ಚಿಕ್ಕಮಗಳೂರು: ಗಾಂಧೀಜಿ ಕೂಡ ತಾನು ಅಪಹಾಸ್ಯಕ್ಕೆ ಒಳಗಾಗೋದನ್ನ ಇಷ್ಟ ಪಡುತ್ತಿದ್ದರು, ಅದೇ ರೀತಿ ಕುಮಾರಸ್ವಾಮಿಯವರು ವರ್ತಿಸಬೇಕು ಎಂದು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ನನ್ನನ್ನ ಯಾರಾದರೂ ಸಕಾರಣದಿಂದ ಅಪಹಾಸ್ಯಕ್ಕೊಳಪಡಿಸಿದರೆ ನಾನು ಅದನ್ನು ಸಂತೋಷದಿಂದ ಸ್ವೀಕಾರ ಮಾಡುತ್ತೇನೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೂಡ ಮಿಣಿ - ಮಿಣಿ ಪೌಡರ್ ಹೇಳಿಕೆ ವೈರಲ್ ಆಗಿರೋದನ್ನು ಹರ್ಷದಿಂದ ಸ್ವೀಕರಿಸಬೇಕೆಂದು ಸಲಹೆ ನೀಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಚೌಳಹಿರಿಯೂರಿನಲ್ಲಿ ಮಾತನಾಡಿದ ಸಚಿವ ಸಿ.ಟಿ.ರವಿ, ಮಿಣಿ - ಮಿಣಿ ಪೌಡರ್ ಎಂದಿದ್ದು ಅವರೆ. ಅವರ ಬಾಯಿಂದ ಬರದಿದ್ದರೆ ವೈರಲ್ ಆಗುತ್ತಿರಲಿಲ್ಲ. ಅವರು ಅದನ್ನು ಡೆಮೋಕ್ರೆಟಿಕ್ ವೇ ನಲ್ಲಿ ಸ್ವೀಕರಿಸಬೇಕು. ಯಾರು ತನ್ನನ್ನು ತಾನು ಅಪಹಾಸ್ಯಕ್ಕೆ ಒಳಪಡಿಸಿಕೊಳ್ಳುತ್ತಾರೊ ಅವರು ಕೋಪಿಷ್ಠರಾಗಲ್ಲ. ನನ್ನನ್ನು ಅಪಹಾಸ್ಯಕ್ಕೆ ಒಳಪಡಿಸಿದರೆ ನಾನೂ ಸಂತೋಷದಿಂದ ಸ್ವೀಕರಿಸುತ್ತೇನೆ ಎಂದಿದ್ದಾರೆ.
ಹಾಸ್ಯವೂ ಕೂಡ ಡೆಮಾಕ್ರಸಿಯ ಬ್ಯೂಟಿ, ಅದನ್ನು ಹಾಗೇ ತೆಗೆದುಕೊಳ್ಳಬೇಕು. ದೇಶ ಹಾಗೂ ವಿದೇಶಗಳಲ್ಲಿ ಮೆಚ್ಚಿಕೊಂಡ ಪ್ರಧಾನಿ ಮೋದಿ ಬಗ್ಗೆ ಏನೆಲ್ಲಾ ಪದ ಬಳಕೆ ಮಾಡಿಲ್ಲ ಹೇಳಿ ಎಂದು ಸಿ.ಟಿ.ರವಿ ಪ್ರಶ್ನಿಸಿದ್ದಾರೆ.