ಚಿಕ್ಕಮಗಳೂರು: ಸ್ವಾಭಾವಿಕವಾಗಿ ಬೃಹತ್ ಗಾತ್ರದ ಕಾಡುಕೋಣ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೆಳೆಕಿಗೆ ಬಂದಿದೆ.
ಆಲ್ದೂರು ವಲಯದ ಕಣತಿ ಗ್ರಾಮದ ಬಳಿ ಮೇಲನಹಳ್ಳಿ ಕಾಫಿ ತೋಟದಲ್ಲಿ ಗಂಡು ಕಾಡುಕೋಣ ಮೃತಪಟ್ಟಿದ್ದು, ವಯಸ್ಸಾದ ಈ ಗಂಡು ಕಾಟಿಯನ್ನು ನೋಡಿದ ಕೂಡಲೇ ತೋಟದ ಕಾರ್ಮಿಕರು ಹಾಗೂ ಮಾಲೀಕರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ.
ಕೂಡಲೇ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದರು. ನಂತರ ಅರಣ್ಯ ಪಶುವೈದ್ಯಾಧಿಕಾರಿ ಯಶಸ್, ಆಲ್ದೂರು ಪಶುವೈದ್ಯಾಧಿಕಾರಿ ವಾಗೇಶ್ ಪಂಡಿತ್ ತಂಡ ಮೃತ ಕಾಟಿಯ ಮರಣೋತ್ತರ ಪರೀಕ್ಷೆ ನಡೆಸಿದರು.
ಅಂದಾಜು 15 ವರ್ಷದ ಕಾಡುಕೋಣ ಮೃತಪಟ್ಟಿದ್ದು, ಈ ಕಾಡುಕೋಣ ಮೇಲ್ನೋಟಕ್ಕೆ ಸ್ವಾಭಾವಿಕವಾಗಿ ಸಾವನ್ನಪ್ಪಿದೆ ಎನ್ನಲಾಗಿದೆ.