ETV Bharat / state

ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಸೇರಿ 6 ಕಡೆ ಕೋವಿಡ್ ಲಸಿಕಾ ತಾಲೀಮು - vaccine workout including Chikkamagaluru

ಕೇಂದ್ರ ಸರ್ಕಾರದಿಂದ ಕೋವಿಡ್-19 ಲಸಿಕೆ ಬರುವ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 6 ಕಡೆ ಮಾದರಿ ಲಸಿಕಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಒಂದು ಕೇಂದ್ರದಿಂದ 25 ಜನರಂತೆ ಒಟ್ಟು 150 ಜನರಿಗೆ ಲಸಿಕೆ ಹಾಕುವ ಯೋಜನೆ ಹಮ್ಮಿಕೊಳ್ಳಲಾಗಿದೆ.

ಲಸಿಕಾ ತಾಲೀಮು
ಲಸಿಕಾ ತಾಲೀಮು
author img

By

Published : Jan 9, 2021, 3:59 PM IST

ಚಿಕ್ಕಮಗಳೂರು: ಕೋವಿಡ್- 19 ಲಸಿಕಾ ಅಭಿಯಾನದ ಯಶಸ್ವಿಗೆ ಪೂರ್ವ ಭಾವಿಯಾಗಿ ಮತ್ತು ಕೊರೊನಾ ಲಸಿಕಾ ವಿತರೆಣೆ ವ್ಯವಸ್ಥಿತವಾಗಿ ನೆರವೇರಿಸುವ ಉದ್ದೇಶದಿಂದ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಸೇರಿದಂತೆ 6 ಕಡೆ ಕೋವಿಡ್ ಲಸಿಕಾ ತಾಲೀಮು ನಡೆಯಿತು.

ಜಿಲ್ಲಾಸ್ಪತ್ರೆ ಚಿಕ್ಕಮಗಳೂರು, ನಗರ ಆರೋಗ್ಯ ಕೇಂದ್ರ -ಎ, ಹೋಲಿಕ್ರಾಸ್ ಆಸ್ಪತ್ರೆ, ತಾಲೂಕು ಆಸ್ಪತ್ರೆ ಮೂಡಿಗೆರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹುಲಿಕೆರೆ ಕಡೂರು ತಾಲೂಕು, ಸಮುದಾಯ ಆರೋಗ್ಯ ಕೇಂದ್ರ, ಅಜ್ಜಂಪುರ, ತರೀಕೆರೆ ತಾಲೂಕು ಇಲ್ಲಿ ಕೋವಿಡ್ ಲಸಿಕಾ ತಾಲೀಮು ನಡೆಯಿತು. ಈ ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿ ಡಾ. ಕುಮಾರ್ ಉದ್ಘಾಟನೆ ಮಾಡಿದ್ದು, ಕೇಂದ್ರ ಸರ್ಕಾರದಿಂದ ಕೋವಿಡ್-19 ಲಸಿಕೆ ಬರುವ ಹಿನ್ನೆಲೆ ಜಿಲ್ಲೆಯಲ್ಲಿ ಒಟ್ಟು 6 ಕಡೆಗಳಲ್ಲಿ ಮಾದರಿ ಲಸಿಕಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.

ಕೋವಿಡ್ ಲಸಿಕಾ ತಾಲೀಮು

ಒಂದು ಕೇಂದ್ರದಿಂದ 25 ಜನರಂತೆ ಒಟ್ಟು 150 ಜನರಿಗೆ ಲಸಿಕೆ ಹಾಕುವ ಯೋಜನೆ ಹಮ್ಮಿಕೊಳ್ಳಲಾಗಿದೆ. ವೈದ್ಯರು ಹಾಗೂ ಅಧಿಕಾರಿಗಳು ಯಾವ ರೀತಿ ಕೋವಿಡ್-19 ಲಸಿಕೆಯ ಪೂರ್ವ ಸಿದ್ದತೆಯ ಬಗ್ಗೆ ಯೋಜನೆ ರೂಪಿಸಿಕೊಳ್ಳಬೇಕು ಮತ್ತು ಲಸಿಕೆ ಬಂದ ನಂತರ ಯಾವುದೇ ಲೋಪ ದೋಷವಾಗದಂತೆ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಮಾದರಿ ಕೇಂದ್ರಗಳು ಉಪಯುಕ್ತವಾಗಲಿವೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಕುಮಾರ್ ತಿಳಿಸಿದರು.

ಜಿಲ್ಲೆಯಲ್ಲಿ 108 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಗುರುತಿಸಲಾಗಿದ್ದು, ಒಟ್ಟು 10,194 ಪ್ರಾಥಮಿಕ ಆರೋಗ್ಯ ಸಿಬ್ಬಂದಿ ತಮ್ಮ ಹೆಸರನ್ನು ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.