ETV Bharat / state

ಡಿಕೆಶಿ-ಸಿದ್ದರಾಮಯ್ಯ ಸುಮ್ಮನೆ ಕೈ ಕೈ ಹಿಡಿದುಕೊಂಡು "ಆವೋ ನಾ ಪ್ಯಾರ್ ಕರೇ" ಅಂತ ಹೋಗ್ತಿದ್ದಾರೆ: ಇಬ್ರಾಹಿಂ ವ್ಯಂಗ್ಯ - ಆಹೋ ನಾ ಪ್ಯಾರ್ ಕರೇ

ಕಾಂಗ್ರೆಸ್​ನವರು ಜನರ ಎದುರು ಕೈ, ಕೈ ಹಿಡಿದುಕೊಂಡು ಓಡಾಡಿದ್ರೆ ಪ್ರಯೋಜನವಿಲ್ಲ - ಆತ್ಮಗಳು ಒಂದಾಗಬೇಕು - ಇವರಿಗೆ ಅಷ್ಟೆಲ್ಲಾ ಪ್ರೀತಿ ಇದ್ದರೆ ಮುಂದಿನ ಸಿಎಂ ಯಾರು ಅಂತ ಹೇಳಲಿ ನೋಡೋಣ - ಸಿ ಎಂ ಇಬ್ರಾಹಿಂ ಸವಾಲು

cm ibrahim
ಸಿ ಎಂ ಇಬ್ರಾಹಿಂ
author img

By

Published : Mar 1, 2023, 7:18 AM IST

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ

ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಮತ್ತು ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸುಮ್ಮನೆ ಕೈ ಕೈ ಹಿಡಿದುಕೊಂಡು "ಆವೋ ನಾ ಪ್ಯಾರ್ ಕರೇ" ಅಂತಾ ಹೋಗ್ತಿದ್ದಾರೆ. ಆದ್ರೆ, ಪ್ಯಾರು ಆಗ್ತಿಲ್ಲ, ಲವ್ವು ಆಗ್ತಿಲ್ಲ. ಜನರ ಎದುರು ಕೈ ಹಿಡಿದು ಓಡಾಡಿದ್ರೆ ಪ್ರಯೋಜನವಿಲ್ಲ, ಆತ್ಮಗಳು ಒಂದಾಗಬೇಕು. ಅಷ್ಟೆಲ್ಲಾ ಪ್ರೀತಿ ಇದ್ದರೆ ಮುಂದಿನ ಸಿಎಂ ಯಾರು ಅಂತ ಹೇಳಲಿ ನೋಡೋಣ. ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಅಂತ ಡಿಕೆಶಿ ಹೇಳಲಿ ನೋಡೋಣ. ಇಲ್ಲ, ಡಿಕೆಶಿ ಮುಂದಿನ ಸಿಎಂ ಅಂತ ಸಿದ್ದರಾಮಯ್ಯ ಹೇಳಲಿ ನೋಡೋಣ. ಇವರಿಬ್ಬರು ಬೇಡ ಪರಮೇಶ್ವರ್ ಅಥವಾ ಖರ್ಗೆ ಅಂತ ಹೇಳ್ತಾರಾ? ಲವ್ ಇದೆಯಾ ಇವರಿಗೆ. ನಮಗೆ ಲವ್ ಇದೆ, ವಿವಾದ ಇಲ್ಲ. ನಮ್ಮ ಮುಂದಿನ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಹೇಳಿದರು.

ಚಿಕ್ಕಮಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ಕಾಂಗ್ರೆಸ್​ನವರಿಗೆ ಸಿಎಂ ಯಾರು ಅಂತ ಹೇಳುವ ಶಕ್ತಿ ಇಲ್ಲ, ಹೇಳಿದ ದಿನ ಪಾರ್ಟಿ ಒಡೆದು ಹೋಗುತ್ತದೆ. ಬಿಜೆಪಿ-ಕಾಂಗ್ರೆಸ್ ಇಬ್ಬರದ್ದೂ ಅದೇ ಹಣೆಬರಹ. ನಾವು 93 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅನೌನ್ಸ್ ಮಾಡಿದ್ದೇವೆ, ಕಾಂಗ್ರೆಸ್ ಒಂದೂ ಮಾಡಿಲ್ಲ. ನೀವು ಅವರನ್ನ ಕೇಳೋದೇ ಇಲ್ಲ, ನಮ್ಮನ್ನ ಮಾತ್ರ ಕೇಳ್ತೀರಾ ಎಂದು ಮಾಧ್ಯಮಗಳಿಗೆ ಪ್ರಶ್ನಿಸಿದರು.

ಸಿ ಟಿ ರವಿ ವಿರುದ್ಧ ವಾಗ್ದಾಳಿ: ಹೇ.. ರವಿ, ದೇವೇಗೌಡರಿಗೆ ನಿಮ್ಮ ಅಪ್ಪನ ಅಪ್ಪನ ವಯಸ್ಸಾಗಿದೆ. ಅವರ ವಯಸ್ಸಿಗೆ ಮರ್ಯಾದೆ ಕೊಡುವುದನ್ನು ಕಲಿಯಿರಿ. ಊರಲ್ಲಿ ಇರೋ ಆಸ್ತಿ ಎಲ್ಲಾ ಬರೆಸಿಕೊಂಡಿದ್ದಾನೆ ಇವ್ನು. ಸಿದ್ದರಾಮಯ್ಯನ ಕೃಪೆಯಿಂದ ಉಳಿದುಕೊಂಡ, ಇಲ್ಲ ಅಂದಿದ್ರೆ ತನಿಖೆ ನಡೆದು ಜೈಲಿಗೆ ಹೋಗುತ್ತಿದ್ದ. ಕಾಂಗ್ರೆಸ್ - ಬಿಜೆಪಿ ಒಳ ಒಪ್ಪಂದದಿಂದ ಸಿ.ಟಿ ರವಿ ಉಳಿದುಕೊಂಡಿದ್ದಾನೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕೇಸ್​ ಮುಚ್ಚಿ ಹಾಕಿದ್ರು ಎಂದು ಸಿ ಎಂ ಇಬ್ರಾಹಿಂ ಆರೋಪಿಸಿದರು.

ಇದನ್ನೂ ಓದಿ: ಉಚಿತ ಘೋಷಣೆಗಳಿಂದ ಜನರಿಗೆ ಎಷ್ಟೂ ದಿನ ಅಂತಾ ಟೋಪಿ ಹಾಕುತ್ತೀರಾ: ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಪ್ರಶ್ನೆ

ನೀವು ದೇವೇಗೌಡರ ಬಗ್ಗೆ ಮಾತನಾಡಿದ್ದು ನಮ್ಮ ಮನಸ್ಸಿಗೆ ನೋವಾಗಿದೆ. ಈ ಹಿಂದೆ ದೇಶದ ಪ್ರಧಾನಿ ಆಗಿದ್ದವರಿಗೆ ಇವರು ಬಳಸುವ ಭಾಷೆ ಯಾವುದು?. ಜೀವವೇ ಶಾಶ್ವತ ಅಲ್ಲ, ಮತ -ಕುರ್ಚಿ ಶಾಶ್ವತವಾಗಿ ಇರುತ್ತಾ. ಚಿಕ್ಕಮಗಳೂರು ಮಲೆನಾಡ ಜಿಲ್ಲೆ, ಎಂತಹ ಪುಣ್ಯಾತ್ಮರನ್ನು ಕೊಟ್ಟಿದೆ. ಇಂತಹ ಜಿಲ್ಲೆಯಲ್ಲಿ ಈ ಮನುಷ್ಯ ಇದ್ದಾನೆ ಎಂದು ಇಬ್ರಾಹಿಂ ವಾಗ್ದಾಳಿ ನಡೆಸಿದರು.

ನಾನು ಮುಸ್ಲಿಂ ಆಗ್ತೀನಿ ಅಂತ ದೇವೇಗೌಡರು ಹೇಳಿದ್ರಂತೆ. ಎಲ್ಲಿದೆ ಆ ಹೇಳಿಕೆ?. ಸುಮ್ಮನೆ ಇವನೇ ಎಲ್ಲಾ ಹೇಳುವುದು ಎಂದ ಅವರು, ದೇವೇಗೌಡರು ಆಸ್ಪತ್ರೆ ಸೇರಿರುವ ವಿಚಾರದ ಬಗ್ಗೆ ಮಾತನಾಡಿದರು. ಹೆಚ್​ಡಿಡಿ ಅವರಿಗೆ ಕಾಲು, ಮಂಡಿ ನೋವಿದೆ. ಮನೆಯಲ್ಲಿ ರೆಸ್ಟ್ ಸಿಗುತ್ತಿಲ್ಲ. ಅವರು ನಾನು ಪ್ರವಾಸಕ್ಕೆ ಹೋಗಲೇಬೇಕು ಅಂತಿದ್ದಾರೆ. ಜನ ಬಂದು ನೋಡೋರು ಜಾಸ್ತಿ ಆಗಿದ್ದಾರೆ. ಆಸ್ಪತ್ರೆಯಲ್ಲಿ ಇದ್ರೆ ಒಳ್ಳೆಯದು, ಸ್ಪಂದಿಸಬಹುದು ಅಂತ ಅಷ್ಟೇ. ನಾನು ಪ್ರವಾಸದಲ್ಲಿ ಇದ್ದೇನೆ, ಸಂಪೂರ್ಣ ಮಾಹಿತಿ ತೆಗೆದುಕೊಳ್ಳಲು ಆಗಿಲ್ಲ. ಆಸ್ಪತ್ರೆ ವರದಿ ನೋಡಿದ ಬಳಿಕ ಮಾತನಾಡುತ್ತೇನೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.