ಚಿಕ್ಕಮಗಳೂರಲ್ಲಿ ಬೇಕಾಬಿಟ್ಟಿ ಓಡಾಡ್ತಿರೋ.. ಬಸ್ಕಿ ತೆಗಿಬೇಕಾದೀತು ಜೋಕೆ.. - Chikmagalur curfew news
ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರವೂ ಕೂಡ ಬಂದ್ ಆಗಿದೆ. ತಳ್ಳುವ ಗಾಡಿ ಮೂಲಕ ವ್ಯಾಪಾರಕ್ಕೆ ಪುರಸಭೆ ಅವಕಾಶ ಕಲ್ಪಿಸಿದ್ದು, ಬೇಕಾಬಿಟ್ಟಿ ಓಡಾಡುವವರಿಗೆ ರಸ್ತೆ ಮಧ್ಯೆಯೇ ಬಸ್ಕಿ ಶಿಕ್ಷೆ ನೀಡಲಾಗುತ್ತಿದೆ..
Chikamagaluru
ಚಿಕ್ಕಮಗಳೂರು : ಬೇಕಾ ಬಿಟ್ಟಿ ರಸ್ತೆಯಲ್ಲಿ ಓಡಾಡ್ತಿದ್ದವರಿಗೆ ಬಸ್ಕಿ ಶಿಕ್ಷೆಯನ್ನು ಚಿಕ್ಕಮಗಳೂರಿನಲ್ಲಿ ಕೊಡಲಾಗುತ್ತಿದೆ.
ಜಿಲ್ಲೆಯ ತರೀಕೆರೆ ನಗರದಲ್ಲಿ ಸುಖಾಸುಮ್ಮನೆ ಓಡಾಡ್ತಿದ್ದ ಜನರನ್ನು ಹಾಗೂ ಕುಂಟು ನೆಪ ಹೇಳಿ ಹೊರ ಬಂದ್ರೆ ಬಸ್ಕಿ ಶಿಕ್ಷೆಯನ್ನು ನೀಡಲಾಗುತ್ತಿದೆ.
ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ್ರಿಂದ ಸಿಟಿ ರೌಂಡ್ಸ್ ನಡೆದಿದ್ದು, 10 ಗಂಟೆ ನಂತರ ನಗರದಲ್ಲಿ ಜನಸಂಚಾರ ಸಂಪೂರ್ಣ ಬಂದ್ ಆಗಿರುತ್ತದೆ.
ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರವೂ ಕೂಡ ಬಂದ್ ಆಗಿದೆ. ತಳ್ಳುವ ಗಾಡಿ ಮೂಲಕ ವ್ಯಾಪಾರಕ್ಕೆ ಪುರಸಭೆ ಅವಕಾಶ ಕಲ್ಪಿಸಿದ್ದು, ಬೇಕಾಬಿಟ್ಟಿ ಓಡಾಡುವವರಿಗೆ ರಸ್ತೆ ಮಧ್ಯೆಯೇ ಬಸ್ಕಿ ಶಿಕ್ಷೆ ನೀಡಲಾಗುತ್ತಿದೆ.
Last Updated : May 1, 2021, 8:56 PM IST