ETV Bharat / state

USA ತಂಡದಲ್ಲಿ ಸ್ಥಾನ ಪಡೆದ ಕಾಫಿ ನಾಡಿನ ಈ ಪ್ರತಿಭೆಗೆ ಬೆಂಗಳೂರಲ್ಲಿ ವಿಶ್ವಕಪ್​ ಪಂದ್ಯವನ್ನಾಡುವ ಆಸೆ! - ಅಮೆರಿಕಾ ಕ್ರಿಕೆಟ್ ತಂಡ

ಬೌಲಿಂಗ್​ನಲ್ಲಿ ಅದ್ಭುತವಾಗಿ ಸ್ಪಿನ್ ಮಾಡುವ ಈತ, ಬ್ಯಾಟಿಂಗ್​ನಲ್ಲೂ ಅತ್ಯುತ್ತಮ ಕೌಶಲ್ಯ ಹೊಂದಿದ್ದಾರೆ. ಕ್ರಿಕೆಟ್​ ಅಆಇಈ ಗಳನ್ನು ಕರ್ನಾಟಕದಲ್ಲಿ ಕಲಿತ ನೋಸ್ತುಶ್​ ಉದ್ಯೋಗ ನಿಮಿತ್ತ ಯುಎಸ್​ಗೆ ತೆರಳಿದ್ದರು. ಇದೀಗ ಅಲ್ಲೇ ಯುಎಸ್​ಎ ರಾಷ್ಟ್ರೀಯ ತಂಡದ ಸದಸ್ಯನಾಗಿದ್ದಾರೆ.

ಯುಎಸ್​ಎ ಕ್ರಿಕೆಟರ್​ ನೋಸ್ತುಶ್ ಕೆಂಜಿಗೆ
ಯುಎಸ್​ಎ ಕ್ರಿಕೆಟರ್​ ನೋಸ್ತುಶ್ ಕೆಂಜಿಗೆ
author img

By

Published : Jan 25, 2022, 8:41 PM IST

ಚಿಕ್ಕಮಗಳೂರು: ಕ್ರಿಕೆಟ್​ ಹುಟ್ಟಿದ್ದು ಇಂಗ್ಲೆಂಡ್​ನಲ್ಲಾದರೂ, ಬೆಳೆದಿರುವುದು ಮತ್ತು ಬೆಳೆಯುತ್ತಿರುವುದು ಭಾರತದಲ್ಲಿ. ಇಡೀ ವಿಶ್ವ ಕ್ರಿಕೆಟ್​​ನಲ್ಲಿ ಪ್ರಬಲ ಶಕ್ತಿಯಾಗಿ ಬೆಳೆದಿರುವ ಭಾರತದಲ್ಲಿ ರಾಷ್ಟ್ರೀಯ ತಂಡದಲ್ಲಿ ಆಡುವುದಕ್ಕೆ ಅವಕಾಶ ಸಿಗುವುದು ತುಂಬಾ ಕಷ್ಟ. ಈ ಕಾರಣದಿಂದ ಈಗಷ್ಟೇ ಕ್ರಿಕೆಟ್​ನಲ್ಲಿ ಕಣ್ಣು ಬಿಡುತ್ತಿರುವ ಪಾಶ್ಚಿಮಾತ್ಯ ರಾಷ್ಟ್ರಗಳತ್ತಾ ಭಾರತೀಯ ಕ್ರಿಕೆಟಿಗರು ವಲಸೆ ಹೋಗುತ್ತಿದ್ದಾರೆ. ಕೆಲವರು ಉದ್ಯೋಗಕ್ಕೆಂದು ತೆರಳಿ ಅಲ್ಲಿನ ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶ ಪಡೆಯುತ್ತಿದ್ದಾರೆ.

ಇದೀಗ ಅಂತಹ ಆಟಗಾರರ ಸಾಲಿಗೆ ಕಾಫಿ ನಾಡು ಚಿಕ್ಕ ಮಗಳೂರಿನ ಯುವಕ ನೋಸ್ತುಶ್ ಕೆಂಜಿಗೆ ಕೂಡ ಸೇರಿಕೊಂಡಿದ್ದಾರೆ. ಬೌಲಿಂಗ್​ನಲ್ಲಿ ಅದ್ಭುತವಾಗಿ ಸ್ಪಿನ್ ಮಾಡುವ ಈತ, ಬ್ಯಾಟಿಂಗ್​ನಲ್ಲೂ ಅತ್ಯುತ್ತಮ ಕೌಶಲ್ಯ ಹೊಂದಿದ್ದಾರೆ. ಕ್ರಿಕೆಟ್​ ಅಆಇಈ ಗಳನ್ನು ಕರ್ನಾಟಕದಲ್ಲಿ ಕಲಿತ ನೋಸ್ತುಶ್​ ಉದ್ಯೋಗ ನಿಮಿತ್ತ ಯುಎಸ್​ಗೆ ತೆರಳಿ, ಇದೀಗ ಅಲ್ಲೇ ಯುಎಸ್​ಎ ರಾಷ್ಟ್ರೀಯ ತಂಡದ ಸದಸ್ಯನಾಗಿದ್ದಾರೆ.

ಯುಎಸ್​ಎ ಕ್ರಿಕೆಟ್ ತಂಡದಲ್ಲಿ ಆಡುತ್ತಿರುವ ನೋಸ್ತುಶ್ ಕೆಂಜಿಗೆ

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ನೋಸ್ತುಶ್ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದ ಪ್ರದೀಪ್-ಶೃತಿಕೀರ್ತಿ ದಂಪತಿಯ ಪುತ್ರ. ಎಡಗೈ ಸ್ಪಿನ್ನರ್ ಆಗಿರೋ ನೋಸ್ತುಶ್ ಯುಎಸ್​ಎ ಕ್ರಿಕೆಟ್ ತಂಡದ ಖಾಯಂ ಸದಸ್ಯನಾಗಿದ್ದಾರೆ. 2017 ರಲ್ಲಿ ಅಮೆರಿಕ ತಂಡದ ಪರ ಉಗಾಂಡ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ 64ನೇ ಆಟಗಾರನಾಗಿ ಪದಾರ್ಪಣೆ ಮಾಡಿದ ನೋಸ್ತುಶ್, ಈಗಾಗಲೇ 11 ಏಕದಿನ ಪಂದ್ಯಗಳನ್ನಾಡಿ ಗಮನ ಸೆಳೆದಿದ್ದಾರೆ. ಮುಂಬರುವ ಏಕದಿನ ವಿಶ್ವಕಪ್​​ ತಂಡದಲ್ಲೂ ಅವಕಾಶ ಪಡೆದಿದ್ದಾರೆಂದು ತಿಳಿದುಬಂದಿದೆ.

ಎಡಗೈ ಬೌಲರ್, ಬಲಗೈ ಬ್ಯಾಟರ್: ಕಾಫಿನಾಡಿನ ಈ ಪ್ರತಿಭೆ ಎಡಗೈಯಲ್ಲಿ ಬೌಲ್ ಮಾಡಿದ್ರೂ, ಬ್ಯಾಟ್ ಬೀಸೋದು ಬಲಗೈಯಲ್ಲಿ. ಸದ್ಯ ವಿಶ್ರಾಂತಿ ಪಡೆದು ತವರೂರಿಗೆ ಆಗಮಿಸಿರುವ ನೋಸ್ತುಶ್, ಇಲ್ಲೂ ಕೂಡ ಪ್ರಾಕ್ಟಿಸ್ ಮಾಡೋದನ್ನ ಮಾತ್ರ ಬಿಟ್ಟಿಲ್ಲ. ಭಾರತ ತಂಡದ ಮುಖ್ಯ ಕೋಚ್​ ಆಗಿರುವ ರಾಹುಲ್ ದ್ರಾವಿಡ್​ ರನ್ನ ಮಾದರಿಯಾಗಿ ತೆಗೆದುಕೊಂಡಿರುವ ನೋಸ್ತುಶ್, ಗೆಳೆಯರ ಜೊತೆ ನೆಟ್ ಪ್ರಾಕ್ಟೀಸ್ ಮಾಡ್ತಾ ತಮ್ಮ ಕ್ರಿಕೆಟ್ ಆಟವನ್ನ ಮುಂದುವರೆಸಿದ್ದಾರೆ.

ಮಯಾಂಕ್ ಆಗರ್ವಾಲ್, ಕರುಣ್ ನಾಯರ್, ಶ್ರೇಯಸ್ ಅಯ್ಯರ್ ಜೊತೆ ಕ್ಲಬ್ ಕ್ರಿಕೆಟ್​​ಮಲ್ಲಿ ಒಂದೇ ತಂಡವನ್ನ ಪ್ರತಿನಿಧಿಸುತ್ತಿದ್ದರು. ಬೆಂಗಳೂರಲ್ಲೇ ಕ್ರಿಕೆಟ್ ತರಬೇತಿ ಪಡೆದರೂ ಭಾರತದಲ್ಲಿ ಸ್ಪರ್ಧೆ ಹೆಚ್ಚಾಗಿರುವುದರಿಂದ ಹೆಚ್ಚು ಅವಕಾಶ ಸಿಗದೇ ಇದ್ದಿದ್ದರಿಂದ ಅಮೆರಿಕ ಪರ ಆಡುವಂತಾಗಿದೆ ಎನ್ನತ್ತಾರೆ ನೋಸ್ತುಶ್.

ಕ್ರಿಕೆಟ್ ಎಂಜಾಯ್ ಮಾಡುತ್ತೇನೆ: ದೇಶಕ ಪರ ಆಡಲು ಅವಕಾಶ ಸಿಗಲಿಲ್ಲ ಎನ್ನುವ ಕಾರಣ ಕ್ರಿಕೆಟ್ ನಿಲ್ಲಿಸಿಲ್ಲ. ನಾನು ಕ್ರಿಕೆಟ್ ಲವರ್, ಅಮೆರಿಕದ ಪರ ಆಡ್ತಿದ್ರೂ ಕ್ರಿಕೆಟ್ ಆಟವನ್ನು ಎಂಜಾಯ್ ಮಾಡುತ್ತಿದ್ದೇನೆ. ಮುಂದಿನ ಜೂನ್​ನಲ್ಲಿ ವಿಶ್ವಕಪ್​ ಕ್ವಾಲಿಫೈಯರ್ ಮ್ಯಾಚ್ ಇದೆ. ಅಲ್ಲಿ ಉತ್ತಮ ಪ್ರದರ್ಶನ ನೀಡಿ ಅರ್ಹತೆ ಭಾರತದಲ್ಲಿ ನಡೆಯಲಿರುವ ವಿಶ್ವಕಪ್​ನಲ್ಲಿ ಆಡುವ ಆಸೆಯಿದೆ. 2023ರ ವಿಶ್ವಕಪ್ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡುವ ಆಸೆಯಿದೆ ಎಂದು ತಮ್ಮ ಕನಸನ್ನ ಬಿಚ್ಚಿಟ್ಟಿದ್ದಾರೆ.

ಸಾಧನೆ ಮಾಡಬೇಕು ಅಂತಾ ಹೊರಟ್ರೆ ಎಲ್ಲಿ ಬೇಕಾದ್ರೂ ಮಾಡಬಹುದು ಅನ್ನೋದಕ್ಕೆ ನಿಜಕ್ಕೂ ನೋಸ್ತುಶ್ ಮಾದರಿಯಾಗಿದ್ದಾರೆ. ಕ್ರಿಕೆಟ್ ಅಂದ್ರೆ ಜೀವ ಬಿಡುವ ನೋಸ್ತುಶ್, ತಮಗೆ ಅವಕಾಶ ಸಿಗಲಿಲ್ಲ ಅಂತಾ ಕುಗ್ಗಲಿಲ್ಲ, ಸುಮ್ಮನೇ ಕೂರಲಿಲ್ಲ, ಬದಲಿಗೆ ಯುಎಸ್​ಎಗೆ ಹೋಗಿ ಆ ದೇಶವನ್ನ ಪ್ರತಿನಿಧಿಸುವ ಮಟ್ಟಕ್ಕೆ ಬೆಳೆದು ತೋರಿಸಿದ್ದಾರೆ. ಅಮೆರಿಕ ಕ್ರಿಕೆಟ್ ತಂಡದಲ್ಲಿ ಕಾಫಿನಾಡಿನ ಯುವಕನ ಕಮಾಲ್​ಗೆ ಕ್ರಿಕೆಟ್ ಪ್ರೇಮಿಗಳು ಸಂತಸ ಪಡುತ್ತಿದ್ದಾರೆ.

ಇದನ್ನೂ ಓದಿ:ಈ ಬಾರಿ ಐಪಿಎಲ್​ನಲ್ಲಿ ಅವಕಾಶ ಸಿಗದಿದ್ದರೆ, ಮುಂದೆಂದು ಸಿಗುವುದಿಲ್ಲ: ಬಿಬಿಎಲ್ ಸ್ಟಾರ್ ಮೆಕ್​ಡರ್ಮಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.