ಚಿಕ್ಕಮಗಳೂರು : 16 ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಾ ಕಾರ್ಯಕ್ರಮ ಮುಂದುಡುವುಕೆಗೆ ಪೋಲಿಸರು ನೀಡಿದ್ದ ನೋಟಿಸ್ ಕಾರಣವಾಗಿತ್ತು. ಅದರಲ್ಲಿ ಉಲ್ಲೇಖಿಸಿದ್ದ ಪೆಟ್ರೋಲ್ ಬಾಂಬ್ ದಾಳಿ ಅಂಶದ ವಿಷಯಕ್ಕೆ ಜಿಲ್ಲಾ ಸಾಹಿತ್ಯದ ಅಭಿಮಾನಿಗಳು ಹಾಗೂ ಸಾಹಿತ್ಯಸಕ್ತರು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಪೋಲಿಸರ ವಿರುದ್ಧ ರೊಚ್ಚಿಗೆದ್ದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ 16 ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಾ ಕಾರ್ಯಕ್ರಮ ಇದೇ ತಿಂಗಳು 10 ಮತ್ತು 11 ರಂದೂ ಎರಡೂ ದಿನಗಳ ಕಾಲ ಆಯೋಜನೆಗೊಂಡಿತ್ತು. ಮೊದಲ ದಿನ ಜಿಲ್ಲಾ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ತುಂಬಾ ಅದ್ದೂರಿಯಾಗಿ ನಡೆದಿತ್ತು.
ಈ ಮಧ್ಯೆ ನಕ್ಸಲ್ ವಿರೋಧಿ ಸಂಘಟನೆ ಹಾಗೂ ಸಾಹಿತ್ಯ ಪರಿಷತ್ ಉಳಿಸಿ ವೇದಿಕೆ ವತಿಯಿಂದಾ ಸಮ್ಮೇಳನ ನಡೆಯುತ್ತಿದ್ದ ಸಭಾಂಗಣದ ಮುಂಭಾಗದಲ್ಲಿ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಲ್ಕುಳಿ ವಿಠಲ್ ಹೆಗ್ಡೆ ಅವರನ್ನು ಬದಾಲವಣೆ ಮಾಡಿ ಎಂದೂ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದ್ದವು. ಇದಕ್ಕೆ ತಲೆ ಕೆಡಿಸಿಕೊಳ್ಳದ ಜಿಲ್ಲಾ ಸಾಹಿತ್ಯ ಪರಿಷತ್ ಎರಡನೇ ದಿನದ ಕಾರ್ಯಕ್ರಮ ನಡೆಸೋದಕ್ಕೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿತ್ತು.
ಆದರೆ, ರಾತ್ರಿ ಜಿಲ್ಲಾ ಪೋಲಿಸ್ ಇಲಾಖೆ ಜಿಲ್ಲಾ ಸಾಹಿತ್ಯ ಪರಿಷತ್ಗೆ ನೋಟಿಸ್ ಜಾರಿ ಮಾಡಿದ್ದು. ನಾಳಿನ ಎರಡನೇ ದಿನದ ಸಮ್ಮೇಳನದ ಕಾರ್ಯಕ್ರಮಗಳು ಯಾವುದೇ ಕಾರಣಕ್ಕೂ ಮಾಡಬಾರದು. ಒಂದು ವೇಳೆ ಮಾಡಿದರೇ ಈ ಕಾರ್ಯಕ್ರಮ ನಡೆಯುವ ಜಾಗದ ಮೇಲೆ ಪೆಟ್ರೋಲ್ ಬಾಂಬ್ ದಾಳಿಯಾಗುವ ಸಾಧ್ಯತೆ ಇದ್ದು ಸಾವಿರಾರೂ ಜನರು ಸಮ್ಮೇಳನಕ್ಕೆ ನುಗ್ಗುವ ಸಾಧ್ಯತೆ ಇದೆ. ಇದರಿಂದ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದೂ ಹೇಳಿ ನೋಟಿಸ್ ಜಾರಿ ಮಾಡಿದ ಕೂಡಲೇ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಪರಿಷತ್ ಎರಡನೇ ದಿನದ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮವನ್ನು ತಾತ್ಕಲಿಕವಾಗಿ ಮುಂದೂಡಿದೆ.
ಅನಂತರದಲ್ಲಿ ಶುರು ಆಗಿದ್ದೆ ಬೇರೆ, ಪೋಲಿಸರು ನೀಡಿದ್ದ ನೋಟಿಸ್ನಲ್ಲಿ ಪೆಟ್ರೋಲ್ ಬಾಂಬ್ ದಾಳಿಯಾಗುವ ಸಾದ್ಯತೆ ಇದೆ ಎಂಬ ಅಂಶವನ್ನು ಕೂಡ ಉಲ್ಲೇಖಿಸಲಾಗಿತ್ತು. ಇದನ್ನೇ ಬಲವಾಗಿ ಇಟ್ಟುಕೊಂಡು ಜಿಲ್ಲಾ ಸಾಹಿತ್ಯದ ಅಭಿಮಾನಿಗಳು ಹಾಗೂ ಸಾಹಿತ್ಯಸಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಪೋಲಿಸ್ ಇಲಾಖೆಯ ವಿರುದ್ದ ಅಭಿಯಾನ ಪ್ರಾರಂಭ ಮಾಡಿದರು.
ಪೆಟ್ರೋಲ್ ಬಾಂಬ್ ಕಿಡಿಗೇಡಿಗಳನ್ನು ಕೂಡಲೇ ಪತ್ತೆ ಮಾಡಬೇಕು ಹಾಗೂ ಅವರನ್ನು ಕೂಡಲೇ ಬಂಧಿಸಬೇಕು ಎಂದೂ ಆಗ್ರಹಿಸಿ ಅಭಿಯಾನ ಪ್ರಾರಂಭ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳನ್ನು ಶೇರ್ ಮಾಡುವುದರ ಮೂಲಕ ಪೋಲಿಸ್ ಇಲಾಖೆ ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದೂ ಆಗ್ರಹಿಸುತ್ತಿದ್ದಾರೆ. ಪೆಟ್ರೋಲ್ ಬಾಂಬ್ ಉಗ್ರರನ್ನು ಬಂಧಿಸಿ ಇಲ್ಲವಾದರೇ ರಾಜೀನಾಮೇ ನೀಡಿ ಎಂದೂ ಪೋಲಿಸರ ವಿರುದ್ದ ರೊಚ್ಚಿಗೆದ್ದಿರುವ ಸಾಹಿತ್ಯಸಕ್ತರು ನೇರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸುತ್ತಿದ್ದು ಜಿಲ್ಲಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣದಿಂದಾ ಕ್ಷಣಕ್ಕೆ ಈ ಅಭಿಯಾನ ಹೆಚ್ಚಿನ ತೀವ್ರತೆಯನ್ನು ಪಡೆದುಕೊಳ್ಳುತ್ತಿದೆ.