ETV Bharat / state

ಕಾಂಗ್ರೆಸ್​​ಗೆ ಅಂಬೇಡ್ಕರ್ ಅಷ್ಟೇ ಅಲ್ಲ, ಯಾವುದೇ ಕ್ರಾಂತಿಕಾರಿಗಳನ್ನು ಕಂಡರೂ ಆಗಲ್ಲ: ಸಿ.ಟಿ ರವಿ ವಾಗ್ದಾಳಿ - ವಾಗ್ದಾಳಿ

ಅಂಬೇಡ್ಕರ್ ಬದುಕಿದ್ದಾಗಲೂ ಕಾಂಗ್ರೆಸ್‍ನವರು ವಿರೋಧ ಮಾಡಿದ್ದರು. ಚುನಾವಣೆಯಲ್ಲಿ ಸೋಲಿಸಿದ್ದರು. ಸತ್ತಾಗಲು ಅವಮಾನಿಸಿದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಾಗ್ದಾಳಿ ನಡೆಸಿದರು.

CT Ravi
ಸಿ.ಟಿ ರವಿ
author img

By

Published : Jun 17, 2023, 8:04 AM IST

ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿ.ಟಿ ರವಿ ವಾಗ್ದಾಳಿ

ಚಿಕ್ಕಮಗಳೂರು: ಕಾಂಗ್ರೆಸ್​​ಗೆ ಅಂಬೇಡ್ಕರ್ ಅವರನ್ನು ಕಂಡರೆ ಆಗುತ್ತಿರಲಿಲ್ಲ ಎಂದು ಭಾವಿಸಿದ್ದೆ. ಆದರೆ, ಅವರಿಗೆ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಅವರನ್ನು ಕಂಡರೂ ಆಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಾಗ್ದಾಳಿ ನಡೆಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ನಾವು ಮಾಡಿರುವ ಪಠ್ಯ ಪುಸ್ತಕವನ್ನು ಈ ಸರ್ಕಾರದ ವಿರುದ್ಧ ಜನರ ಮುಂದೆ ಇಡುತ್ತೇವೆ. ಅದರಲ್ಲಿ ಏನು ತಪ್ಪಾಗಿದೆ ಎಂದು ಜನರನ್ನು ಕೇಳುತ್ತೇವೆ. ಚಕ್ರವರ್ತಿ ಸೂಲಿ ಬೆಲೆಯವರು ಭಗತ್ ಸಿಂಗ್, ಸುಖದೇವ್, ರಾಜಗುರು ಬಗ್ಗೆ ದೇಶಭಕ್ತಿ ಪ್ರೇರಿತ ಲೇಖನ ಪಠ್ಯದಲ್ಲಿತ್ತು. ಇಲ್ಲಿಯವರೆಗೆ ಕಾಂಗ್ರೆಸ್​ಗೆ ಅಂಬೇಡ್ಕರ್ ಅವರನ್ನು ಮಾತ್ರ ಕಂಡರೆ ಆಗುತ್ತಿರಲಿಲ್ಲ ಎಂದುಕೊಂಡಿದ್ದೆ. ಆದರೆ, ಅವರಿಗೆ ಯಾವುದೇ ಕ್ರಾಂತಿಕಾರಿಗಳನ್ನು ಕಂಡರೂ ಆಗುವುದಿಲ್ಲ. ಅದರಲ್ಲಿ ಇದ್ದದ್ದು ಚಕ್ರವರ್ತಿ ಸೂಲೆಬೆಲೆ ಅವರ ಜೀವನದ ಪಠ್ಯ ಅಲ್ಲ. ಅಂಬೇಡ್ಕರ್ ಬದುಕಿದ್ದಾಗಲೂ ಕಾಂಗ್ರೆಸ್‍ನವರು ವಿರೋಧ ಮಾಡಿದ್ದರು. ಚುನಾವಣೆಯಲ್ಲಿ ಸೋಲಿಸಿದ್ದರು. ಸತ್ತಾಗಲು ಅವಮಾನಿಸಿದರು' ಎಂದು ಕಿಡಿ ಕಾರಿದರು.

ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ಜತೆ ರಾಹುಲ್ ಗಾಂಧಿ ಒಪ್ಪಂದ ದೇಶ ಭಕ್ತಿಗೆ ವಿರೋಧದ ಒಪ್ಪಂದ ಎಂದು ಅನುಮಾನ ಕಾಡುತ್ತಿದೆ. ಭಾರತ್ ತೇರೇ ತುಕಡೆ ಹೊಂಗೆ ಇನ್ಸಾ ಅಲ್ಲಾ ಅಂತ ಘೋಷಣೆ ಕೂಗಿದ ತುಕಡೆ ಗ್ಯಾಂಗಿಗೆ ಬೆಂಬಲ ಕೊಟ್ಟಿದ್ದಾರೆ. ಆದರೆ, ದೇಶಭಕ್ತಿಯ ಪ್ರೇರಣೆಯಿಂದ ಕೂಡಿದ ಪಾಠವನ್ನು ತೆಗೆದು ಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರು ದಲ್ಲಾಳಿಗಳ ಕಪಿಮುಷ್ಠಿಯಲ್ಲಿ: ಎಪಿಎಂಸಿ ಕಾಯ್ದೆ ತಿದ್ದುಪಡಿ ರದ್ದು ಮಾಡುವುದು ರೈತರನ್ನ ಉದ್ದಿಮೆದಾರರಾಗುವ ಅವಕಾಶವನ್ನ ತಪ್ಪಿಸುತ್ತದೆ. ಆದರೆ, ರೈತರು ದಲ್ಲಾಳಿಗಳ ಕಪಿಮುಷ್ಠಿಯಲ್ಲಿ ಸಿಲುಕಿ ಒದ್ದಾಡಬೇಕು ಎಂಬುದು ಕಾಂಗ್ರೆಸ್ ಉದ್ದೇಶವಾಗಿದೆ. ರೈತರಿಗೆ ಸತ್ಯದ ಅರಿವಾಗುವ ಕಾಲ ದೂರ ಇಲ್ಲ. ಇದರ ಅಡ್ಡ ಪರಿಣಾಮ ಕೆಲವೇ ದಿನಗಳಲ್ಲಿ ತಿಳಿಯಲಿದೆ. ಆಗ ಕಾಂಗ್ರೆಸ್ ಕೂಡ ಅಡ್ಡಡ್ಡ ಮಲಗುತ್ತದೆ. ರೈತ ತಾನು ಬೆಳೆದ ಬೆಳೆಗೆ ಎಲ್ಲಿ ಹೆಚ್ಚು ಬೆಲೆ ಸಿಗುತ್ತದೆಯೋ ಅಲ್ಲೇ ಮಾರಾಟ ಮಾಡಬಹುದಿತ್ತು. ಮುಕ್ತ ಮಾರಾಟಕ್ಕೆ ಎಪಿಎಂಸಿ ಕಾಯ್ದೆ ತಿದ್ದುಪಡಿಯಲ್ಲಿ ಅವಕಾಶವಿತ್ತು.

ರೈತ ತಾನು ಬೆಳೆದ ಬೆಳೆಯನ್ನ ತನ್ನ ಹೊಲ, ಅಹಮದಾಬಾದ್, ಲಕ್ನೋ, ತಿರುವನಂತಪುರಂ ಎಲ್ಲಿ ಹೆಚ್ಚು ಬೆಲೆ ಇರುತ್ತದೆಯೋ ಅಲ್ಲೇ ಮಾರಬಹುದಿತ್ತು. ಗ್ರಾಹಕರ ಸಂಘಟನೆಗಳಿಗೂ ನೇರವಾಗಿ ಸರಬರಾಜು ಮಾಡುವ ಅವಕಾಶವಿತ್ತು. ಈಗ ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದು ಮಾಡಿದರೆ ರೈತರು ಲೈಸೆನ್ಸ್ಡ್ ದಲ್ಲಾಳಿಗಳಿಗೆ ಮಾರಬೇಕು. ಇದರಿಂದ ರೈತರಿಗೆ ಲಾಭಕ್ಕಿಂತ ನಷ್ಟವೇ ಜಾಸ್ತಿ. ಇಂದಲ್ಲ ನಾಳೆ ರೈತರಿಗೆ ಸತ್ಯದ ಅರಿವಾಗಲಿದೆ. ಬಿಜೆಪಿ ರೈತರನ್ನ ದಲ್ಲಾಳಿಗಳ ಕಪಿ ಮುಷ್ಠಿಯಿಂದ ಮುಕ್ತ ಮಾಡಿತ್ತು. ಆದರೆ, ಕಾಂಗ್ರೆಸ್ ಈಗ ಮತ್ತೆ ರೈತರನ್ನ ದಲ್ಲಾಳಿಗಳ ಕಪಿ ಮುಷ್ಠಿಗೆ ಕೊಡುತ್ತಿದೆ ಎಂದು ಆರೋಪಿಸಿದ್ದಾರೆ.

ಮರು ಮತಾಂತರಕ್ಕೆ ಮುಂದಾಗಬೇಕು: ಮತಾಂತರ ನಿಷೇಧ ಕಾಯ್ದೆ ರದ್ದು ಮಾಡಲು ಮುಂದಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಸಾಮ, ದಾನ, ಭೇದ, ದಂಡ ನಾಲ್ಕನ್ನು ಬಳಸಿ ಮರು ಮತಾಂತರಕ್ಕೆ ಮುಂದಾಗಬೇಕು. ದೇಶ, ಹಿಂದೂ ಸಮಾಜವನ್ನ ಉಳಿಸಿಕೊಳ್ಳಲು ಅನಿವಾರ್ಯವಾಗಿ ಮಹಾ ಪಂಚಾಯಿತ್ ಕರೆಯಬೇಕು. ಮಠಾಧೀಶರು, ಸಮಾಜದ ಮುಖಂಡರು, ಜಗದ್ಗುರುಗಳು ಸನ್ಯಾಸಿಗಳ ಮಹಾ ಪಂಚಾಯತ್ ಕರೆಯಬೇಕು. ನಮ್ಮನ್ನ ನಾವು ಹಾಗೂ ದೇಶದ ರಕ್ಷಣೆ ಮಾಡಿ ಕೊಳ್ಳಲು ಸ್ವರಕ್ಷಣಾತ್ಮಕ ಕ್ರಮ ಕೈಗೊಳ್ಳಬೇಕು. ವಿವಿಧ ಸಮಾಜದ ಮಠಾಧೀಶರು ಮರು ಮತಾಂತರಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್​ನ ನಿಲುವೇನು?: ಬೇರೆ ಬೇರೆ ಕಾರಣಕ್ಕೆ ಹಿಂದೂ ಸಮಾಜದಿಂದ ದೂರ ಹೋದವರನ್ನ ಮರಳಿ ಹಿಂದೂ ಸಮಾಜಕ್ಕೆ ಕರೆ ತರಬೇಕು. ಹೇಗಿದ್ದರು ಸರ್ಕಾರವೇ ಮತಾಂತರಕ್ಕೆ ಮುಕ್ತವಾದ ಅವಕಾಶವನ್ನು ನೀಡಿದೆ. ಹಿಂದೂ ಧರ್ಮದ ಮರು ಮತಾಂತರಕ್ಕೆ ಮುಂದಾಗಬೇಕು. ಮತಾಂತರ ನಿಷೇಧ ಕಾಯ್ದೆಯನ್ನ ರದ್ದು ಮಾಡಲು ಮುಂದಾಗಿರುವ ಕಾಂಗ್ರೆಸ್​ನ ನಿಲುವೇನು?. ಕಾಂಗ್ರೆಸ್ ಬಲಾತ್ಕಾರದ ಮತಾಂತರದ ಪರವಾಗಿ ಇದೆಯೇ?. ಆಸೆ, ಆಮಿಷ, ಬಲತ್ಕಾರ, ಮೋಸದ ಮತಾಂತರಕ್ಕೆ ನಿಷೇಧ ಇದೆ. ಬಲವಂತದ ಮತಾಂತರ ಬಗ್ಗೆ ಕಾಂಗ್ರೆಸ್ ಪಕ್ಷದ ನಿಲುವೇನು?. ಬಲವಂತದ ಮತಾಂತರದ ಪರವಾಗಿ ಕಾಂಗ್ರೆಸ್ ಪಕ್ಷ ಇದೆಯೇ? ಎಂದು ಸಿ.ಟಿ ರವಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ರದ್ಧತಿ ವಿರುದ್ಧ ಪ್ರತಿಭಟನೆ ಅನಿವಾರ್ಯ: ಡಾ.ಕಲ್ಲಡ್ಕ ಪ್ರಭಾಕರ ಭಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.