಶಾಸಕರ ವಿರುದ್ಧ ಕಾನ್ಸ್​ಟೆಬಲ್​ ಲತಾ ವಾಟ್ಸ್​ಆ್ಯಪ್ ಸ್ಟೇಟಸ್​​​ ಹಾಕಿ ದುರ್ನಡತೆ ತೋರಿರುವ ಹಿನ್ನೆಲೆಯಲ್ಲಿ ಕಾನ್ಸ್​ಟೆಬಲ್​ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಎಸ್​ಪಿ ಉಮಾ ಪ್ರಶಾಂತ್​ ಆದೇಶ ಹೊರಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.