ಚಿಕ್ಕಮಗಳೂರು: ರಾಮನ ಹೆಸರಲ್ಲಿ ರಾವಣ ರಾಜ್ಯ ಮಾಡಲು ಹೊರಟಿದ್ದಾರೆ. ನಿಮ್ಮಂಥವರಿಂದ ನಾನು ಕಲಿಯಬೇಕಿಲ್ಲ, ನನಗೆ ಜನರ ಬದುಕು ಬೇಕು ಎಂದು ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಕತ್ತಿ ಕಟ್ಕೊಂಡು ರಾಜಕಾರಣ ಮಾಡುವುದಲ್ಲ. ಕತ್ತಿ ಹಿಡ್ಕೊಂಡು ರಾಮನ ಹೆಸರು ಉಳಿಸೋದಲ್ಲ. ರಾಮ ಏನ್ ಸಂದೇಶ ಕೊಟ್ಟಿದ್ದಾನೆ, ಮೊದಲು ಮಾನವೀಯತೆ ಕಲಿಯಿರಿ. ಮುಖ್ಯ ಮಂತ್ರಿಗಳಿಗೆ ನಾಡಿನ ಬಗ್ಗೆ ಗೌರವ ಇದ್ದರೆ ಎಲ್ಲಾ ಧರ್ಮದ ಸ್ವಾಮೀಜಿಗಳ ಸಭೆ ಕರೆಯಲಿ. ಅವರ ಸಮುಖದಲ್ಲಿ ಭಾವೈಕ್ಯತೆ ಸಂದೇಶವನ್ನು ಜನತೆಗೆ ಕೊಡುವ ಕೆಲಸ ಮಾಡಲಿ ಎಂದರು.
ಉತ್ತರಪ್ರದೇಶ, ಗುಜರಾತ್ ಆಡಳಿತ ಅವಶ್ಯಕತೆ ಇಲ್ಲ. ಕರ್ನಾಟಕದ ಆಡಳಿತ ವಿಶ್ವಕ್ಕೆ ಮಾದರಿಯಾದ ರಾಜ್ಯ. ಮತಕೋಸ್ಕರ ಅಶಾಂತಿ ಮೂಡಿಸುವ ಘಟನೆ ಆಗಬಾರದು. ರಾಷ್ಟ್ರೀಯ ಪಕ್ಷದಿಂದ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಇಡುವ ಕೆಲಸ ಆಗುತ್ತಿದೆ ಎಂದು ದೂರಿದರು.
ಇದನ್ನೂ ಓದಿ:ಕೋಮು ಗಲಭೆಗಳಾಗ್ತಿದ್ರೂ ಕೇಂದ್ರ ಸರ್ಕಾರ ಮುಗ್ದರ ರೀತಿ ನೋಡುವುದು ಸರಿಯಲ್ಲ.. ಮಾಜಿ ಪ್ರಧಾನಿ ದೇವೇಗೌಡ