ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಮಲೆನಾಡು ಭಾಗದಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆಯಾಗುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಕಳಸ, ಎನ್.ಆರ್.ಪುರದ ಬಾಳೆಹೊನ್ನೂರು ಸುತ್ತಮುತ್ತ ಭಾರೀ ಮಳೆ ಬಿದ್ದಿದೆ.
ಬಾಳೆಹೊನ್ನೂರಿನ ಕಡುಬಗೆರೆಯಲ್ಲಿ ಆಲಿಕಲ್ಲು ಗುಡುಗು-ಸಿಡಿಲಿನೊಂದಿಗೆ ಧಾರಾಕಾರ ಮಳೆಯಾಗುತ್ತಿದೆ. ಸುಮಾರು ಹೊತ್ತಿನಿಂದ ಮಳೆ ನಿರಂತರ ಸುರಿದಿದ್ದು, ರಣಬಿಸಿಲಿಗೆ ಬೇಸತ್ತಿದ್ದ ಮಲೆನಾಡಿಗರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ರೈತರು, ಕಾಫಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದ್ದು, ಮಳೆಯ ಆಗಮನಕ್ಕೆ ಸಂಭ್ರಮಿಸುತ್ತಿದ್ದಾರೆ.