ETV Bharat / state

ರಾಜ್ಯವನ್ನು ರಕ್ಷಿಸುವಂತೆ ಈ ದೇವರ ಮೊರೆ ಹೋಗಲಿದ್ದಾರಂತೆ ಸಿಎಂ

ಈವರೆಗೆ ಶಾರದಾ ಪೀಠಕ್ಕೆ ಭೇಟಿ ನೀಡಿ ವಿವಿಧ ಪೂಜೆ ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾಗಿದ್ದ ಸಿಎಂ ಕುಮಾರಸ್ವಾಮಿ, ಇದೀಗ ಮತ್ತೊಂದು ದೇವರ ದರ್ಶನ ಪಡೆಯಲು ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಲಿದ್ದಾರಂತೆ. ಈ ವೇಳೆ ರಾಜ್ಯದ ಸುಭಿಕ್ಷೆಗಾಗಿ ದೇವರಲ್ಲಿ ಪ್ರಾರ್ಥಿಸಲಿದ್ದಾರೆ.

ಸಂಗ್ರಹ ಚಿತ್ರ
author img

By

Published : May 14, 2019, 1:17 PM IST

ಚಿಕ್ಕಮಗಳೂರು: ಆಗಾಗ್ಗೆ ದೇವಸ್ಥಾನ, ಪೂಜೆ, ಜಪ-ತಪ ಅಂತ ದೇವರುಗಳ ಮೊರೆ ಹೋಗುವ ಮುಖ್ಯಮಂತ್ರಿ ಕುಮಾರಸ್ವಾಮಿ, ಇದೀಗ ಜಿಲ್ಲೆಯ ಮತ್ತೊಂದು ದೇವರನ್ನು ಕಾಣಲು ಬರುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆ ದೇವಸ್ಥಾನ ಎಲ್ಲಿದೆ? ಸಿಎಂ ಇದೇ ದೇವಸ್ಥಾನಕ್ಕೆ ಏಕೆ ಬರುತ್ತಿದ್ದಾರೆ ಅನ್ನೋದು ಮಾತ್ರ ನಿಗೂಢವಾಗಿದೆ.

ಆಗಾಗ್ಗೆ ಶೃಂಗೇರಿ ಶಾರದಾ ಪೀಠಕ್ಕೆ ಬಂದು ದೇವಿಯ ದರ್ಶನ ಪಡೆದು ಹೋಗುವ ಕುಮಾರಸ್ವಾಮಿ, ಇದೀಗ ಋಷ್ಯ ಶೃಂಗೇಶ್ವರನನ್ನು ಕಾಣಲು ಆಗಮಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈವರೆಗೆ ಶಾರದಾ ಪೀಠಕ್ಕೆ ಭೇಟಿ ನೀಡಿ ವಿವಿಧ ಪೂಜೆ ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾಗಿದ್ದರು. ಆದರೆ, ಇದೀಗ ಋಷ್ಯ ಶೃಂಗೇಶ್ವರನನ್ನು ದರ್ಶನಕ್ಕೆ ಬರಲು ಕಾರಣವೇನು ಅನ್ನೋದು ಮಾತ್ರ ತಿಳಿದು ಬಂದಿಲ್ಲ. ಋಷ್ಯ ಶೃಂಗೇಶ್ವರ ಸಚಿವ ಡಿ.ಕೆ. ಶಿವಕುಮಾರ್​ ಅವರು ನಂಬಿದ ದೇವರು ಅನ್ನೋದು ವಿಶೇಷವಾದ್ರೆ ಇದು ಮಳೆ ತರಿಸುವ ದೇವರು ಅನ್ನೋದು ಮತ್ತೊಂದು ವಿಶೇಷ.

ಋಷ್ಯ ಶೃಂಗೇಶ್ವರ ದೇವಸ್ಥಾನ

ಋಷ್ಯ ಶೃಂಗೇಶ್ವರನನ್ನು ಕಾಣಲು ಕಾರಣ..?

ಮಳೆ ಪ್ರಮಾಣ ಕಡಿಮೆ ಆಗಿದ್ದರಿಂದ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸುವ ಲಕ್ಷಣಗಳು ಗೋಚರಿಸುತ್ತಿವೆ. ಹಾಗಾಗಿ ಇದರಿಂದ ಪಾರು ಮಾಡುವಂತೆ ಸಿಎಂ ಕುಮಾರಸ್ವಾಮಿ ಋಷ್ಯ ಶೃಂಗನ ಮೊರೆ ಹೋಗಲಿದ್ದಾರೆ ಎಂದು ತಿಳಿದು ಬಂದಿದೆ. ಋಷ್ಯ ಶೃಂಗ ಮಳೆ ಸುರಿಸುವ ದೇವರು ಅನ್ನೋದು ಸ್ಥಳೀಯರ ನಂಬಿಕೆ. ಈ ನಂಬಿಕೆಯಿಂದಲೇ ಕುಮಾರಸ್ವಾಮಿ ಇಲ್ಲಿಗೆ ಆಮಿಸಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಬರ ನಿವಾರಿಸುವಂತೆ ಆ ದೇವನಲ್ಲಿ ಪ್ರಾರ್ಥನೆಯನ್ನು ಸಹ ಸಲ್ಲಿಸಲಿದ್ದಾರಂತೆ.

ಇನ್ನು ಇದೇ ರೀತಿ ನಾಡಿಗೆ ಬರ ಬಂದಾಗ ಕರ್ನಾಟಕ ಅಲ್ಲದೇ ಹಲವು ರಾಜ್ಯದ ಮುಖ್ಯಮಂತ್ರಿಗಳು ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸಿದ್ದಾರಂತೆ. ಸಚಿವ ಡಿ.ಕೆ. ಶಿವಕುಮಾರ್ ಕೂಡ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿ, ಮಳೆಯಾದ ಮೇಲೆ ದೇವಸ್ಥಾನಕ್ಕೆ ತ್ರಿನೇತ್ರ ಮುಖವಾಡ ನೀಡಿ ಹರಕೆಯನ್ನು ಸಹ ತೀರಿಸಿದ್ದರು ಎಂದು ತಿಳಿದುಬಂದಿದೆ.

Intro:R_Kn_Ckm_02_14_Cm in kigga temple_Rajkumar_Ckm_pkg_7202347Body:

ಚಿಕ್ಕಮಗಳೂರು :-

ಕಳೆದ ವರ್ಷ ಹಾಗೂ ಈ ವರ್ಷ ಹಲವಾರು ಭಾರಿ ಶೃಂಗೇರಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಶಾರದಾಂಭೆಯಿಂದ ಕೂಗಳತೆ ದೂರದಲ್ಲಿದ್ದ ಆ ದೇವರನ್ನು ಮರೆತು ಬಿಟ್ಟಿದ್ರಾ ಗೊತ್ತಿಲ್ಲ. ಆ ದೇವಾ ಭೂಮಂಡಲವನ್ನು ತೇವಾಂಶ ಹಾಗೂ ಉಷ್ಣಕ್ಕೆ ಬೇಕಾದಂತೆ ಬದಲಿಸಬಲ್ಲ ಶಕ್ತಿವಂತ ಎಂಬುದು ಸ್ಥಳೀಯರ ನಂಬಿಕೆ. ಆದರೇ ಕುಮಾರಸ್ವಾಮಿ ಬರೀ ಶಾರದಾಂಭೆಗೆ ಕೈ ಮುಗಿದು ಪೂಜೆ ಮಾಡಿದ್ರು ಆದರೇ ಆ ದೇವರ ಬಲಿ ಹೋಗಲೇ ಇಲ್ಲ. ಈಗ ಆ ದೇವಸ್ಥಾನಕ್ಕೆ ಬರುತ್ತಾರೆ ಎಂಬ ಸುದ್ದಿ ಹಾಗದರೇ ಆ ದೇವಸ್ಥಾನ ಯಾವುದು ಅಲ್ಲಿನ ವಿಶೇಷ ಏನು ಯಾವ ಕಾರಣಕ್ಕಾಗಿ ಕುಮಾರಸ್ವಾಮಿ ಆಗಸುತ್ತಾರೆ ಎಂಬ ಕುರಿತು ಒಂದು ವರದಿ ಇಲ್ಲಿದೇ ನೋಡಿ......

ಹೌದು ಮುಖ್ಯಮಂತ್ರಿ ಆಗುವ ಮುನ್ನು ಹಲವಾರು ಬಾರೀ ಶೃಂಗೇರಿಯ ಶಾರದೇ ಸನ್ನಿಧಿಗೆ ಕುಮಾರಸ್ವಾಮಿ ಬೇಟಿ ನೀಡಿ ವಿವಿಧ ಪೂಜೆ ಮಾಡಿ ದೇವರ ಕೃಪೆಗೆ ಪಾತ್ರರಾಗಿದ್ದರು.ಸಚಿವ ಡಿ.ಕೆ.ಶಿವಕುಮಾರ್ ಅವರ ಇಷ್ಟ ದೈವ ಹಾಗೂ ಮಳೆ ದೇವರು ಎಂದೇ ಹೆಸರು ವಾಸಿಯಾಗಿರುವ ಋಷ್ಯ ಶೃಂಗೇಶ್ವರನ ಬಳಿ ಒಮ್ಮೆಯೂ ಮುಖ್ಯಮಂತ್ರಿ ಕುಮಾರಸ್ವಾಮಿ ಬರಲಿಲ್ಲ. ಮುಖ್ಯಮಂತ್ರಿ ಆಗುವ ಮುನ್ನ ಮತ್ತು ಆದ ನಂತರ ಶಾರದಾಂಭೆ ಸನ್ನಿದಿಯಲ್ಲಿ ಯಾಗ-ಯಜ್ಞ ಮಾಡಿಸಿದ್ದೆ ಜಾಸ್ತಿ ಆದರೇ ಈಗ ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೇ ಭೀಕರ ಬಿಸಿಲಿನಿಂದಾ ಬರ ತಲೆದೂರುವ ಲಕ್ಷಣಗಳು ಕಾಣಿಸುತ್ತಿವೆ. ಈಗ ಮಳೆಗಾಗಿ ಸಿ ಎಂ ಋಷ್ಯಶೃಂಗನ ಮೊರೆ ಹೋಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.ಆದರೇ ಮೊನ್ನೆ ಹೊದ 11 ನೇ ತಾರೀಖು ಇಲ್ಲಿಗೇ ಬರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು ಆದರೇ ಬರಲಿಲ್ಲ. ಆದರೇ ರಾಜ್ಯದಲ್ಲಿ ದಿನ ದಿಂದಾ ದಿನಕ್ಕೆ ಹೆಚ್ಚುತ್ತಿರುವ ಬರದ ನಿವಾರಣೆಗೆ ಋಷ್ಯಶೃಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಬರ ನಿವಾರಿಸುವಂತೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬೇಡಿಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.......

ತಪ್ಪಸ್ವಿಯೊಬ್ಬರ ರೇತಸ್ಸಿನಿಂದ ಜಿಂಕೆ ಹೊಟ್ಟೆಯಲ್ಲಿ ಹುಟ್ಟಿದ ಈ ಋಷ್ಯಶೃಂಗ ಮಳೆ ದೇವರೆಂದೇ ಖ್ಯಾತಿ ಪಡೆದಿದ್ದಾನೆ. ನಾಡಿಗೆ ಬರ ಬಂದಾಗ ಹಲವು ರಾಜ್ಯದ ಮುಖ್ಯಮಂತ್ರಿಗಳು ಇಲ್ಲಿ ಪೂಜೆ ಸಲ್ಲಿಸಿದ್ದಾರೆ. ಡಿ.ಕೆ.ಶಿವಕುಮಾರ್ ಕೂಡ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿ, ಮಳೆಯಾದ ಮೇಲೆ ತ್ರಿನೇತ್ರ ಮುಖವಾಡ ದೇವಸ್ಥಾನಕ್ಕೆ ನೀಡಿ ಹರಕೆಯನ್ನು ನೀಡಿದ್ದರು. ಕಳೆದ ವರ್ಷ ಮಲೆನಾಡನ್ನು ಜಲಕ್ಷಾಮದಿಂದ ಉಳಿಸಿದ್ದು ಇದೇ ದೈವ ಎಂಬುದು ಸ್ಥಳೀಯರ ನಂಬಿಕೆ. ಮಲೆನಾಡು ಭಾಗದಲ್ಲಿ ಧಾರಕಾರ ಮಳೆ ಬಂದಾಗ ಈ ಋಷ್ಯಶೃಂಗನಿಗೆ ಅಷ್ಟ ಗಂಧಗಳಲ್ಲೇ ಶ್ರೇಷ್ಠ ಗಂಧ ಅಗಿಲಿನ ಸೇವೆ ಮಾಡಿ ಮೂಲಕ ಮಳೆಯನ್ನ ನಿಯಂತ್ರನ ಮಾಡಲಾಗಿತ್ತು. ಮಳೆ ಬೇಕು-ಬೇಡವೆಂದಾಗ ಇಲ್ಲಿ ಪೂಜೆ ಮಾಡಿದರೇ ಎರಡೂ ಆಗುತ್ತದೇ ಎಂಬುದು ಇಲ್ಲಿನವರ ನಂಬಿಕೆಯಾಗಿದೆ.....

ಒಟ್ಟಾರೆಯಾಗಿ ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೇ ಬರ ನಿವಾರಿಸಲು ಮೊದಲ ಬಾರಿಗೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಳೆ ದೇವರ ಮೊರೆ ಹೋಗುತ್ತಿದ್ದಾರೆ ಎಂದೂ ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿದೆ.ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಭಕ್ತಿಗೆ ಮೆಚ್ಚಿ ಋಷ್ಯಶೃಂಗ ಕೂಡ ಸಮೃದ್ಧ ಮಳೆ ಸುರಿಸುತ್ತಾನ ಜನರು ರೈತರು ಹಾಗೂ ಜನರು ನೆಮ್ಮಧಿಯಿಂದಾ ಇರುತ್ತಾರ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.......

Conclusion:ರಾಜಕುಮಾರ್,,,,,,
ಈ ಟಿವಿ ಭಾರತ್,,,,,,,,
ಚಿಕ್ಕಮಗಳೂರು............
ETV Bharat Logo

Copyright © 2024 Ushodaya Enterprises Pvt. Ltd., All Rights Reserved.