ಚಿಕ್ಕಮಗಳೂರು : ವಿಧಾನ ಪರಿಷತ್ ಹಣಾಹಣಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಎಂ ಕೆ ಪ್ರಾಣೇಶ್ ಗೆಲುವಿನ ನಗೆ ಬೀರಿದ್ದಾರೆ.
ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನಡುವಿನ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆ ಇತ್ತು. ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್ ಅವರು ಕಾಂಗ್ರೆಸ್ನ ಗಾಯತ್ರಿ ಶಾಂತೇಗೌಡ ವಿರುದ್ಧ ಜಯ ಸಾಧಿಸಿದ್ದಾರೆ.
ಕೇವಲ 6 ಮತಗಳ ಅಂತರದಲ್ಲಿ ಪ್ರಾಣೇಶ್‌ಗೆ ಗೆಲುವು ಒಲಿದಿದೆ. ಕ್ಷೇತ್ರದಲ್ಲಿ ಗೆಲುವಿಗೆ 1,186 ಮತ ಅಗತ್ಯವಿತ್ತು, ಇದರಲ್ಲಿ ಪ್ರಾಣೇಶ್ 1188 ಮತ ಪಡೆದರೆ, 1,182 ಮತಗಳು ಕೈ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಪಾಲಾಗಿವೆ. ಚಲಾವಣೆಯಾದ ಮತಗಳಲ್ಲಿ 39 ಅಸಿಂಧುವಾಗಿದ್ದರೆ, 7 ಸದಸ್ಯರು ಮತ ಹಾಕಿರಲಿಲ್ಲ, ಇದೂ ಕೂಡ ಫಲಿತಾಂಶದಲ್ಲಿ ಪ್ರಮುಖ ಪಾತ್ರ ವಹಿಸಿದಂತಾಗಿದೆ.
ಕಾಫಿ ನಾಡಿನಲ್ಲಿ ಗೆಲುವಿನ ಬಳಿಕ ಒಂದೆಡೆ ಬಿಜೆಪಿ ಸಂಭ್ರಮಾಚರಣೆ ನಡೆಸಿದರೆ, ಮತ್ತೊಂದೆಡೆ ಎಣಿಕೆ ಕೇಂದ್ರದ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮರು ಮತ ಎಣಿಕೆಗೆ ಆಗ್ರಹಿಸಿದರು.