ETV Bharat / state

ಮೂಡಿಗೆರೆಯಲ್ಲಿ ಭೂಮಿಯೊಳಗಿಂದ ಕೇಳಿ ಬಂತು ಭಾರೀ ಸದ್ದು: ಗಾಬರಿಗೊಂಡು ಮನೆಯಿಂದ ಹೊರ ಬಂದ ಜನ! - ಚಿಕ್ಕಮಗಳೂರು ಜಿಲ್ಲೆಯಲ್ಲಿ ಭೂಕಂಪನದ ಅನುಭವ

ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನಲ್ಲಿ ಭೂಮಿ ಕಂಪಿಸಿದ ಅನುಭವವಾಗಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

dsds
ಭೂಮಿಯೊಳಗಿನಿಂದ ಭಾರೀ ಸದ್ದು
author img

By

Published : Aug 4, 2020, 11:40 AM IST

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್​ನಲ್ಲಿ ರಾತ್ರಿ 10.30ರ ವೇಳೆಗೆ ಭೂಮಿಯಿಂದ ಭಾರೀ ಶಬ್ದ ಕೇಳಿ ಬಂದು ಲಘು ಭೂಕಂಪನದ‌ ಅನುಭವ ಆಗಿದೆ ಎನ್ನಲಾಗಿದೆ.

ಭೂಮಿಯೊಳಗಿನಿಂದ ಭಾರೀ ಸದ್ದು

ಮನೆ ಗೋಡೆಯಲ್ಲಿ ಬಿರುಕು ಬಿಟ್ಟಿದ್ದು, ಭೂಕಂಪ ಸಂಭವಿಸಿದೆ ಎಂಬ ಅನುಮಾನ ಇಲ್ಲಿನ ಜನರನ್ನು ಕಾಡುತ್ತಿದೆ. ಬಣಕಲ್​ನ ಸುಭಾಷ್ ನಗರದಲ್ಲಿ ಭೂ ಕಂಪನದ ಅನುಭವಾಗುತ್ತಿದ್ದಂತೆ ಮನೆಯಿಂದ ಜನರು ಹೊರ ಬಂದಿದ್ದಾರೆ.

ಮನೆಯ ಒಳಗೆ ಕುರ್ಚಿ ಮೇಲೆ ಕುಳಿತವರಿಗೆ ಹಾಗೂ ಗೋಡೆ ಪಕ್ಕದಲ್ಲಿ ಇದ್ದವರಿಗೆ ಭೂಮಿ ನಡುಗಿದ ಅನುಭವವಾಗಿದೆ ಎನ್ನಲಾಗುತ್ತಿದೆ. ಕಳೆದ ವರ್ಷ ಈ ಭಾಗದಲ್ಲಿ ಭೂ ಕುಸಿತವಾಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿತ್ತು. ಈ ಬಾರಿ ಕೂಡ ಭೂಮಿ ನಡುಗಿದ ಅನುಭವವಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.