ಚಿಕ್ಕಮಗಳೂರು: ಪ್ರವಾಸಕ್ಕೆಂದು ಬಂದ ಚೀನಾ ಪ್ರವಾಸಿಗನಿಗೆ ಸ್ಥಳೀಯ ಹೊಟೇಲ್ ಮಾಲೀಕರು ಉಳಿದುಕೊಳ್ಳಲು ಕೊಠಡಿ ನೀಡಲು ನಿರಾಕರಿಸಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರಕ್ಕೆ ಬುಲೆಟ್ ಬೈಕ್ನಲ್ಲಿ ಬಂದಿದ್ದ ಚೀನಿ ಪ್ರವಾಸಿಗನನ್ನು ಕಂಡು ಸ್ಥಳೀಯರು ಭಯ ಭೀತರಾಗಿದ್ದಾರೆ. ಸ್ಥಳೀಯ ಯಾವುದೇ ಹೊಟೇಲ್ನಲ್ಲಿ ಆತನಿಗೆ ಕೊಠಡಿ ನೀಡದ ಕಾರಣ ಪ್ರವಾಸಿಗ ಪುಂಗಿಮ್ ರಸ್ತೆಯಲ್ಲಿಯೇ ಟೆಂಟ್ ಹಾಕಿಕೊಂಡು ಮಲಗಿದ್ದಾನೆ.
ಸ್ಥಳೀಯರ ವರ್ತನೆ ಕಂಡು ಆತ 'ನನಗೆ ನೋ ಕೊರೊನ' ಎಂದೂ ಹೇಳಿದ್ದಾನೆ. ಕೊಟ್ಟಿಗೆಹಾರದಿಂದ ಬೆಂಗಳೂರಿನ ಕಡೆಗೆ ಪ್ರಯಾಣ ಮಾಡುತ್ತಿರುವ ಪುಂಗಿಮ್ ಮಾಸ್ಕ್ ಧರಿಸದೇ ಎಲ್ಲಾ ಕಡೆ ಪ್ರವಾಸ ಮಾಡುತ್ತಿದ್ದ. ಇದನ್ನು ನೋಡಿದ ಸ್ಥಳೀಯರು ಆತನಿಗೆ ಮಾಸ್ಕ್ ನೀಡಿ ಎಲ್ಲಾ ಕಡೆ ಇದನ್ನು ಧರಿಸುವಂತೆ ಮನವಿ ಮಾಡಿದ್ದಾರೆ. ಪುಂಗಿಮ್ ಮಾಸ್ಕ್ ಸ್ವೀಕರಿಸಿ, ಧರಿಸಿ ಸ್ಥಳೀಯರಿಗೆ ಧನ್ಯವಾದ ಹೇಳಿದ್ದಾನೆ.