ETV Bharat / state

ಚಿಕ್ಕಮಗಳೂರಿನಲ್ಲಿ ಮತ್ತೆ ವರುಣನ ಆರ್ಭಟ.. ಆತಂಕದಲ್ಲಿ ಜನ - ಮನೆ ಮೇಲೆ ಬಿದ್ದ ಮರ

ಚಿಕ್ಕಮಗಳೂರು ನಗರ, ಮೂಡಿಗೆರೆ, ಕೊಟ್ಟಿಗೆಹಾರ, ಚಾರ್ಮಾಡಿ ಘಾಟಿ, ಬಣಕಲ್,ಬಾಳೂರು, ಕಳಸ, ಶೃಂಗೇರಿ, ಕೊಪ್ಪ ಭಾಗದಲ್ಲಿಯೂ ಮಳೆಯಾಗುತ್ತಿದೆ.

ಮನೆ ಮೇಲೆ ಬಿದ್ದ ಮರ
author img

By

Published : Sep 23, 2019, 11:16 PM IST

ಚಿಕ್ಕಮಗಳೂರು : ಕಳೆದ ಕೆಲ ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಡುವು ನೀಡಿದ್ದ ಮಳೆ ಇಂದು ಮತ್ತೆ ಸುರಿಯುತ್ತಿದೆ. ಜಿಲ್ಲೆಯ ಮಲೆನಾಡು ಭಾಗ ಹಾಗೂ ಚಿಕ್ಕಮಗಳೂರು ನಗರ ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿದೆ. ಇದರಿಂದಾಗಿ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ.

ಚಿಕ್ಕಮಗಳೂರಿನಲ್ಲಿ ಮತ್ತೆ ಮಳೆ

ಕಳೆದ ಕೆಲ ದಿನಗಳ ಹಿಂದೆ ಸತತ ಒಂದು ವಾರಗಳ ಕಾಲ ಸುರಿದ ಮಹಾ ಮಳೆ ಜನರ ಬದುಕನ್ನೇ ಸರ್ವ ನಾಶ ಮಾಡಿತ್ತು. ಮಳೆ ಎಂದರೇ ಸಾಕು ಮಲೆನಾಡಿನ ಜನ ಭಯ ಪಡುವಂತಾಗಿದೆ. ಚಿಕ್ಕಮಗಳೂರು ನಗರ,ಮೂಡಿಗೆರೆ, ಕೊಟ್ಟಿಗೆಹಾರ, ಚಾರ್ಮಾಡಿ ಘಾಟಿ, ಬಣಕಲ್, ಬಾಳೂರು, ಕಳಸ, ಶೃಂಗೇರಿ, ಕೊಪ್ಪ ಭಾಗದಲ್ಲಿಯೂ ಮಳೆಯಾಗುತ್ತಿದೆ. ನಿರಂತರ ಮಳೆಯ ಕಾರಣ ಜನ ಜೀವನ ಅಸ್ತವ್ಯಸ್ಥವಾಗಿದ್ದು, ವಾಹನ ಸಂಚಾರದಲ್ಲೂ ವ್ಯತ್ಯಯವಾಗಿದೆ. ಮಳೆಯಿಂದಾಗಿ ಮಲೆನಾಡಿನ ಹಲವಾರು ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.

ಮನೆ ಮೇಲೆ ಬಿದ್ದ ಮರ : ಜಿಲ್ಲೆಯ ಎನ್​ಆರ್​ ಪುರ ತಾಲೂಕಿನ ಅರಳಿಕೊಪ್ಪದ ಹದಗಳಲೆಯ ರಾಜಶೇಖರ್ ಅವರ ಮನೆ ಮೇಲೆ ಬೃಹತ್ ಮರ ಬಿದ್ದಿದ್ದು ಮನೆ ಭಾಗಶ: ಹಾನಿಯಾಗಿದೆ. ಇದರಿಂದ ಸಾಕಷ್ಟು ವಸ್ತುಗಳು ನಾಶವಾಗಿದ್ದು, ಸದ್ಯ ಮನೆಯಲ್ಲಿದ್ದಂತಹ ಸದಸ್ಯರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದು ಯಾವುದೇ ಜೀವ ಹಾನಿ ಸಂಭವಿಸಿಲ್ಲ.

Intro:Kn_Ckm_04_Mane mele bidda mara_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿನ್ನೆ ಸಂಜೆಯಿಂದಾ ಮತ್ತೆ ಧಾರಕಾರ ಮಳೆ ಪ್ರಾರಂಭವಾಗಿದೆ. ಕಳೆದ ಕೆಲ ದಿನಗಳ ಹಿಂದೇ ಸತತ ಒಂದು ವಾರಗಳ ಕಾಲ ಸುರಿದ ಮಹಾ ಮಳೆಗೆ ನಾನಾ ಅವಾಂತರಗಳು ಸೃಷ್ಟಿಯಾಗಿ ತುಂಬಾ ಜನರು ಮನೆ, ತೋಟ ಕಳೆದುಕೊಂಡು ಬೀದಿಗೆ ಬಂದೂ ನಿಂತಿದ್ದಾರೆ.ಇಂದೂ ಮತ್ತೆ ಮಳೆ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಇಂದೂ ಸುರಿದ ಮಳೆ ಮತ್ತೇ ಅವಾಂತರ ಸೃಷ್ಟಿ ಮಾಡೋ ಲಕ್ಷಣಗಳು ಗೋಚರವಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಅರಳಿಕೊಪ್ಪದ ಹದಗಳಲೆಯ ರಾಜಶೇಕರ್ ಅವರ ಮನೆ ಮೇಲೆ ಬೃಹತ್ ಮರ ಬಿದ್ದಿದ್ದು ಮನೆ ಭಾಗಶ: ಹಾನಿಯಾಗಿದೆ.ಇದರಿಂದ ಸಾಕಷ್ಟು ವಸ್ತುಗಳು ನಾಶವಾಗಿದ್ದು ಈ ಮಳೆ ಮತ್ತೆ ಅವಾಂತರಗಳು ಸೃಷ್ಟಿ ಮಾಡುತ್ತಿದೆ.ಸದ್ಯ ಮನೆಯಲ್ಲಿದ್ದಂತಹ ಸದಸ್ಯರು ಕೂದಲೆಯ ಅಂತರದಲ್ಲಿ ಪಾರಾಗಿದ್ದು ಯಾವುದೇ ಜೀವ ಹಾನಿಯಾಗಿಲ್ಲ. ಆದರೇ ಮನೆ ಜಖಂ ಆಗಿದ್ದು ಮಲೆನಾಡು ಭಾಗದಲ್ಲಿ ಮಳೆ ಬಂದರೇ ಜನರು ಭಯ ಪಡುವಂತಹ ವಾತವರಣ ಈ ಮಳೆ ನಿರ್ಮಾಣ ಮಾಡಿದೆ.....

Conclusion:ರಾಜಕುಮಾರ್....
ಈ ಟಿವಿ ಭಾರತ್....
ಚಿಕ್ಕಮಗಳೂರು...
ETV Bharat Logo

Copyright © 2024 Ushodaya Enterprises Pvt. Ltd., All Rights Reserved.