ಚಿಕ್ಕಮಗಳೂರು: ರಸ್ತೆ ಬದಿ ಹಾಕಿದ್ದ ಅಡಿಕೆ ಸಿಪ್ಪೆಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಗ್ರಾಮದ ತುಂಬಾ ಹೊಗೆ ಆವರಿಸಿರುವ ಘಟನೆ ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ನಡೆದಿದೆ.
ಓದಿ: ಹೌತಿ ಬಂಡುಕೋರರಿಂದ ಕ್ಷಿಪಣಿ ದಾಳಿ: 30 ಸೈನಿಕರು ಗಂಭೀರ
ತರೀಕೆರೆ ತಾಲೂಕಿನ ಬಹುತೇಕ ಭಾಗ ಅಡಿಕೆ ಉದ್ಯಮವನ್ನೇ ಆಶ್ರಯಿಸಿದೆ. ಈಗ ಅಡಿಕೆ ಕೊಯ್ಲಿನ ಸಮಯ ಮುಗಿದಿದೆ. ಸುಲಿದ ಅಡಿಕೆಯ ಸಿಪ್ಪೆಯನ್ನ ಒಣಗಲೆಂದು ಕೆಲವರು ರಸ್ತೆ ಬದಿ ಸುರಿಯುತ್ತಾರೆ. ಹೀಗೆ ಸುರಿದ ಅಡಿಕೆ ಸಿಪ್ಪೆಗೆ ಆಕಸ್ಮಿಕ ಬೆಂಕಿ ತಗುಲಿ ಈ ಅವಘಡ ಸಂಭವಿಸಿದೆ.
ಅಡಿಕೆ ಸಿಪ್ಪೆ ಜೋರಾಗಿ ಹೊತ್ತಿ ಉರಿಯದಿದ್ದರೂ ಬಾವಿಕೆರೆ ಗ್ರಾಮದ ತುಂಬಾ ಹೊಗೆ ಆವರಿಸಿದೆ. ಇದರಿಂದ ಸ್ಥಳಿಯರು ಆತಂಕಕ್ಕೀಡಾಗಿದ್ದಾರೆ. ಗ್ರಾಮದಲ್ಲಿ ಅಕ್ಕಪಕ್ಕ ನಿಂತಿದ್ದವರೂ ಕಾಣದಂತೆ ಆಗಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಕೂಡ ಹರಸಾಹಸ ಪಟ್ಟಿದ್ದಾರೆ.