ETV Bharat / state

ವೈದ್ಯರು, ಯಮನಿಗಿಂತ ಮಿಗಿಲಾದವ ಶಿವ.. ಕಾರಜೋಳರ ಮಗನ ವಿಚಾರದಲ್ಲಿ ಅದು ನಿಜವಾಯ್ತು : ವಿನಯ್ ಗುರೂಜಿ - Vinay Guruji statement on Karajol son

2 ತಿಂಗಳು ಬಿಟ್ಟು ನಿಮ್ಮ ಮಗನ ಜೊತೆ ದೋಸೆ ತಿನ್ನುತ್ತೇನೆ ಎಂದಿದ್ದೆ. ಈ ರೀತಿ ಹೇಳಿದಾಗ ಎಲ್ಲಾ ಡಾಕ್ಟರ್ ಶಾಕ್ ಆಗಿದ್ದರು. ಆಗ ಆಶ್ರಮದಲ್ಲಿ ದತ್ತಾತ್ರೇಯನಿಗೆ ಪ್ರಾರ್ಥನೆ ಮಾಡಿದ್ದೆವು. 16 ದಿನ 48 ಜನ ನೀರಿನಲ್ಲಿ ಕೂತು ಜಪ ಮಾಡಿದ್ದರು. ವೇದದ ತಾಕತ್ತು ಏನೆಂದು ಭಗವಂತ ತೋರಿಸಿದ್ದಾನೆ..

ಗೌರಿ ಗದ್ದೆಯ ಸ್ವಾಮೀಜಿ ವಿನಯ್ ಗುರೂಜಿ ಹೇಳಿಕೆ

author img

By

Published : Feb 27, 2021, 4:49 PM IST

ಚಿಕ್ಕಮಗಳೂರು : ಡಾಕ್ಟರ್, ಯಮನಿಗಿಂತ ಮಿಗಿಲಾದವನು ಶಿವ. ಇದು ಡಿಸಿಎಂ ಕಾರಜೋಳರ ಮಗನ ವಿಚಾರದಲ್ಲಿ ನಿಜವಾಗಿದೆ ಎಂದು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಗೌರಿ ಗದ್ದೆಯ ಸ್ವಾಮೀಜಿ ವಿನಯ್ ಗುರೂಜಿ ಹೇಳಿದರು.

ಮೇಲೊಬ್ಬನಿದ್ದಾನೆ ಅಂತಾರೆ ಗೌರಿ ಗದ್ದೆಯ ಸ್ವಾಮೀಜಿ ವಿನಯ್ ಗುರೂಜಿ..

ಮೃತ್ಯುಂಜಯ ಯಾಗದ ಪೂರ್ಣಾಹುತಿ ಬಳಿಕ ಮಾತನಾಡಿದ ಅವರು, 116 ಮೂಲಿಕೆಗಳಿಂದ ಮೃತ್ಯುಂಜಯ ಯಾಗ ನಡೆದಿದೆ. ಡಿಸಿಎಂ ಗೋವಿಂದ್​ ಕಾರಜೋಳ ಅವರ ಮಗ ಬದುಕುವುದು ಕಷ್ಟ ಎಂದು ವೈದ್ಯರು ಹೇಳಿದ್ದರು. ಆಗ ಡಿಸಿಎಂ ಕಾರಜೋಳರ ಜೊತೆ ಮಾತನಾಡಿದ್ದೆ. 2 ತಿಂಗಳು ಬಿಟ್ಟು ನಿಮ್ಮ ಮಗನ ಜೊತೆ ದೋಸೆ ತಿನ್ನುತ್ತೇನೆ ಎಂದಿದ್ದೆ.

ಈ ರೀತಿ ಹೇಳಿದಾಗ ಎಲ್ಲಾ ಡಾಕ್ಟರ್ ಶಾಕ್ ಆಗಿದ್ದರು. ಆಗ ಆಶ್ರಮದಲ್ಲಿ ದತ್ತಾತ್ರೇಯನಿಗೆ ಪ್ರಾರ್ಥನೆ ಮಾಡಿದ್ದೆವು. 16 ದಿನ 48 ಜನ ನೀರಿನಲ್ಲಿ ಕೂತು ಜಪ ಮಾಡಿದ್ದರು. ವೇದದ ತಾಕತ್ತು ಏನೆಂದು ಭಗವಂತ ತೋರಿಸಿದ್ದಾನೆ. ಮೆಡಿಕಲ್ ಸೈನ್ಸ್, ಪ್ರಪಂಚಕ್ಕೂ ಭಗವಂತ ತೋರಿಸಿದ್ದಾನೆ ಎಂದು ತಿಳಿಸಿದರು.

ಇದನ್ನೂ ಓದಿ: ಸತ್ಯಾಗ್ರಹ ಕೈಬಿಟ್ಟು ಮಾತುಕತೆಗೆ ಬರುವಂತೆ ಪಂಚಮಸಾಲಿ ಶ್ರೀಗಳಿಗೆ ಸಿ.ಸಿ. ಪಾಟೀಲ ಮನವಿ

ಇವತ್ತು ಸಿಎಂ ಯಡಿಯೂರಪ್ಪನವರ ಹುಟ್ಟುಹಬ್ಬ. ಅವರಿಗೆ ಆರೋಗ್ಯ, ಆತ್ಮಬಲ ನೀಡಲಿ. ಸರ್ಕಾರ ಮತ್ತಷ್ಟು ಚೆನ್ನಾಗಿ ನಡೆಸುವಂತೆ ಅನುಗ್ರಹಿಸಲಿ. ಅವರ ಪರವಾಗಿ ಪೂರ್ಣಾಹುತಿಯಲ್ಲಿ ಪ್ರಾರ್ಥಿಸಿದ್ದೇವೆ ಎಂದು ಹೇಳಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.