ಚಿಕ್ಕಮಗಳೂರು : ಹೃದಯಾಘಾತದಿಂದ ಜಿಲ್ಲೆಯ ಸಿಐಎಸ್ಎಫ್ ಯೋಧರೊಬ್ಬರು ಮೃತಪಟ್ಟಿದ್ದಾರೆ.
ಉತ್ತರಪ್ರದೇಶದ ಲಖನೌದಲ್ಲಿ ಮೃತಪಟ್ಟಿರುವ ಯೋಧ ಮಂಜಪ್ಪ ಅವರು, ಜಿಲ್ಲೆಯ ಕಡೂರು ತಾಲೂಕಿನ ಹಿರೇನಲ್ಲೂರು ಗ್ರಾಮದ ನಿವಾಸಿ ಎಂಬುದು ತಿಳಿದು ಬಂದಿದೆ.
ಓದಿ: ನಮ್ಮ ಬೇಡಿಕೆ ಒಪ್ಪುವವರೆಗೆ ಸದನದಲ್ಲಿ ಧರಣಿ ಮುಂದುವರೆಸುತ್ತೇವೆ: ಸಿದ್ದರಾಮಯ್ಯ
ನಾಳೆ ಬೆಳಗ್ಗೆ ಮೃತ ಯೋಧನ ದೇಹವನ್ನು ಗ್ರಾಮಕ್ಕೆ ತರಲಾಗುತ್ತದೆ. ಯೋಧ ಸಾವನ್ನಪ್ಪಿರುವ ಘಟನೆ ತಿಳಿದ ಕೂಡಲೇ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮವೇ ಶೋಕಾಚರಣೆಯಲ್ಲಿದೆ.