ETV Bharat / state

ಮಲೆನಾಡಿನಲ್ಲಿ ಹಸಿರು ಕಪ್ಪೆಗಳು ಪತ್ತೆ.. ಬಾಹ್ಯ ರೂಪದ ಮಿಲನ ಪ್ರಕ್ರಿಯೆ ಎಂದರೇನು?

ಮಲೆನಾಡಿನಲ್ಲಿ ಹಸಿರು ಕಪ್ಪೆಗಳು ಪತ್ತೆಯಾಗಿದ್ದು, ಇದರ ಸಂತಾನೋತ್ಪತ್ತಿ ಕಾರ್ಯ ವಿಶೇಷದಿಂದ ಕೂಡಿದೆ. ಈ ಕಪ್ಪೆಗಳು ಬಾಹ್ಯ ರೂಪದ ಮಿಲನ ಪ್ರಕ್ರಿಯೆ ನಡೆಸಿ ತಮ್ಮ ಮಕ್ಕಳಿಗೆ ಜನ್ಮ ನೀಡುತ್ತವೆ. ಬಾಹ್ಯ ರೂಪದ ಮಿಲನ ಪ್ರಕ್ರಿಯೆ ಎಂದರೇನು, ಈ ಕಪ್ಪೆಗಳ ವಿಶೇಷವೆನೆಂದು ತಿಳಿಯೋಣ ಬನ್ನಿ.

Green frogs found in Chikmagalur, Green frogs breed,  Chikmagalur news, ಚಿಕ್ಕಮಗಳೂರಿನಲ್ಲಿ ಹಸಿರು ಕಪ್ಪೆಗಳು ಪತ್ತೆ, ಹಸಿರು ಕಪ್ಪೆಗಳ ಪ್ರಭೇದ, ಚಿಕ್ಕಮಗಳೂರು ಸುದ್ದಿ,
ಮಲೆನಾಡಿನಲ್ಲಿ ಹಸಿರು ಕಪ್ಪೆಗಳು ಪತ್ತೆ
author img

By

Published : Mar 30, 2022, 9:34 AM IST

Updated : Mar 30, 2022, 10:43 AM IST

ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಭಾಗದಲ್ಲಿ ಅತ್ಯಂತ ವಿಶೇಷವಾದಂತಹ ಹಸಿರು ಕಪ್ಪೆಗಳು ಪತ್ತೆಯಾಗಿವೆ. ಮಲೆನಾಡಿನಲ್ಲಿ ಎಷ್ಟೋ ಪ್ರಾಣಿ, ಪಕ್ಷಿಗಳು, ಕೀಟಗಳು ನೆಲೆಸಿವೆ. ತನ್ನದೇ ಆದ ವಿಶಿಷ್ಟತೆ ಹೊಂದಿವೆ. ಕಾಲಕ್ಕೆ ತಕ್ಕಂತೆ ಅವುಗಳು ಕಾಣ ಸಿಗುತ್ತವೆ. ಮಲೆನಾಡಿನಲ್ಲಿ ಮೇ-ಜೂನ್ ತಿಂಗಳಿನ ಮಳೆಗಾಲದಲ್ಲಿ ಮಾತ್ರ ಈ ಹಸಿರು ಕಪ್ಪೆಗಳು ಕಾಣಸಿಗುತ್ತವೆ. ಹಸಿರು ಕಪ್ಪೆಗಳು ತೇವಾಂಶ ಅಧಿಕವಾಗಿರುವ ಮಳೆಕಾಡಿನಲ್ಲಿ ಕಾಣಸಿಗುವ ಕಪ್ಪೆಯ ಒಂದು ಪ್ರಭೇದವಾಗಿದೆ.

ಮಲೆನಾಡಿನಲ್ಲಿ ಹಸಿರು ಕಪ್ಪೆಗಳು ಪತ್ತೆ

ಹಸಿರು ಕಪ್ಪೆಗಳ ವಿಶೇಷವೇನು?: ಮಲೆನಾಡಿನಲ್ಲಿ ಪ್ರಾರಂಭದ ಮಳೆ ಬಿದ್ದಾಗ ಹಸಿರು ಕಪ್ಪೆಗಳ ಚಟುವಟಿಕೆಗಳು ನೀರು ಇರುವ ಜಾಗದಲ್ಲಿ ಶುರುವಾಗುತ್ತದೆ. ಉಳಿದ ದಿನಗಳಲ್ಲಿ ಕಾಣ ಸಿಗುವುದಿಲ್ಲ. ತಂಪಾದ ಜಾಗದಲ್ಲಿ ಹೋಗಿ ಮರ - ಗಿಡಗಳ ಸಂಧಿಯಲ್ಲಿ ಇವು ವಾಸಿಸುತ್ತವೆ. ಮೊದಲ ಮಳೆ ಪ್ರಾರಂಭವಾಗುತ್ತಿದ್ದ ಹಾಗೆ ನೀರಿರುವ ಜಾಗದಲ್ಲಿ ಬಂದು ಸಂತಾನೋತ್ಪತ್ತಿಗಾಗಿ ಸೇರುವುದು ವಿಶೇಷವಾಗಿದೆ.

ಓದಿ: 9 ದಿನದಲ್ಲಿ 8ನೇ ಬಾರಿಗೆ ಪೆಟ್ರೋಲ್​​​- ಡೀಸೆಲ್​ ಬೆಲೆ ಏರಿಕೆ.. 150ಕ್ಕೆ ತಲುಪುತ್ತಾ ತೈಲ ದರ?

ಬಾಹ್ಯ ರೂಪದ ಮಿಲನ ಪ್ರಕ್ರಿಯೆ: ಈ ಹಸಿರು ಕಪ್ಪೆಯ ಇನ್ನೊಂದು ವಿಶೇಷ ಏನೆಂದರೆ, ಮಿಲನ ಪ್ರಕ್ರಿಯೆ ಇಲ್ಲದೇ ಬಾಹ್ಯದಲ್ಲಿ ಸಂತಾನೋತ್ಪತ್ತಿ ಕ್ರಿಯೆ ಜರಗುವ ಅಪರೂಪದ ಸಂಗತಿ ಘಟಿಸುತ್ತದೆ. ನೀರು ಇರುವ ಜಾಗವನ್ನು ಆಯ್ಕೆ ಮಾಡಿ ತನ್ನ ಮೊಟ್ಟೆಯನ್ನ ನೊರೆ ರೂಪದಲ್ಲಿ ಗೂಡು ಇಡುತ್ತದೆ. ನಂತರದ ದಿನಗಳಲ್ಲಿ ನಿಧಾನವಾಗಿ ಅದು ಕರಗಿ ನೀರಿಗೆ ಬಿದ್ದು ಅಲ್ಲಿ ಮರಿಗಳಾಗುವುದು ವಿಶೇಷ.

ಬಾಹ್ಯ ಮಿಲನ ಪ್ರಕ್ರಿಯೆ ಎಂದರೇನು?: ಸಾಮಾನ್ಯವಾಗಿ ಎಲ್ಲ ಜೀವಿಗಳಲ್ಲಿ ಮಿಲನದ ಪ್ರಕ್ರಿಯೆ ಒಂದು ರೀತಿಯಾದರೆ ಈ ಕಪ್ಪೆಗಳಲ್ಲಿ ಮಿಲನದ ಪ್ರಕ್ರಿಯೆ ನಡೆಯುವುದೇ ಬೇರೆ. ಈ ಕಪ್ಪೆಯಲ್ಲಿ ಮಿಲನ ಪ್ರಕ್ರಿಯೆ ಬಾಹ್ಯ ರೂಪದಲ್ಲಿ ಆಗುತ್ತದೆ. ಗಂಡು ಕಪ್ಪೆಯಿಂದ ಬಿಡುಗಡೆಯಾದ ವೀರ್ಯಾಣುಗಳ ಜೊತೆಗೆ ತಾನು ಬಿಡುಗಡೆ ಮಾಡಿದ ಅಂಡಾಣುಗಳು ಸೇರಿ ಬಿಳಿ ನೊರೆ ರೂಪದಲ್ಲಿ ಗೂಡು ಕಟ್ಟುತ್ತದೆ.

ಬಳಿಕ ನೀರಿನಡೆ ಬಾಗಿರುವ ಎಲೆಯ ಮೇಲೆ ಅಥವಾ ಕೊಂಬೆ ಮೇಲೆ ಈ ಗೂಡು ಜಾರಿಸುತ್ತದೆ. ಈ ಪ್ರಕ್ರಿಯೆಯೆ ಬಾಹ್ಯ ಮಿಲನ ಪ್ರಕ್ರಿಯೆ ಆಗಿದೆ. ಅಂದರೆ ಗಂಡು ಕಪ್ಪೆಯು ವೀರ್ಯಾಣು ಬಿಡುತ್ತಾ ಹೋಗುತ್ತದೆ. ಅದಕ್ಕೆ ಹೆಣ್ಣು ಕಪ್ಪೆ ಅದರ ಅಂಡಾಣುಗಳನ್ನು ಉತ್ಪತ್ತಿಯಾಗುವ ನೊರೆಗೆ ಸೇರಿಸುತ್ತಾ ಹೋಗುತ್ತದೆ. ಬಾಹ್ಯ ರೂಪದಲ್ಲಿ ನಡೆಯುವಂತ ಮಿಲನ ಪ್ರಕ್ರಿಯೆ ನಂತರ ಆ ನೊರೆ ಬಿಸಿಲಿಗೆ ಕರಗಿ ನಿಧಾನವಾಗಿ ನೀರಿಗೆ ಬಿದ್ದು ಮರಿಗಳು ಆಗುತ್ತವೆ.

Last Updated : Mar 30, 2022, 10:43 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.