ETV Bharat / state

ಕೇಂದ್ರದ ವಿದ್ಯುತ್ ಮಸೂದೆ ರೈತ ವಿರೋಧಿ: ರಾಜ್ಯ ಕಿಸಾನ್ ಸಂಘಟನೆ ಆರೋಪ - ಕೇಂದ್ರದ ವಿದ್ಯುತ್ ಮಸೂದೆ ರೈತ ವಿರೋಧಿ

ರಾಜ್ಯದಲ್ಲಿ ಈ ಹಿಂದೆ ಕೃಷಿ ಪಂಪ್​ಸೆಟ್​ಗಳಿಗೆ ಉಚಿತವಾಗಿ ವಿದ್ಯುತ್​ ನೀಡಲಾಗುತ್ತಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ ರೈತರಿಗೆ ನೀಡುತ್ತಿರುವ ಉಚಿತ ವಿದ್ಯತ್​ ಕಡಿತಕ್ಕೆ ಪ್ರಸ್ತಾಪ ಮಾಡಿದ್ದು, ರೈತ ವಿರೋಧಿಯಾಗಿದೆ ಎಂದು ಕರ್ನಾಟಕ ಕಿಸಾನ್ ಘಟಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

Sachin Meega
ಕೇಂದ್ರದ ವಿದ್ಯುತ್ ಮಸೂದೆ ರೈತ ವಿರೋಧಿ: ಸಚಿನ್ ಮೀಗಾ
author img

By

Published : May 26, 2020, 8:01 PM IST

ಚಿಕ್ಕಮಗಳೂರು: ಕೇಂದ್ರ ಸರ್ಕಾರ ವಿದ್ಯುತ್ ಮಸೂದೆ ಹೊರಡಿಸಲು ತಯಾರಿ ಮಾಡುತ್ತಿರುವುದು ದೊಡ್ಡ ದುರಂತ ಎಂದು ಕರ್ನಾಟಕ ಕಿಸಾನ್ ಘಟಕದ ರಾಜ್ಯಧ್ಯಕ್ಷ ಸಚಿನ್ ಮೀಗಾ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಕಿಸಾನ್ ಘಟಕದ ರಾಜ್ಯಧ್ಯಕ್ಷ ಸಚಿನ್ ಮೀಗಾ

ರಾಜ್ಯದಲ್ಲಿ ಈ ಹಿಂದೆ ಕೃಷಿ ಪಂಪ್​ಸೆಟ್​ಗಳಿಗೆ ಉಚಿತ ವಿದ್ಯುತ್ ಸೇವೆ​ ನೀಡಲಾಗುತ್ತಿತ್ತು. ಇದೀಗ ಕೇಂದ್ರ ಸರ್ಕಾರ ರೈತರಿಗೆ ನೀಡುತ್ತಿರುವ ಉಚಿತ ವಿದ್ಯತ್​ ಕಡಿತಕ್ಕೆ ಪ್ರಸ್ತಾಪ ಮಾಡಿದ್ದು, ಇದು ರೈತ ವಿರೋಧಿಯಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ರೈತರ ಮೇಲೆ ನಿರಂತರ ಶೋಷಣೆ ನಡೆಯುತ್ತಿದೆ. ಪ್ರಧಾನಿ ಮೋದಿ ಅವರ ಸರ್ಕಾರ ವಿದ್ಯುತ್ ಮಸೂದೆಯನ್ನು ರಾಜ್ಯ ಸರ್ಕಾರ ಕಳುಹಿಸಿ ಕೊಟ್ಟಿದೆ. ಅಧಿಕಾರಿಗಳು ಸರ್ಕಾರಕ್ಕೆ ಯಾವ ರೀತಿಯಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂಬುದು ಕಣ್ಣೀಗೆ ಕಾಣಿಸುತ್ತಿದೆ ಎಂದರು.

ರಾಜ್ಯದಲ್ಲಿ ರೈತರಿಗೆ ಉಚಿತವಾಗಿ 10 ಹೆಚ್​ಪಿ ವಿದ್ಯುತ್ ದೊರಕುತ್ತಿತ್ತು. ಇಂತಹ ಮಸೂದೆ ಜಾರಿ ಮಾಡಿ ರೈತರ ಕೈಯಿಂದ ಹಣ ಕಿತ್ತು ಕೊಳ್ಳುವ ಕೆಲಸವನ್ನು ಪ್ರಧಾನಿಗಳು ಮಾಡಲು ಹೊರಟ್ಟಿದ್ದಾರೆ. ಇದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಈ ಮಸೂದೆಯನ್ನು ಅನುಷ್ಠಾನ ಮಾಡಲು ಬಿಡುವುದಿಲ್ಲ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.