ETV Bharat / state

ಕಾಫಿ ಬೆಳೆಗಾರರು ಮತ್ತು ಕಾರ್ಮಿಕರ ನಡುವೆ ಸಂಘರ್ಷ ಉಂಟು ಮಾಡಲು ಯತ್ನ: ಕಾಫಿ ಬೆಳೆಗಾರರ ಸಂಘ - ಈಟಿವಿ ಭಾರತ ಕನ್ನಡ

ದಲಿತ ಕೂಲಿ ಕಾರ್ಮಿಕರ ಮೇಲೆ ಹಲ್ಲೆ ಪ್ರಕರಣ. ಕಾಫಿ ಬೆಳೆಗಾರರು, ಕೂಲಿ ಕಾರ್ಮಿಕರ ನಡುವೆ ಸಂಘರ್ಷ ಉಂಟು ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಕಾಫಿ ಬೆಳೆಗಾರರು ಆರೋಪಿಸಿದ್ದಾರೆ.

assault-on-dalit-laborers-at-chikkamagalur
ಕಾಫಿ ಬೆಳೆಗಾರರು ಮತ್ತು ಕಾರ್ಮಿಕರ ನಡುವೆ ಸಂಘರ್ಷ ಉಂಟು ಮಾಡಲು ಯತ್ನ: ಕಾಫಿ ಬೆಳೆಗಾರರ ಸಂಘ
author img

By

Published : Oct 16, 2022, 6:38 AM IST

ಚಿಕ್ಕಮಗಳೂರು: ದಲಿತ ಕೂಲಿ ಕಾರ್ಮಿಕರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಕಾಫಿ ಬೆಳೆಗಾರರು, ಕೂಲಿ ಕಾರ್ಮಿಕರ ನಡುವೆ ಸಂಘರ್ಷ ಉಂಟು ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಕಾಫಿ ಬೆಳೆಗಾರರು ಆರೋಪಿಸಿದ್ದಾರೆ.

ಜಿಲ್ಲೆಯಲ್ಲಿ ಸುಮಾರು 40 ಸಾವಿರ ಉದ್ದಿಮೆದಾರರಿದ್ದಾರೆ. ಒಂದೂವರೆ ಲಕ್ಷದಷ್ಟು ಕಾರ್ಮಿಕರಿದ್ದು, ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಬಂದಿರುವ ಕಾರ್ಮಿಕರು ಕೂಡ ಲಕ್ಷಕ್ಕಿಂತ ಹೆಚ್ಚಿದ್ದಾರೆ. ಎಲ್ಲ ಮಾಲೀಕರು ಹಾಗೂ ಕಾರ್ಮಿಕರ ಸಂಬಂಧ ಅತ್ಯುತ್ತಮವಾಗಿತ್ತು. ಬಾಳೆಹೊನ್ನೂರು ಸಮೀಪದ ಜೇನುಗದ್ದೆ ಕಾಫಿತೋಟದಲ್ಲಿ ನಡೆದ ಘಟನೆ ಆಕಸ್ಮಿಕ. ಚಿತಾವಣೆ ಮಾಡುವವರೇ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಆದರೆ ಹಾಗೆ ಮಾಡಿಲ್ಲ. ಈ 14 ಜನ ತೋಟಕ್ಕೆ ಬಂದು 4 ತಿಂಗಳಾಗಿದೆ. ಮಾಲೀಕರಿಂದ 9 ಲಕ್ಷ ಮುಂಗಡವಾಗಿ ಹಣ ಪಡೆದಿದ್ದಾರೆ. ಕೆಲಸಕ್ಕೂ ಬರದೆ, ಹಣವನ್ನೂ ನೀಡದೆ ಇದ್ದರೆ ಮಾಲೀಕರು ತೋಟ ಉಳಿಸಿಕೊಳ್ಳುವುದು ಹೇಗೆ?. ಹಣವನ್ನೂ ಪಡೆದು ಕೆಲಸಕ್ಕೂ ಬರಲ್ಲ ಎಂದರೆ ಹೇಗೆ ಎಂದು ಕಾಫಿ ಬೆಳೆಗಾರರು ಪ್ರಶ್ನಿಸಿದ್ದಾರೆ.

ಮನೆ ಬಳಿ ಹೋದಾಗ ತಪ್ಪು ನಡೆದಿರಬಹುದು. ಎಲ್ಲವನ್ನೂ ಅವರೇ ವಿಡಿಯೋ ಮಾಡಿದ್ದಾರೆ. ಯಾವ ಮಾಲೀಕರು ಆ ರೀತಿ ನಡೆದುಕೊಳ್ಳುವುದಿಲ್ಲ. ಇದರ ಹಿಂದೆ ವ್ಯವಸ್ಥಿತ ಪಿತೂರಿ ಇದೆ. ಶೇ.95ರಷ್ಟು ಕಾರ್ಮಿಕರು ಒಳ್ಳೆಯವರು. ಆದರೆ, ಶೇ.5ರಷ್ಟು ಜನ ಕೆಲವರ ಜೊತೆ ಸೇರಿ ಹೀಗೆ ಮಾಡುತ್ತಿದ್ದಾರೆ. ಅವರಿಂದ ನಾವು ಬೆಳೆದಿದ್ದೇವೆ. ನಮ್ಮಿಂದ ಅವರೂ ಬೆಳೆದಿದ್ದಾರೆ. ಆದರೆ, ಅವರು ಹೇಳುವ ರೀತಿ ನಡೆದಿಲ್ಲ ಎಂದರು.

ಅಲ್ಲದೇ, ಹಲ್ಲೆಯಿಂದಾಗಿ ಗರ್ಭಪಾತವಾಗಿದೆ ಎಂದು ಮಹಿಳೆ ದೂರಿದ್ದಾರೆ. ಆದರೆ, ಅದಕ್ಕೂ ಮುಂಚೆಯೇ ಎರಡು ವಾರಗಳ ಹಿಂದೆಯೇ ಮಿಸ್ ಕ್ಯಾರೇಜ್ ಆಗಿರೋ ಬಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದೆ ಎಂದು ಕಾಫಿ ಬೆಳೆಗಾರರ ಸಂಘ ಹೇಳಿದೆ.

ಇದನ್ನೂ ಓದಿ : ದಲಿತ ಕಾರ್ಮಿಕರ ಮೇಲೆ ಹಲ್ಲೆ ಪ್ರಕರಣ: ಗರ್ಭಪಾತವಾದ ಬಗ್ಗೆ ಮಾಹಿತಿ ಇಲ್ಲ ಎಂದ ಎಸ್​​ಪಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.