ಚಿಕ್ಕಮಗಳೂರು: ಸ್ವಾತಂತ್ರ್ಯ ಬಂದಾಗಿನಿಂದ ಬಸ್ಸನ್ನೇ ಕಾಣದ ಗ್ರಾಮಕ್ಕೆ 75 ನೇ ಸ್ವಾತಂತ್ರ್ಯ ದಿನಾಚರಣೆಯ ಹೊಸ್ತಿಲಲ್ಲಿ ಬಸ್ ಸಂಚಾರ ಸೌಲಭ್ಯ ದೊರತಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಹೆಗ್ಗುಡ್ಲು, ಮತ್ತಿಕಟ್ಟೆ, ದೊಡ್ಡನಂದಿ ಸೇರಿದಂತೆ ನಾಲ್ಕೈದು ಗ್ರಾಮಗಳಿಗೆ ಬಸ್ ಸೌಲಭ್ಯವೇ ಇರಲಿಲ್ಲ. ಈ ಭಾಗದಲ್ಲಿ ಸುಮಾರು 250 ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದಾರೆ.
ಬಣಕಲ್ ಹೋಬಳಿಗೆ ಬರಲು ಗ್ರಾಮಗಳ ಜನರು ಹಾಗೂ ಶಾಲಾ-ಕಾಲೇಜು ಮಕ್ಕಳು ಕೂಡ ಸುಮಾರು 5-7 ಕಿ.ಮೀ. ಕಾಲ್ನಡಿಗೆಯಲ್ಲೇ ಬರಬೇಕಿತ್ತು. ಇದೀಗ ಸ್ಥಳೀಯರ ದಶಕಗಳ ಮನವಿ ಫಲ ನೀಡಿದೆ. ದಿನಕ್ಕೆರಡು ಬಾರಿ ಓಡಾಡುವ ಬಸ್ಸು ಬೆಳಗ್ಗೆ-ಸಂಜೆ ಈ ಹಳ್ಳಿಗಳಿಗೆ ಹೋಗಿ ಬರಲಿದೆ. ಹಳ್ಳಿಗಳಿಗೆ ತೆರಳಲು ಎರಡು ಕೋಟಿ ರೂ ವೆಚ್ಚದಲ್ಲಿ ರಸ್ತೆ ನಿರ್ಮಾಣವಾಗಿದೆ. ಇಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಬಸ್ ಸಂಚಾರವನ್ನು ಉದ್ಘಾಟಿಸಿ, ಮತ್ತಿಕಟ್ಟೆ ಗ್ರಾಮದಿಂದ ಬಣಕಲ್‍ವರೆಗೂ ಸ್ಥಳಿಯರ ಜತೆ ಪ್ರಯಾಣಿಸಿದರು.
ಇದನ್ನೂ ಓದಿ : 'ಹರ್ ಘರ್ ತಿರಂಗಾ' ಯಶಸ್ವಿಗೆ ಬಿಜೆಪಿ ಸಜ್ಜು.. 75 ಲಕ್ಷ ಮನೆಗಳ ಮೇಲೆ ತ್ರಿವರ್ಣ ಧ್ವಜಾರೋಹಣ