ETV Bharat / state

ಜಮೀನು ಗಲಾಟೆ: ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ: ಕುಡುಗೋಲು, ಲಾಂಗ್ ಹಿಡಿದು ಹೊಡೆದಾಟ - Land dispute

Land dispute: ಜಮೀನು ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದಿದ್ದು ಕುಡುಗೋಲು, ಕತ್ತಿಯಿಂದ ಹೊಡೆದಾಟ ಮಾಡಿಕೊಂಡಿರುವ ಘಟನೆ ಕಡೂರು ತಾಲೂಕಿನಲ್ಲಿ ನಡೆದಿದೆ.

Land dispute
ಜಮೀನು ಗಲಾಟೆ
author img

By ETV Bharat Karnataka Team

Published : Dec 9, 2023, 8:50 AM IST

ಚಿಕ್ಕಮಗಳೂರು : ಜಮೀನು ವಿಚಾರವಾಗಿ ಎರಡು ಕುಟುಂಬಗಳು ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಚಟ್ಟನಪಾಳ್ಯ ಗ್ರಾಮದಲ್ಲಿ ನಡೆದಿದೆ.

ಚಟ್ಟನಪಾಳ್ಯ ಗ್ರಾಮದ ಶಿವಣ್ಣ ಎಂಬುವರ ಹೆಸರಿನಲ್ಲಿ ಮುಕ್ಕಾಲು ಗುಂಟೆ ಅಡಕೆ ತೋಟವಿದೆ. 1960 ನೇ ಇಸವಿಯಿಂದಲೂ ಆ ಜಾಗ ಶಿವಣ್ಣ ಸ್ವಾಧೀನದಲ್ಲಿದೆ. ಆದರೆ, ಪಹಣಿ ಮಾತ್ರ ಶಿವಣ್ಣನ ಸಹೋದರನ ಹೆಸರಿನಲ್ಲಿ ಇತ್ತು. ಸ್ವಾಧೀನಲ್ಲಿದ್ದವರೇ ಅಡಕೆಯನ್ನು ಕೊಯ್ಯುತ್ತಿದ್ದರು. ಈ ಕುರಿತು ಎರಡು ಕುಟುಂಬಗಳ ಮಧ್ಯೆ ಹಲವು ಬಾರಿ ಗಲಾಟೆ ನಡೆದಿದ್ದು, ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದ್ದಾರೆ.

ಕಳೆದ ನಾಲ್ಕೈದು ದಿನಗಳ ಹಿಂದೆ ಶಿವಣ್ಣನ ಕುಟುಂಬದವರು ಅಡಕೆ ಕೊಯ್ಯುವಾಗ ತೋಟದಲ್ಲೇ ಎರಡು ಕುಟುಂಬದವರ ನಡುವೆ ಮಾರಾಮಾರಿ ನಡೆದಿದೆ‌. ಕೈಯಲ್ಲಿ ಕುಡುಗೋಲು, ಲಾಂಗ್ ಹಿಡಿದು ಪುರುಷರು ಮತ್ತು ಮಹಿಳೆಯರು ಬಡಿದಾಡಿಕೊಂಡಿದ್ದಾರೆ. ಶಿವಣ್ಣನ ಸಹೋದರನ ಮಗ ಚರಣ್ ಕೈಯಲ್ಲಿ ಲಾಂಗ್ ಹಿಡಿದು ಖಾರದ ಪುಡಿ ಹಾಕ್ತೀಯಾ?, ಮೊಬೈಲ್​ನಲ್ಲಿ ರೆಕಾರ್ಡ್ ಮಾಡುತ್ತಿಯಾ ಎಂದು ಹಲ್ಲೆಗೆ ಯತ್ನಿಸಿದ್ದಾನೆ. ಶಿವಣ್ಣ ಕೂಡ ಕೈಯಲ್ಲಿ ಕುಡುಗೋಲು ಹಿಡಿದು ಗಲಾಟೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎರಡು ಕುಟುಂಬದವರು ಸಖರಾಯಪಟ್ಟಣ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ : ಜಮೀನು ವಿವಾದ : ಅಣ್ಣನ ಮಗನನ್ನೇ ಗುಂಡಿಕ್ಕಿ ಹತ್ಯೆ ಮಾಡಿದ ರೌಡಿಶೀಟರ್ ಸೀಮೆಎಣ್ಣೆ ಕುಮಾರ್​

ಅಣ್ಣನ ಮಗನನ್ನೇ ಗುಂಡಿಕ್ಕಿ ಹತ್ಯೆ : ಜಮೀನು ವಿವಾದದ ಹಿನ್ನೆಲೆಯಲ್ಲಿ ರೌಡಿಯೊಬ್ಬ ತನ್ನ ಅಣ್ಣನ ಮಗನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಮಂಡ್ಯದ ನಾಗಮಂಗಲ ತಾಲೂಕಿನ ಗಡಿಭಾಗ ಹನುಮನಹಳ್ಳಿ ಕಳೆದ ನವೆಂಬರ್​ ತಿಂಗಳಲ್ಲಿ ನಡೆದಿತ್ತು. ಗ್ರಾಮದ ವಾಸು ಅಲಿಯಾಸ್ ವಿಷಕಂಠರ ಪುತ್ರ ಜೈಪಾಲ್ (24) ಅವರನ್ನು ಗುಂಡಿಕ್ಕಿ ರೌಡಿ ಸೀಮೆಎಣ್ಣೆ ಕುಮಾರ್ ಗೌಡ ಹತ್ಯೆ ಮಾಡಿದ್ದಾನೆ. ಸಹೋದರರಾದ ವಾಸು ಮತ್ತು ರೌಡಿ ಸೀಮೆಎಣ್ಣೆ ಕುಮಾರ್ ನಡುವೆ ಜಮೀನಿನ ವಿಚಾರವಾಗಿ ವಿವಾದ ಏರ್ಪಟ್ಟಿತ್ತು. ಇದೇ ವಿಚಾರವಾಗಿ ಗಲಾಟೆ ಸಹ ನಡೆಯುತ್ತಿತ್ತು. ಸ್ವಗ್ರಾಮ ಹನುಮನಹಳ್ಳಿಯಲ್ಲಿ ವಿವಾದ ಇತ್ಯರ್ಥದ ಮಾತುಕತೆಗೆ ಮುಂದಾಗಿದ್ದರು. ಅದರಂತೆ ಮಾತುಕತೆ ನಡೆಯುತ್ತಿದ್ದ ವೇಳೆ ಮಾತಿಗೆ ಮಾತು ಬೆಳೆದು ಸೀಮೆ ಎಣ್ಣೆ ಕುಮಾರ್ ತನ್ನ ಬಳಿ ಇದ್ದ ಗನ್​ನಿಂದ ಅಣ್ಣನ ಮಗ ಜೈಪಾಲ್ ಮೇಲೆ ಗುಂಡು ಹಾರಿಸಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡು ರಕ್ತಸ್ರಾವದಿಂದ ಕುಸಿದು ಬಿದ್ದ ಜೈಪಾಲ್​ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಇದನ್ನೂ ಓದಿ : ಜಮೀನು ವಿವಾದದ ಕಿತ್ತಾಟದಲ್ಲಿ 6 ಬಾರಿ ಟ್ರ್ಯಾಕ್ಟರ್​ ಹತ್ತಿಸಿ ಯುವಕನ ಬರ್ಬರ ಹತ್ಯೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.