ETV Bharat / state

ಕಳಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ರೈತ! - Chikkamagaluru District

ನೆರೆಯಿಂದ ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡ ಹಿನ್ನೆಲೆ ಮನನೊಂದು ರೈತನೋರ್ವ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಮಡಿರುವ ಘಟನೆ ಮೂಡಿಗೆರೆ ತಾಲೂಕಿನ ಕಳಸ ಬಳಿಯ ಕಾರ್ಗದ್ದೆ ಗ್ರಾಮದಲ್ಲಿ ನಡೆದಿದೆ.

ನೆರೆಯಿಂದ ಮನೆ ಆಸ್ತಿ-ಪಾಸ್ತಿ ಹಾನಿ: ಮನನೊಂದು ರೈತ ಆತ್ಮಹತ್ಯೆ
author img

By

Published : Sep 14, 2019, 4:59 PM IST

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ನೆರೆಯಿಂದ ಮನೆ ಹಾಗೂ ಆಸ್ತಿ-ಪಾಸ್ತಿ ಕಳೆದುಕೊಂಡ ಹಿನ್ನೆಲೆ ಮನನೊಂದು ರೈತನೋರ್ವ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಮನನೊಂದು ರೈತ ಆತ್ಮಹತ್ಯೆ

ರೈತ ಚನ್ನಪ್ಪಗೌಡ (65) ಆತ್ಮಹತ್ಯೆ ಮಾಡಿಕೊಂಡ ರೈತ ಎನ್ನಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಬಳಿಯ ಕಾರ್ಗದ್ದೆ ಗ್ರಾಮದಲ್ಲಿ ಘಟನೆ ನಡೆದಿದೆ.

ಚನ್ನಪ್ಪಗೌಡ ಐದು ಎಕರೆ ಜಮೀನು ಹೊಂದಿದ್ದು, ಮಳೆಯಿಂದ ಬೆಟ್ಟಗುಡ್ಡ ಕುಸಿದು ಬಹುತೇಕ ತೋಟ ಹಾಳಾಗಿ ಹೋಗಿತ್ತು. ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ಸಹ ನಡೆಸಿದ್ದರು. ಸರ್ಕಾರದಿಂದಲೂ ಯಾವುದೇ ರೀತಿಯ ಪರಿಹಾರ ಬಂದಿಲ್ಲ ಎಂದು ಮನನೊಂದು ರೈತ ಗುಂಡು ಹಾರಿಸಿಕೊಂಡಿದ್ದಾನೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕಳಸ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರ ತನಿಖೆಯ ನಂತರವೇ ನಿಜವಾದ ಕಾರಣ ಏನೆಂದು ತಿಳಿದು ಬರಬೇಕಿದೆ.

Intro:Kn_Ckm_04_Shoot out_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ನೆರೆಯಿಂದ ಮನೆ ಆಸ್ತಿ - ಪಾಸ್ತಿ ಕಳೆದುಕೊಂಡ ಹಿನ್ನೆಲೆ ಮನನೊಂದು ರೈತ ಶೂಟೌಟ್ ಮಾಡಿಕೊಂಡು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ರೈತ ಚನ್ನಪ್ಪಗೌಡ (65) ಶೂಟೌಟ್ ಮಾಡಿಕೊಂಡ ಮೃತ ದುರ್ದೈವಿಯಾಗಿದ್ದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಬಳಿಯ ಕಾರ್ಗದ್ದೆ ಗ್ರಾಮದಲ್ಲಿ ಘಟನೆ ನಡೆದಿದೆ.ಚನ್ನಪ್ಪಗೌಡ ಐದು ಎಕರೆ ಜಮೀನು ಹೊಂದಿದ್ದು ಮಳೆಯಿಂದ ಬೆಟ್ಟ-ಗುಡ್ಡ ಕುಸಿದು ಬಹುತೇಕ ತೋಟ ಹಾಳಾಗಿ ಹೋಗಿತ್ತು. ಅಧಿಕಾರಿಗಳು ಬೇಟಿ ನೀಡಿ, ಪರಿಶೀಲನೆ ಸಹ ನಡೆಸಿದ್ದರು. ಸರ್ಕಾರದಿಂದಲೂ ಯಾವುದೇ ರೀತಿಯಾ ಪರಿಹಾರ ಬಂದಿಲ್ಲ ಎಂದೂ ಮನನೊಂದು ಶೂಟೌಟ್ ಮಾಡಿಕೊಂಡಿದ್ದಾನೆ ಎಂಬ ಮಾತುಗಳು ಕೇಳಿ ಬರುತ್ತಿದ್ದು ಕಳಸ ಪೋಲಿಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೋಲಿಸರ ತನಿಖೆಯ ನಂತರವೇ ಈ ಶೂಟೌಟ್ ಗೆ ನಿಜವಾದ ಕಾರಣ ಏನೇಂಬುದು ತಿಳಿದು ಬರಬೇಕಿದೆ.....

Conclusion:ರಾಜಕುಮಾರ್....
ಈ ಟಿವಿ ಭಾರತ್....
ಚಿಕ್ಕಮಗಳೂರು.....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.