ETV Bharat / state

ಹೆಣ್ಣು ಅಂತಾ ಹಸುಗೂಸನ್ನು ಕತ್ತು ಹಿಸುಕಿ ಕೊಂದ ಪಾಪಿ ತಂದೆ - kannadanews

ಹೆಣ್ಣು ಮಗು ಎಂಬ ಕಾರಣಕ್ಕೆ ತಂದೆಯೇ ಮಗುವನ್ನು ಕೊಲೆ ಮಾಡಿರುವ ಅಮಾನವೀಯ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಹೆಣ್ಣು ಮಗುವೆಂದು ಹಸುಗೂಸನ್ನು ಕತ್ತು ಹಿಸುಕಿ ಕೊಂದ ಪಾಪಿ ತಂದೆ
author img

By

Published : Jun 19, 2019, 3:07 PM IST

ಚಿಕ್ಕಮಗಳೂರು: ಹೆಣ್ಣು ಮಗು ಎಂಬ ಒಂದೇ ಕಾರಣಕ್ಕೆ ತಂದೆ ಕಟುಕನಾಗಿ 40 ದಿನದ ಕಂದಮ್ಮನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಚಿಕ್ಕಮಗಳೂರು ತಾಲೂಕಿನ ಭೂಚೆನಹಳ್ಳಿ ಕಾವಲ್ ಗ್ರಾಮದಲ್ಲಿ ಈ ಘೋರ ಕೃತ್ಯ ನಡೆದಿದ್ದು, ಹೆಣ್ಣು ಎಂಬ ಒಂದೇ ಕಾರಣಕ್ಕೆ ತಂದೆಯೇ ಮಗುವನ್ನು ಕೊಂದು ಹಾಕಿದ್ದಾನೆ. ಮಂಜುನಾಥ್ (27) ಮಗು ಹತ್ಯೆ ಮಾಡಿದ ತಂದೆಯಾಗಿದ್ದು, ಮಗುವಿನ ತಾಯಿ ಮನೆಯಲ್ಲಿ ಇಲ್ಲದ ವೇಳೆ ತಂದೆ ಈ ಪಾಪದ ಕೆಲಸ ಮಾಡಿದ್ದಾನೆ ಎನ್ನಲಾಗಿದೆ. ತಾಯಿ ಮನೆಗೆ ಬಂದಾಗ ಮಗುವಿನ ಕುತ್ತಿಗೆಯಲ್ಲಿ ಗಂಭೀರ ಗಾಯವಾಗಿದ್ದನ್ನು ಗಮನಿಸಿದ್ದು, ಈ ವೇಳೆ ಕೃತ್ಯ ಬೆಳಕಿಗೆ ಬಂದಿದೆ.

murder
ಹೆಣ್ಣು ಮಗುವೆಂದು ಹಸುಗೂಸನ್ನು ಕತ್ತು ಹಿಸುಕಿ ಕೊಂದ ಪಾಪಿ ತಂದೆ

ಘಟನೆ ತಿಳಿದ ಕೂಡಲೇ ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮಾಂತರ ಪೊಲೀಸರು ಮಂಜುನಾಥನನ್ನು ಬಂಧಿಸಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Intro:R_kn_ckm_03_19_magu murder_Rajakumar_ckm_av_7202347Body:

ಚಿಕ್ಕಮಗಳೂರು :-

ಹೆಣ್ಣು ಮಗು ಎಂಬ ಒಂದೇ ಕಾರಣಕ್ಕೆ ತಂದೆ ಕಟುಕನಾಗಿ 40 ದಿಂದ ಹಸುಳೆ ಕಂದಮ್ಮ ನ್ನನು ಕತ್ತು ಹಿಸುಕಿ ತಂದೆಯೇ ಮನೆಯಲ್ಲಿ ಕೊಂದು ಹಾಕಿದ್ದಾನೆ. ಚಿಕ್ಕಮಗಳೂರು ತಾಲೂಕಿನ ಭೂಚೆನಹಳ್ಳಿ ಕಾವಲ್ ಗ್ರಾಮದಲ್ಲಿ ಈ ಘೋರ ದುರಂತ ಘಟನೆ ನಡೆದಿದ್ದು ಹೆಣ್ಣು ಮಗು ಎಂಬ ಒಂದೇ ಕಾರಣಕ್ಕೆ ತಂದೆಯೇ ಕೊಂದು ಹಾಕಿದ್ದಾನೆ. ಮಂಜುನಾಥ್ (27) ಮಗು ಹತ್ಯೆ ಮಾಡಿದ ತಂದೆಯಾಗಿದ್ದು ತಾಯಿ ಮನೆಯಲ್ಲಿ ಇಲ್ಲದ ವೇಳೆ ತಂದೆ ಈ ಕೆಲಸ ಮಾಡಿದ್ದಾನೆ. ಮಗುವಿನ ಕುತ್ತಿಗೆಯಲ್ಲಿ ಗಂಭೀರ ಗಾಯವಾಗಿದ್ದು ತಾಯಿ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.ಈ ಘಟನೆ ತಿಳಿದ ಕೂಡಲೇ ಮನೆಯವರ ಆಕ್ರಂದನ ಮುಗಿಲು ಮುಟ್ಟಿದು ಗ್ರಾಮಾಂತರ ಪೊಲೀಸರು ಮಂಜುನಾಥ್ ನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು ಆರೋಪಿಯ ಸಂಪೂರ್ಣ ವಿಚಾರಣೆಯ ನಂತರವೇ ಈ ಹತ್ಯೆಗೆ ಕಾರಣ ಏನು ಎಂಬುದು ತಿಳಿಯ ಬೇಕಿದೆ.....

Conclusion:ರಾಜಕುಮಾರ್....
ಈಟಿವಿ ಭಾರತ್....
ಚಿಕ್ಕಮಗಳೂರು.....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.