ETV Bharat / state

ಅಪೌಷ್ಟಿಕತೆ ತೊಲಗಿಸಲು ಕ್ರಮ - ಕಾಫಿನಾಡಿನಲ್ಲಿ ಈಗ ಹೇಗಿದೆ ಸ್ಥಿತಿ? - ಚಿಕ್ಕಮಗಳೂರು ಅಪೌಷ್ಟಿಕತೆ ಸಮಸ್ಯೆ

ಮಕ್ಕಳು, ಗರ್ಭಿಣಿ ಮತ್ತು ಬಾಣಂತಿಯರಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು, ಪೋಷಕಾಂಶಗಳ ಕೊರತೆ ನೀಗಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಅಂಗನವಾಡಿ ಕೇಂದ್ರಗಳ ಮೂಲಕ ಪೂರಕ ಪೋಷಕಾಂಶಗಳನ್ನು ಪೂರೈಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕುರಿತು ಒಂದಿಷ್ಟು ಮಾಹಿತಿ.

actions to reduce malnutrition problem at chickmagaluru
ಅಪೌಷ್ಟಿಕತೆ ತೊಲಗಿಸಲು ಯೋಜನೆ - ಕಾಫಿನಾಡಿನಲ್ಲಿ ಸದುಪಯೋಗವಾಗಿದೆಯೇ?
author img

By

Published : Mar 13, 2021, 1:26 PM IST

ಚಿಕ್ಕಮಗಳೂರು: ರಾಜ್ಯದಲ್ಲಿ ಸಾವಿರಾರು ಅಂಗನವಾಡಿ ಕೇಂದ್ರಗಳಿವೆ. ಇಲ್ಲಿರುವ ಮಕ್ಕಳ ಪಾಲನೆ - ಪೋಷಣೆ ಮಾಡುವುದರ ಜತೆಗೆ, ಗರ್ಭಿಣಿಯರಯ ಮತ್ತು ಬಾಣಂತಿಯರ ಆರೋಗ್ಯದ ದೃಷ್ಟಿಯಿಂದ ನಾನಾ ಯೋಜನೆಗಳನ್ನು ಸರ್ಕಾರ ರೂಪಿಸಿದೆ.

ಪ್ರತಿ ನಿತ್ಯ ಮಕ್ಕಳಿಗೆ, ಗರ್ಭಿಣಿಯರು - ಬಾಣಂತಿಯರಿಗೆ ಹಾಲು ಮತ್ತು ಮೊಟ್ಟೆಯಂತಹ ಪೂರಕ ಪೋಷಕಾಂಶಗಳನ್ನು ಅಂಗನವಾಡಿ ಕೇಂದ್ರಗಳ ಮೂಲಕ ಪೂರೈಸಿ ಅವರ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ.

ಅಪೌಷ್ಟಿಕತೆ ತೊಲಗಿಸಲು ಯೋಜನೆ, ಪ್ರತಿಕ್ರಿಯೆ

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಮಲ್ಲಿಕಾರ್ಜನ್ ಈ ಕುರಿತು ಕೆಲ ಮಾಹಿತಿ ನೀಡಿದ್ದಾರೆ. ಮಕ್ಕಳಿಗೆ ನೀಡುವ ಪೂರಕ ಪೌಷ್ಟಿಕ ಆಹಾರದ ಕಾರ್ಯಕ್ರಮದಲ್ಲಿ ಆರು ತಿಂಗಳ ಮಗುವಿನಿಂದ ಹಿಡಿದು ಆರು ವರ್ಷದ ಮಕ್ಕಳು ಹಾಗೂ ಗರ್ಭಿಣಿಯರಿಗೆ, ಬಾಣಂತಿಯರಿಗೆ ಪೂರಕ ಪೋಷಕಾಂಶಗಳನ್ನು ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿ 56,545 ಮಕ್ಕಳು, 12,100 ಗರ್ಭಿಣಿಯರು ಹಾಗೂ ಬಾಣಂತಿಯರು ಇದ್ದಾರೆ. 189 ಜನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇವರೆಲ್ಲರಿಗೂ ಸರ್ಕಾರದ ಯೋಜನೆ ಪ್ರಕಾರ ಪೂರಕ ಪೌಷ್ಟಿಕ ಆಹಾರವನ್ನು ಪೂರೈಸಲಾಗುತ್ತಿದೆ ಎಂದು ತಿಳಿಸಿದರು.

ಪೂರೈಕೆಯಲ್ಲಿ ಯಾವುದೇ ತೊಂದರೆಯಿಲ್ಲ:

ಐಸಿಡಿಎಸ್ ಯೋಜನೆಯಡಿ ಹಾಲು ಮತ್ತು ಮೊಟ್ಟೆಯನ್ನು ಪೂರೈಕೆ ಮಾಡಲಾಗುತ್ತಿದ್ದು, ಪೂರೈಕೆಯಲ್ಲಿ ಯಾವುದೇ ರೀತಿಯ ತೊಂದರೆ ಆಗಿಲ್ಲ. ಕೋವಿಡ್​ ಹೆಚ್ಚಿದ್ದ ಸಂದರ್ಭದಲ್ಲಿಯೂ ಕೂಡ ಸರಿಯಾದ ಪ್ರಮಾಣದಲ್ಲಿಯೇ ಪೂರೈಕೆ ಮಾಡಲಾಗಿದೆ. ಕೋವಿಡ್​​ ಬಂದ ಸಂದರ್ಭದಲ್ಲಿ ನಮ್ಮ ಗುರಿ ಫಲಾನುಭವಿಗಿಂತಲೂ ಜನರು ಹೆಚ್ಚಾಗಿದ್ದಾರೆ. ಮೂರು ಸಾವಿರ ಮಕ್ಕಳು ಹೆಚ್ಚಾಗಿದ್ದು, ಅವರನ್ನು ಈ ಯೋಜನೆಯ ವ್ಯಾಪ್ತಿಗೆ ತಂದು, ಮಾತೃಪೂರ್ಣ ಯೋಜನೆಯಡಿಗೆ ಒಳಪಡಿಸಿ ಪೂರಕ ಪೋಷಕಾಂಶಗಳನ್ನು ವಿತರಣೆ ಮಾಡಲಾಗುತ್ತಿದೆ. ಮಾರ್ಚ್ ತಿಂಗಳ ಆಹಾರವನ್ನು ಈಗಾಗಲೇ ವಿತರಣೆ ಮಾಡಲಾಗಿದೆ. ಕೋವಿಡ್​​ ಸಂದರ್ಭದಲ್ಲಿಯೂ ಸರ್ಕಾರ ಎಲ್ಲ ಅನುದಾನವನ್ನು ಬಿಡುಗಡೆ ಮಾಡಿದೆ ಎಂದರು.

ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ ವಿಶೇಷ ಚಿಕಿತ್ಸೆ:

ಜಿಲ್ಲೆಯಲ್ಲಿ ಮೊದಲು 218 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಅವರ ಸಂಖ್ಯೆ ಈಗ 189 ಆಗಿದೆ. ಅಪೌಷ್ಟಿಕ ಮಕ್ಕಳನ್ನು ವಿಶೇಷವಾಗಿ ಎನ್​ಆರ್​ಸಿ ಯಲ್ಲಿ ದಾಖಲು ಮಾಡುತ್ತಿದ್ದು, ಇದರ ಕೇಂದ್ರಗಳನ್ನು ಚಿಕ್ಕಮಗಳೂರು, ತರೀಕೆರೆ, ಕಡೂರಿನಲ್ಲಿ ತೆರೆದು ವಿಶೇಷ ಚಿಕಿತ್ಸೆ ನೀಡುತ್ತಿದ್ದೇವೆ ಮತ್ತು ಪೂರಕ ಪೌಷ್ಟಿಕ ಆಹಾರ ನೀಡುತ್ತಿದ್ದೇವೆ. ಸರ್ಕಾರದ ಮಾರ್ಗ ಸೂಚಿ ಪ್ರಕಾರ 15 ಗ್ರಾಂ ಹಾಲಿನ ಪುಡಿ ಹಾಗೂ 150 ಗ್ರಾಂ ಹಾಲನ್ನು ವಿತರಣೆ ಮಾಡಲಾಗುತ್ತಿದೆ. ಆರು ತಿಂಗಳಿನಿಂದ ಮೂರು ವರ್ಷದ ಮಕ್ಕಳಿಗೆ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಒಂದೂವರೆ ಪಟ್ಟು ಹೆಚ್ಚು ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಅಂಗನವಾಡಿ ಕಾರ್ಯಕರ್ತೆಯರ ಪರ ಹೋರಾಟಗಾರ್ತಿ ಹೇಳೋದೇನು?

ಈ ಕುರಿತು ಅಂಗನವಾಡಿ ಕಾರ್ಯಕರ್ತೆಯರ ಪರ ಹೋರಾಟಗಾರ್ತಿ ರಾಧ ಸುಂದರೇಶ್ ಮಾತನಾಡಿದ್ದು, ಸರ್ಕಾರ ನೀಡುತ್ತಿರುವ ಮೊಟ್ಟೆ ಹಾಗೂ ಹಾಲನ್ನು ಯಾವುದೇ ತೊಂದರೆಯಿಲ್ಲದೇ ಪೂರೈಸುತ್ತಿದ್ದಾರೆ. ಕಡಿಮೆ ತೂಕದ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಯಾವುದೇ ರೀತಿಯ ವ್ಯತ್ಯಾಸ ಆಗಿಲ್ಲ.

ಓದಿ: ಅಪೌಷ್ಟಿಕತೆ ನಿರ್ಮೂಲನೆಗೆ ಕ್ರಮ: ಅರ್ಹರಿಗೆ ತಲುಪಿತು ಪೋಷಕಾಂಶಯುಕ್ತ ಆಹಾರ

ಆದರೆ, ಅಂಗನವಾಡಿ ಕಾರ್ಯಕರ್ತೆಯರನ್ನು ಬೇರೆ ಕೆಲಸಕ್ಕೆ ನಿಯೋಜನೆ ಮಾಡಿದ ಸಂದರ್ಭ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಸರ್ಕಾರದ ಬೇರೆ ಬೇರೆ ಕಾರ್ಯಕ್ರಮಗಳಿಗೆ ಇವರನ್ನು ನಿಯೋಜನೆ ಮಾಡುವುದರಿಂದ ಗರ್ಭಿಣಿ ಹಾಗೂ ಬಾಣಂತಿಯರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಆಗುತ್ತಿಲ್ಲ. ಅಂಗನವಾಡಿ ಕೆಲಸ ಬಿಟ್ಟು ಬೇರೆ ಕೆಲಸಕ್ಕೆ ನಿಯೋಜನೆ ಮಾಡಬಾರದು. ಮೊಟ್ಟೆಯನ್ನು ಅಂಗನವಾಡಿ ಕಾರ್ಯಕರ್ತೆಯರೇ ಕೊಂಡು ತರುತ್ತಾರೆ. ಅದರ ಹಣವನ್ನು ಸರ್ಕಾರ ನೀಡುತ್ತದೆ. ಈಗ ಕೊರೊನಾ ಇರೋದ್ರಿಂದ ಅಂಗನವಾಡಿಗೆ ಮಕ್ಕಳು ಕೂಡ ಸರಿಯಾಗಿ ಬರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.