ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಹಲವೆಡೆ ಭೂ ಕುಸಿತ ಉಂಟಾಗಿದ್ದು, ಹಲವು ಅವಘಡಗಳು ಸಂಭವಿಸಿವೆ.
ಹೌದು, ಕಳೆದ ಎರಡೂ ದಿನಗಳಿಂದ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತಗ್ಗಿದ್ದು, ಇದರಿಂದ ಮಲೆನಾಡಿನ ಜನರು ಸ್ವಲ್ವ ನಿರಾಳರಾಗಿದ್ದರು. ಆದರೆ ಹಲವೆಡೆ ಭೂ ಕುಸಿತ ಉಂಟಾಗಿರುವುದು ಮತ್ತೆ ಜನರ ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯ ಕೊಪ್ಪ ತಾಲೂಕಿನ ಬಂಡಿಗಡಿ ಗ್ರಾಮದ ಮುನಿಯೂರು ಎಂಬಲ್ಲಿ ಮಳೆ ನಿಂತರೂ ಗುಡ್ಡ ಕುಸಿತ ಮಾತ್ರ ನಿಂತಿಲ್ಲ. ನಿಧಾನವಾಗಿ ಗುಡ್ಡ ಕುಸಿಯುತ್ತಿದ್ದು, ಹಲವೆಡೆ ಭೂಮಿ ಬಿರುಕು ಬಿಡಲು ಶುರುವಾಗಿದೆ. ಈ ಘಟನೆಯನ್ನು ನೋಡಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.