ETV Bharat / state

ಮುಖ್ಯಮಂತ್ರಿ ಆಗಬೇಕೆಂದು ನಾನು ಗಡ್ಡ ಬಿಟ್ಟವನಲ್ಲ: ಎಲ್ಲದಕ್ಕೂ ಕಾಲ ಕೂಡಿಬರಬೇಕು ಎಂದ ಸಿ ಟಿ ರವಿ - ಸಂಪುಟ ರಚನೆ ಸುದ್ದಿ

ಸಿಎಂ ಸ್ಥಾನದ ಆಕಾಂಕ್ಷಿ ಎಂದು ಹೇಳಲಾಗಿದ್ದ ಸಿ ಟಿ ರವಿ ಈ ವಿಚಾರವನ್ನು ಅಲ್ಲಗೆಳೆದಿದ್ದಾರೆ. ಎಲ್ಲದಕ್ಕೂ ಕಾಲ ಕೂಡಿಬರಬೇಕು ಎಂದಿದ್ದಾರೆ. ಅಲ್ಲದೆ ಸಂಪುಟ ರಚನೆಯಲ್ಲಿ ಸಾಮಾಜಿಕ ನ್ಯಾಯ ಪ್ರಾದೇಶಿಕ ಸಮತೋಲನ ಕಾಪಾಡಿಕೊಳ್ಳಲಿದ್ದಾರೆ ಎಂಬ ನಂಬಿಕೆ ನನಗಿದೆ ಎಂದಿದ್ದಾರೆ.

ct-ravi
ಬಿಜೆಪಿ ರಾಷ್ಡ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ
author img

By

Published : Aug 1, 2021, 1:56 PM IST

Updated : Aug 1, 2021, 2:25 PM IST

ಚಿಕ್ಕಮಗಳೂರು: ನಾನು ಮುಖ್ಯಮಂತ್ರಿ ಆಗಬೇಕೆಂದು ಗಡ್ಡ ಬಿಟ್ಟವನಲ್ಲ. ಕಾಲೇಜು ದಿನಗಳಿಂದಲೂ ಗಡ್ಡ ಬಿಟ್ಟಿದ್ದೇನೆ. ಗಡ್ಡ ಬಿಟ್ಟವರು ಮುಖ್ಯಮಂತ್ರಿಯಾಗುತ್ತಾರೆ ಎಂದಾದರೆ ತುಂಬಾ ಜನ ಗಡ್ಡ ಬಿಡಬಹುದು ಎಂದು ಬಿಜೆಪಿ ರಾಷ್ಡ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಕ್ರಿಯಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಸಹ ಮುಖ್ಯಮಂತ್ರಿ ಸ್ಥಾನದಿಂದ ಬದಲಾಗುತ್ತಾರೆ. ರಾಜ್ಯದಲ್ಲಿ ಗಡ್ಡಧಾರಿಯೊಬ್ಬರು ಸಿಎಂ ಆಗ್ತಾರೆ ಎಂದು ವಿಜಯನಗರ ಜಿಲ್ಲೆಯ ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್​ ನುಡಿದಿರುವ ಭವಿಷ್ಯವಾಣಿ ಕುರಿತು ಪ್ರತಿಕ್ರಿಯಿಸಿದ ಅವರು, ನನಗೆ ಪಕ್ಷ ನಿಷ್ಠೆ ಹಾಗೂ ಪರಿಶ್ರಮ ಎರಡರ ಮೇಲೆ ಮಾತ್ರ ನಂಬಿಕೆ ಇದೆ. ರಾಜ್ಯದ ಹಿತವನ್ನು ಅದ್ಯತೆಯಾಗಿ ಇಟ್ಕೊಂಡು, ಸಾಮಾಜಿಕ ನ್ಯಾಯ ಪ್ರಾದೇಶಿಕ ಸಮತೋಲನ ಎರಡನ್ನು ಕಾಪಾಡಿಕೊಂಡು ವಿಸ್ತರಣೆ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ. ಒಳ್ಳೆಯ ಸಂಪುಟ ರಚನೆ ಮಾಡಿ ಅವರ ನೇತೃತ್ವದಲ್ಲಿ ಮತ್ತೆ ಚುನಾವಣೆ ಗೆದ್ದು ಬರಬೇಕು. ಅ ರೀತಿ ವಿಸ್ತರಣೆ ಮಾಡುತ್ತಾರೆ ಅನ್ನೋ ನಂಬಿಕೆ ಇದೆ ಎಂದಿದ್ದಾರೆ.

ಮುಖ್ಯಮಂತ್ರಿ ಆಗಬೇಕೆಂದು ನಾನು ಗಡ್ಡ ಬಿಟ್ಟವನಲ್ಲ ಸಿಎಂ ಹುದ್ದೆ ಕುರಿತು ಸಿ ಟಿ ರವಿ ಪ್ರತಿಕ್ರಿಯೆ

ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು 15 ದಿನಗಳ ಕಾಲ ಮಾಧ್ಯಮಗಳಲ್ಲಿ ಸುದ್ದಿಗಳು ಬಂದಿದ್ದವು. ತುಂಬಾ ಜನರ ಹೆಸರು ಕೂಡ ಬರುತ್ತಿತ್ತು. ಆದರೆ ಯೋಗ ಕೂಡ ಇರಬೇಕು. ಈ ಸಮಯದಲ್ಲಿ ಅನಂತ್ ಕುಮಾರ್ ಅವರು ಹೇಳಿದ ಮಾತುಗಳು ನೆನಪಿಗೆ ಬರುತ್ತಿವೆ. ಬಸವರಾಜ ಬೊಮ್ಮಾಯಿ ಅವರಿಗೆ ಯೋಗ ಕೂಡಿ ಬಂದಿದೆ. ಅವರಿಗೆ ಎಲ್ಲ ರೀತಿಯ ಸಹಕಾರವನ್ನು ನೀಡುತ್ತೇನೆ ಎಂದು ಸಿ ಟಿ ಸ್ಪಷ್ಟಪಡಿಸಿದರು.

ಮೇಕೆದಾಟು ಯೋಜನೆಗೆ ಕುರಿತು ಅಣ್ಣಾಮಲೈ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿ.ಟಿ ರವಿ, ಎರಡು ರಾಜ್ಯದ ಹಿತವನ್ನ ಇಟ್ಕೊಂಡು ಉಪವಾಸ ಮಾಡಲಿ, ಬೆಂಗಳೂರಿನಲ್ಲಿ ಶೇ.30ರಷ್ಟು ತಮಿಳು ನಾಡಿನವರೇ ಇದ್ದಾರೆ. ನಿಮಗೂ ಅನುಕೂಲ ಅಗಬೇಕು, ಕರ್ನಾಟಕಕ್ಕೂ ಅನುಕೂಲವಾಗುವಂತೆ ಮಧ್ಯಮ ಮಾರ್ಗದಲ್ಲಿ ಮೇಕೆದಾಟು ಮಾಡಬೇಕು. ಎರಡೂ ರಾಜ್ಯದ ಮುಖ್ಯಮಂತ್ರಿಗಳು ರಾಜಕಾರಣ ಮಾಡದೆ ವಾಸ್ತವಿಕ ನೆಲೆಯಲ್ಲಿ ಯೋಚನೆ ಮಾಡಲಿ ಎಂದು ಹೇಳಿದರು.

ಓದಿ: ಅಣ್ಣಾಮಲೈ ರಾಜಕೀಯಕ್ಕಾಗಿ ಉಪವಾಸ ಮಾಡುತ್ತಿದ್ದಾರೆ: ಪ್ರತಾಪ್ ಸಿಂಹ

Last Updated : Aug 1, 2021, 2:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.