ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ ನಡೆಸಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ರು. ಕೇಂದ್ರ ಸರ್ಕಾರ ತನಿಖೆ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷಗಳ ದಮನ ಮಾಡುತ್ತಿದೆಯೆಂದು ಆರೋಪಿಸಿದ್ದು, ಪ್ರವಾಹ, ಗುಡ್ಡ ಕುಸಿತ, ಭೂ ಕುಸಿತದಿಂದ ಹಾನಿಯಾದ ಮನೆ, ಕೃಷಿ ಭೂಮಿಗೆ ಕೂಡಲೇ ರಾಜ್ಯ ಸರ್ಕಾರ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಅರಣ್ಯ ಇಲಾಖೆಯಿಂದ ರೈತರಿಗೆ ಪ್ರತಿನಿತ್ಯ ಕಿರುಕುಳ ಆಗುತ್ತಿದ್ದು ಕೂಡಲೇ ತಡೆಯಬೇಕು ಹಾಗೂ ಮಳೆಯಿಂದ ಹಾನಿಯಾದ ರಸ್ತೆಗಳನ್ನು ಹಾಗೂ ಗದ್ದೆಯಲ್ಲಿ ತುಂಬಿರುವ ಮಣ್ಣು ತೆಗಿಸಿ ಸರಿಪಡಿಸುವಂತೆ ಕಾರ್ಯಕರ್ತರು ಅಗ್ರಹಿಸಿದ್ದಾರೆ. ನೂರಾರು ಜೆಡಿಎಸ್ ಕಾರ್ಯಕರ್ತರು ಕಳಸ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ದ ಅಸಮಧಾನ ಹೊರಹಾಕಿದರು.