ETV Bharat / state

ಅಕ್ರಮವಾಗಿ ಜಮೀನು ಖಾತೆ ಮಾಡಿದ ಆರೋಪ: ಕಂದಾಯ ನಿರೀಕ್ಷಕ ಅರೆಸ್ಟ್ - ಕಂದಾಯ ನಿರೀಕ್ಷಕ ಅರೆಸ್ಟ್

ಅಕ್ರಮವಾಗಿ ಜಮೀನು ಖಾತೆ ಮಾಡುತ್ತಿದ್ದ ಆರೋಪದ ಮೇಲೆ ಮೂಡಿಗೆರೆ ತಾಲೂಕಿನ ಕಂದಾಯ ನಿರೀಕ್ಷಕ ಅರೆಸ್ಟ್.

arrest-of-ri-who-was-illegally-accounting-for-land
ಚಿಕ್ಕಮಗಳೂರು: ಅಕ್ರಮವಾಗಿ ಜಮೀನು ಖಾತೆ ಮಾಡಿಕೊಡುತ್ತಿದ್ದ ಆರ್​.ಐ ಬಂಧನ
author img

By

Published : Dec 15, 2022, 6:31 AM IST

ಚಿಕ್ಕಮಗಳೂರು: ಬೇರೆಯವರ ಹೆಸರಿನ ಸಾಗುವಳಿ ಚೀಟಿ ನಂಬರ್ ಬಳಸಿ ಅದೇ ಸಂಖ್ಯೆಯಲ್ಲಿ ಮತ್ತೊಬ್ಬರಿಗೆ ಜಮೀನು ಖಾತೆ ಮಾಡಿಕೊಟ್ಟ ಆರೋಪಕ್ಕೆ ಸಂಬಂಧಿಸಿದಂತೆ ಕಂದಾಯ ನಿರೀಕ್ಷನನ್ನ ಪೊಲೀಸರು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿಯಲ್ಲಿ ನಡೆದಿದೆ.

ಕಳೆದ ಎರಡು ವರ್ಷದಿಂದ ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿಯಲ್ಲಿ ಆರ್​​ಐ ಆಗಿರುವ ಲಕ್ಷ್ಮಣ್ ಬಂಧಿತರು. ಹೊಸಪುರ ಗ್ರಾಮದ ನೀಲಯ್ಯ ಪೂಜಾರಿಗೆ ಸೇರಿದ ಸಾಗುವಳಿ ಚೀಟಿ ಸಂಖ್ಯೆ 666/12-13 ಬಳಸಿ ಅಭಿಷೇಕ್ ಎಂಬುವವರಿಗೆ ಅಕ್ರಮವಾಗಿ ಹೊಸಪುರ ಗ್ರಾಮದ ಸರ್ವೇ ನಂಬರ್ 73ರಲ್ಲಿ 25 ಗುಂಟೆ ಜಮೀನನ್ನ ಅಕ್ರಮವಾಗಿ ಖಾತೆ ಮಾಡಿ ಅನುಮೋದನೆ ಮಾಡಿರುವ ಆರೋಪ ಕಂದಾಯ ನಿರೀಕ್ಷಕರ ಮೇಲಿದೆ.

ಅಭಿಷೇಕ್ ಅವರ ಫಾರಂ ನಂಬರ್ 94 ರ ಅಡಿ ಅರ್ಜಿ ಸಲ್ಲಿಸದೆ ಇದ್ದರೂ ಕೂಡ ಕಂದಾಯ ನಿರೀಕ್ಷಕ ಲಕ್ಷ್ಮಣ್ ನಿಯಮ ಬಾಹಿರವಾಗಿ ದಾಖಲೆ ಸೃಷ್ಟಿಸಿ ಬಗರ್ ಹುಕುಂ ಸಮಿತಿಯ ಮುಂದೆ ಮಂಡಿಸಿದ್ದಾರೆ. 2021 ರ ಜೂನ್ 2 ರಂದು ಜಮೀನಿನ ಖಾತೆಯನ್ನು ಅಭಿಷೇಕ್​ಗೆ ಅಕ್ರಮವಾಗಿ ಖಾತೆಗೆ ಅನುಮೋದಿಸಿದ್ದಾರೆ ಎಂದು ನೀಲಯ್ಯ ಪೂಜಾರಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ್ದ ಜಿಲ್ಲಾಧಿಕಾರಿಯು ಮೂಡಿಗೆರೆ ತಹಶೀಲ್ದಾರ್​ಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು. ತನಿಖೆಯಲ್ಲಿ ಅಕ್ರಮ ಖಾತೆ ಮಾಡಿರುವುದು ದೃಢಪಟ್ಟಿದೆ.

ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎ ಮತ್ತು ಬಿ ಕಂದಾಯ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿ ಕಂದಾಯ ನಿರೀಕ್ಷಕ ಲಕ್ಷ್ಮಣ್​​ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಟ್ವೀಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.