ಚಿಕ್ಕಮಗಳೂರು : ಅವರಿಗೆ ಅವರ ಧರ್ಮದ ಬಗ್ಗೆ ಅಷ್ಟು ಅಭಿಮಾನ ಇದೆ. ನಮ್ಮ ಧರ್ಮದ ಧರ್ಮಾಭಿಮಾನಕ್ಕೆ ನಾನು ಭಯಪಡುತ್ತೀನಾ?. ಹಾಕುವ ಸಮಯ ಬಂದರೆ ದತ್ತಮಾಲೆ ಹಾಕುತ್ತೇನೆ ಎಂದು ಸಚಿವ ಜಮೀರ್ ಅಹ್ಮದ್ ಅವರಿಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿದ ಅವರು, ದತ್ತಮಾಲೆ ಯಾಕೆ ಹಾಕಬಾರದು? ದೇವರ ಕಾರ್ಯಕ್ರಮ ಹಾಕುವ ಸಮಯ ಬಂದರೆ ಹಾಕುತ್ತೇನೆ. ಕಾನೂನು ಬಾಹಿರವಾಗಿ ಯಾವುದನ್ನೂ ಮಾಡುವುದಿಲ್ಲ. ನಮ್ಮ ಸಂಸ್ಕೃತಿ ಉಳಿಸಲು ಕಾನೂನಾತ್ಮಕವಾಗಿ ಏನು ಬೇಕಾದರೂ ಮಾಡುತ್ತೇನೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಕುರಿತು ಮಾತನಾಡಿದ ಅವರು, ಹಲೋ ಅಪ್ಪ.. ಅವರ ಶ್ರಮ ನೋಡ್ತಿದ್ದೇನೆ. ಇವತ್ತು ಮಾತಾಡಲ್ಲ, ಎಲ್ಲಾ ಕ್ರಿಕೆಟ್ ನೋಡ್ತಿದ್ದಾರೆ. 2 ದಿನದಿಂದ ಅವರ ಗೋಳಾಟ ನೋಡಿದ್ದೇನೆ. ನಿಮ್ಮ ಮಗ ರಾಜಕೀಯ ಮಾಡಲಿ, ನೋ ಪ್ರಾಬ್ಲಂ. ಆಶ್ರಯ ಕಮಿಟಿ ಅಧ್ಯಕ್ಷ ಕೆಡಿಪಿ ಮೀಟಿಂಗ್ಗೆ ಅವಕಾಶ ಇದೆಯೇ?. ಜನ ಸಂಪರ್ಕ ಸಭೆಯಲ್ಲಿ ಆಶ್ರಯ ಕಮಿಟಿ ಅಧ್ಯಕ್ಷನಿಗೆ ಅಧಿಕಾರಿಗಳನ್ನು ಕರೆದುಕೊಂಡು ಹೋಗಲು ಸಾಧ್ಯನಾ. ನಾನು 2 ಬಾರಿ ಸಿಎಂ, ನನ್ನ ಮಗನಿಗೆ ಕ್ಷೇತ್ರ ಬಿಟ್ಟಿದ್ದೆನಾ ಎಂದು ಮುಖ್ಯಮಂತ್ರಿಗೆ ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ಇನ್ನು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಪರೋಕ್ಷವಾಗಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದು, ಟೆಂಟಲ್ಲಿ ಬ್ಲೂ ಫಿಲಂ ತೋರಿಸಿಕೊಂಡು ಜೀವನ ಮಾಡಿಕೊಂಡು ಬಂದವನು. ಆ ಮನಸ್ಥಿತಿಯಲ್ಲಿ ಅವನಿಗೆ ಇನ್ನೇನು ಬರುತ್ತದೆ. ಆತ ಆ ರೀತಿ ಪೋಸ್ಟರ್ ಪ್ರಿಂಟ್ ಮಾಡಿಸುವುದು ಬಿಟ್ಟು ದೇವರದ್ದು ಹಾಕಿಸುತ್ತಾನಾ? ದೊಡ್ಡ ಆಲದಹಳ್ಳಿಯ ಸಾತನೂರಿನಲ್ಲಿ 2 ಟೆಂಟ್ ಇದ್ವಲ್ಲಾ, ಮಲಯಾಳಿ ಸಿನಿಮಾಗೆ ಕಟ್ಟಿಂಗ್ ಸೇರಿಸುತ್ತಿದ್ದರಲ್ಲ. ಅದನ್ನೇ ಮುಂದುವರೆಸುತ್ತಿದ್ದಾರೆ. ಅವರು ಬಂದಿರುವುದೇ ಆ ಸಂಸ್ಕೃತಿಯಲ್ಲಿ. ಅಂತವರನ್ನು ಈ ರಾಜ್ಯದ ಜನ ಆಯ್ಕೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ನವರು ಅಂತವರಿಗೆ ಅಧಿಕಾರ ನೀಡಿದ್ದಾರೆ. ಅವರ ಜೀವನ, ಸಂಸ್ಕೃತಿ, ಬದುಕೇ ಅಷ್ಟು. ಏನು ಮಾಡುವುದು ಎಂದು ವ್ಯಂಗ್ಯವಾಡಿದರು.
ಜಾತ್ಯತೀತತೆ ಅಂದ್ರೆ ಏನು ಅರ್ಥ? ಅಲ್ಲೆಲ್ಲೋ ಹೋಗಿ ನಿಮ್ಮ ಮಂತ್ರಿ ಮಾತನಾಡಿದ್ದಾರಲ್ಲ. ನಮ್ಮ ಸಮಾಜದ ಖಾದರ್ ಅವರಿಗೆ ಬಿಜೆಪಿ ಶಾಸಕರು ಕೈಮುಗೀಬೇಕು ಎಂದು. ಇದು ಜಾತ್ಯತೀತ ಅಲ್ವಾ? ಇದು ಜಾತ್ಯತೀತತೇನಾ? ಆದ್ದರಿಂದ ಜಾತ್ಯತೀತತೆ ಬಗ್ಗೆ ಚರ್ಚೆ ಮಾಡಲು ಕಾಂಗ್ರೆಸ್ಸಿಗರಿಗೆ ಯಾವ ಯೋಗ್ಯತೆ ಇದೆ ಎಂದು ಕುಮಾರಸ್ವಾಮಿ ಹರಿಹಾಯ್ದರು.
ಇದನ್ನೂ ಓದಿ : ಮಾತಿನಲ್ಲಿ ಮೌಲ್ಯಗಳ ಮಥನ, ಕೊನೆಗೆ ಝಣ ಝಣ ಕಾಂಚಾಣ, ಇದೇ ಸಿಎಂ ಅಂತರಂಗ ಶುದ್ಧಿ: ಕುಮಾರಸ್ವಾಮಿ