ETV Bharat / state

'ಸಿದ್ದರಾಮಯ್ಯ ರಾಜೀನಾಮೆಯಿಂದ ಕಾಂಗ್ರೆಸ್​ನಲ್ಲಿ ಹಲವರಿಗೆ ಸಂತೋಷವಾಗಿದೆ' - CT Ravi comments on Siddaramaiah's resignation

ವಿಧಾನಸಭೆ ವಿಪಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ ನೀಡಿರುವ ರಾಜೀನಾಮೆಯಿಂದ ಕಾಂಗ್ರೆಸ್​ನಲ್ಲಿ ಹಲವರಿಗೆ ಸಂತೋಷವಾಗಿದೆ. ಅವರು ರಾಜಕೀಯದಿಂದ ನಿವೃತ್ತಿಯಾಗಲಿ ಅಂತ ನಾವೆಂದೂ ಬಯಸೋದಿಲ್ಲ. ನಮಗೆ ಅವರ ಮಾರ್ಗದರ್ಶನ ಬೇಕು. ಸೋಲಿನ ಬಗ್ಗೆ ಕಾಂಗ್ರೆಸ್​ ಅವಲೋಕನ ಮಾಡಿಕೊಳ್ಳಲು ಇದು ಸೂಕ್ತ ಸಂದರ್ಭ ಎಂದು ಸಚಿವ ಸಿ.ಟಿ ರವಿ ಹೇಳಿದ್ದಾರೆ.

C.T Ravi
ಸಿ.ಟಿ ರವಿ
author img

By

Published : Dec 10, 2019, 7:53 PM IST

ಚಿಕ್ಕಮಗಳೂರು: ಕಾಂಗ್ರೆಸ್‌ನ ಹಿರಿಯ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ 9ನೇ ತಾರೀಖು(ಉಪಚುನಾವಣೆ ಫಲಿತಾಂಶದ ದಿನ) ಸಿಹಿ ಸುದ್ದಿ ನೀಡುತ್ತೇನೆ ಎಂದು ಹೇಳಿದ್ದರು. ಈಗ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ರಾಜೀನಾಮೆ ಖರ್ಗೆಯಂತವರಿಗೆ ಸಿಹಿ ಸುದ್ದಿಯೇ ಆಗಿರಬೇಕು ಎಂದು ಸಚಿವ ಸಿ.ಟಿ ರವಿ ಕಾಲೆಳೆದರು.

ಸಚಿವ ಸಿ.ಟಿ.ರವಿ ಪ್ರತಿಕ್ರಿಯೆ

ಚಿಕ್ಕಮಗಳೂರಿನ ದತ್ತಪೀಠದಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್​ನ ಹಿರಿಯ ನಾಯಕರುಗಳಿಗೆ ಆಕ್ರೋಶ, ಅಸಮಾಧಾನ, ಅಸಹನೆ ಇತ್ತು. ಈಗ ಅದಕ್ಕೆ ಸ್ಪಂದನೆ ಸಿಕ್ಕಿದೆ. ಇದರಿಂದ ನಮಗೇನೂ ಆಗಬೇಕಾಗಿಲ್ಲ. ಸಿದ್ದರಾಮಯ್ಯ ಸವಾಲಾಗಿ ಸ್ವೀಕರಿಸಿದ ಉಪ ಚುನಾವಣೆಯಲ್ಲಿ 12 ಶಾಸಕರು ಹಾಗು ಒಬ್ಬ ಬಂಡಾಯ ಶಾಸಕರನ್ನು ಜನರು ಬಿಜೆಪಿಗೆ ನೀಡಿದ್ದಾರೆ. ಒಟ್ಟು ಶೇ 50ರಷ್ಟು ಮತ ಪ್ರಮಾಣ ಬಿಜೆಪಿಗೆ ಸಿಕ್ಕಿದೆ. ಸಿದ್ದರಾಮಯ್ಯ ಅವರ ರಾಜೀನಾಮೆಯಿಂದ ಅಥವಾ ಅವರು ಅಧಿಕಾರದಲ್ಲಿ ಮುಂದುವರೆಯೋದ್ರಿಂದ ಬಿಜೆಪಿ ಮೇಲೆ ಯಾವುದೇ ರೀತಿಯ ಪರಿಣಾಮವಿಲ್ಲ ಎಂದರು.

ಖಾತೆ ಹಂಚಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಯಾರಿಗೆ ಯಾವ ಖಾತೆ ನೀಡಬೇಕು ಎಂಬುದು ಮಖ್ಯಮಂತ್ರಿ ಹಾಗೂ ವರಿಷ್ಠರ ವಿವೇಚನೆಗೆ ಬಿಟ್ಟ ವಿಚಾರ. ಸಚಿವರಾಗೋದು ಜನರ ಕಲ್ಯಾಣಕ್ಕಾಗಿ. ಪಕ್ಷದ ಹಿತಾಸಕ್ತಿಯನ್ನು ಎಂದಿಗೂ ಮರೆಯಬಾರದು ಎಂದು ಕಿವಿಮಾತು ಹೇಳಿದ್ರು.

ಚಿಕ್ಕಬಳ್ಳಾಪುರದಲ್ಲಿ ನಾವು ಅಂದುಕೊಂಡಂತೆ ಆಗಿದೆ. ನಮಗೆ ಸ್ವಲ್ಪ ಮತಗಳು ಕಡಿಮೆ ಬಂದಿವೆ. ನಾವು ಯೋಜನಾ ಬದ್ದವಾಗಿ ಕೆಲಸ ಮಾಡಿದ್ದೇವೆ. ಸುಧಾಕರ್ ಅವರ ಹೆಸರು ಕೆಟ್ಟಿರಲಿಲ್ಲ. ನಮ್ಮ ಕೆಲಸದ ಶೈಲಿ ಸುಧಾಕರ್ ಅವರಿಗೆ ಗೊತ್ತಿರಲಿಲ್ಲ. ಅವರಿಗೆ ಇದ್ದಂತಹ ಆತಂಕ ದೂರವಾಗಿದೆ. ಮಂಡ್ಯದಲ್ಲಿ ಖಾತೆ ತೆರೆದಿರೋದು ನಮ್ಮ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ರು.

Intro:Kn_Ckm_03_Ct Ravi_av_7202347Body:
ಚಿಕ್ಕಮಗಳೂರು :-

ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡರು, ಕೇಂದ್ರ ಹಾಗೂ ರಾಜ್ಯದ ಹಿರಿಯ ಮುಖಂಡರು ಮಲ್ಲಿಕಾರ್ಜನ್ ಖರ್ಗೆ ಅವರು 9 ನೇ ತಾರೀಖು ಸಿಹಿ ಸುದ್ದಿ ನೀಡುತ್ತೇನೆ ಎಂದೂ ಹೇಳಿದ್ದರು. ಸಿದ್ದರಾಮಯ್ಯ ರಾಜೀನಾಮೇ ದಿನೇಶ್ ಗುಂಡೂರಾವ್ ರಾಜೀನಾಮೆ ಮಲ್ಲಿಕಾರ್ಜನ್ ಖರ್ಗೇ ಅಂತವರಿಗೆ ಸಿಹಿ ಸುದ್ದಿಯೇ ಇರಬೇಕು ಎಂದೂ ಚಿಕ್ಕಮಗಳೂರಿನ ದತ್ತಫೀಠದಲ್ಲಿ ಸಚಿವ ಸಿ ಟಿ ರವಿ ಹೇಳಿದ್ದಾರೆ.ಬಹಳ ಜನ ಕಾಂಗ್ರೇಸ್ ನ ಹಿರಿಯ ನಾಯಕರುಗಳು ಅವರಿಗೆ ಆಕ್ರೋಶ ಅಸಮಾಧಾನ ಅಸಹನೆ ಇತ್ತು. ಈಗ ಅದಕ್ಕೆ ಸ್ವಂದನೆ ಸಿಕ್ಕಿದೆ. ಇದರಿಂದ ನಮ್ಮಗೆ ಏನು ಆಗಬೇಕಾಗಿಲ್ಲ. ಸಿದ್ದರಾಮಯ್ಯ ಸವಾಲಾಗಿ ಸ್ವೀಕರಿಸಿದ ಚುನಾವಣೆಯಲ್ಲಿ 12 ಶಾಸಕರನ್ನು 1 ರೆಬೆಲ್ ಶಾಸಕನನ್ನ ಜನರು ಬಿಜೆಪಿಗೆ ನೀಡಿದ್ದಾರೆ.ಶೇ 50 ಮತದಾನ ಬಿಜೆಪಿಗೆ ಸಿಕ್ಕಿದೆ.ಸಿದ್ದರಾಮಯ್ಯ ಅವರ ರಾಜಿನಾಮೇಯಿಂದಾ ಅಥವಾ ಅಧಿಕಾರದಲ್ಲಿ ಮುಂದುವರೆಯೋದರಿಂದ ಬಿಜೆಪಿಗೆ ಏನು ಪರಿಣಾಮ ಬೀರೋಲ್ಲ.ಸಿದ್ದರಾಮಯ್ಯ ರಾಜಿನಾಮೇಯಿಂದಾ ಕಾಂಗ್ರೇಸ್ ನ ತುಂಬಾ ಜನರಿಗೆ ಸಂತೋಷವಾಗಿದೆ. ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಆಗಬೇಕು ಎಂದೂ ಬಯಸೋದಿಲ್ಲ. ಅವರ ಮಾರ್ಗದರ್ಶನ ಇರಬೇಕು.ಕಾಂಗ್ರೇಸ್ ಅವಲೋಕನ ಮಾಡಿಕೊಳ್ಳಲು ಸೂಕ್ತ ಸಂದರ್ಭ. ಮಕ್ಕಳನ್ನು ಜಾತಿ ರೂಪದಲ್ಲಿ ಹೊಡೆದು ಅಳಲು ಪ್ರಾರಂಭ ಮಾಡಿದ್ದರು. ಸೋಗಾಲಾಡಿ ರಾಜಕರಣ ಬಿಡೋದಕ್ಕೆ ಸೂಕ್ತ ಸಂದರ್ಭ.ಯಾವುದೇ ಬಲ ಸಮಾಜ ಓಡೆಯುವ ಕೆಲಸ ಆಗಬಾರದು. ಸಿದ್ದರಾಮಯ್ಯ ರಾಜೀನಾಮೇ ನೀಡಬೇಕು ಎಂದೂ ಬಯಸೋದಿಲ್ಲ. ಅವರ ರಚನಾತ್ಮಕ ಸಲಹೆ ಇರಲಿ. ಪೂರ್ವಗ್ರಹ ಪೀಢಿತ ಟೀಕೆ ಆಗಬಾರದು.ವಸ್ತು ನಿಷ್ಟದ ಟೀಕೆ ಮಾಡಬೇಕು.ದತ್ತಫೀಠದ ವಿಚಾರದಲ್ಲಿ ಸಿದ್ದರಾಮಯ್ಯ ಅಕ್ಷ್ಯಮ ಅಪರಾದ ಮಾಡಿದ್ದಾರೆ.ಸತ್ಯದ ಬದಲಿಗೆ ಅಸತ್ಯದ ತೀರ್ಪನ್ನು ನಾಗಮೋಹನ್ ದಾಸ್ ಸಮಿತಿ ಎತ್ತಿ ಹಿಡಿದಿದೆ. ಸಿದ್ದರಾಮಯ್ಯ ಮಾಡಿರುವ ಅಪರಾಧರವನ್ನು ಚಿಕ್ಕಮಗಳೂರು ಹಾಗೂ ರಾಜ್ಯದ ಜನತೆ ಮರೆಯಲು ಸಾಧ್ಯವಿಲ್ಲ.ಯಾರಿಗೆ ಯಾವ ಖಾತೆ ನೀಡಬೇಕು ಎಂಬುದು ಮಖ್ಯಮಂತ್ರಿ ಹಾಗೂ ವರಿಷ್ಠರ ವಿವೇಚನೆಗೆ ಬಿಟ್ಟದ್ದು. ಸಚಿವರಾಗ ಬೇಕಾಗಿರುವುದು ಜನರ ಕಲ್ಯಾಣಕ್ಕಾಗಿ. ಪಕ್ಷದ ಹಿತಸಾಕ್ತಿ ಎಂದಿಗೂ ಮರೆಯಬಾರದು. ಜನರ ಹಿತಾಸಕ್ತಿಯೂ ಮರೆಯಬಾರದು. ಚಿಕ್ಕಬಳ್ಳಾಪುರದಲ್ಲಿ ನಾವು ಅಂದುಕೊಂಡತೆ ಆಗಿದೆ. ಸ್ವಲ್ವ ಮತಗಳು ಕಡಿಮೆ ಬಂದಿವೆ. ಯೋಜನ ಬದ್ದವಾಗಿ ಕೆಲಸ ಮಾಡಿದ್ದೇವೆವ.ಸುಧಾಕರ್ ಅವರ ಹೆಸರು ಕೆಟ್ಟಿರಲಿಲ್ಲ. ನಮ್ಮ ಕೆಲಸದ ಶೈಲಿ ಸುಧಾಕರ್ ಅವರಿಗೆ ಗೊತ್ತಿರಲಿಲ್ಲ. ಅವರಿಗೆ ಇದ್ದಂತಹ ಆಂತಕ ದೂರವಾಗಿದೆ. ಮಂಡ್ಯದಲ್ಲಿ ಖಾತೆ ತೆರೆದಿರೋದು ನಮ್ಮ ಶಕ್ತಿ ಹೆಚ್ಚಾಗಿದೆ ಎಂದೂ ಚಿಕ್ಕಮಗಳೂರನ ದತ್ತಫೀಠದಲ್ಲಿ ಸಚಿವ ಸಿ ಟಿ ರವಿ ಹೇಳಿದರು......

Conclusion:ರಾಜಕುಮಾರ್....
ಈ ಟಿವಿ ಭಾರತ್....
ಚಿಕ್ಕಮಗಳೂರು.....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.