ETV Bharat / state

15 ಲಕ್ಷ ರೂ. ಪಡೆದು ಫೇಸ್​​​ಬುಕ್​​ ಪ್ರಿಯಕರನಿಂದ ಬ್ಲಾಕ್​ಮೇಲ್​ ಆರೋಪ... ನ್ಯಾಯಕ್ಕಾಗಿ ಮಹಿಳೆಯ ಕಣ್ಣೀರು!

ವಿವಾಹವಾಗಿ ಮಕ್ಕಳನ್ನು ಹೊಂದಿದ್ದ ಮಹಿಳೆ ನಂತರ ಗಂಡನಿಂದ ವಿಚ್ಛೇದನ ಪಡೆದಿದ್ದಳು. ಈ ವೇಳೆ ಫೇಸ್​​​​ಬುಕ್​​ನಲ್ಲಿ ಪರಿಷಯವಾಗಿದ್ದ ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿದ್ದಾನೆ. ಮದುವೆಯಾಗುತ್ತೇನೆಂದು ನಂಬಿಸಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆಂದು ಮಹಿಳೆ ಆರೋಪಿಸಿದ್ದಾಳೆ.

women-got-cheated-with-15-lack-and-blackmailed-by-her-facebook-lover
ನ್ಯಾಯಕ್ಕಾಗಿ ಮಹಿಳೆಯ ಕಣ್ಣೀರು
author img

By

Published : Feb 19, 2021, 8:13 PM IST

ಚಿಕ್ಕಬಳ್ಳಾಪುರ: ಫೇಸ್​​​​ಬುಕ್​​​​​​ನಲ್ಲಿ ಪರಿಚಯವಾದ ಯುವಕನೋರ್ವ ಮದುವೆಯಾಗುತ್ತೇನೆ ಎಂದು ನಂಬಿಸಿ 15 ಲಕ್ಷ ರೂ. ಪಡೆದು ಪ್ರಾಣ ಬೆದರಿಕೆ ಹಾಕುತ್ತಿದ್ದಾನೆಂದು ಮಹಿಳೆಯೋರ್ವಳು ಪೊಲೀಸ್ ಠಾಣೆ ಮೆಟ್ಟಿಲೀರಿದ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.

ನಗರದ ಇಡ್ಲಿಪಾಳ್ಯದ ನಿವಾಸಿ ಸತೀಶ್ ಎಂಬಾತನ ವಿರುದ್ಧ ದೂರು ದಾಖಲಿಸಿದ್ದಾಳೆ. ವಿವಾಹವಾಗಿ ಮಕ್ಕಳನ್ನು ಹೊಂದಿದ್ದ ಮಹಿಳೆ ನಂತರ ವಿಚ್ಛೇದನ ಪಡೆದಿದ್ದರು. ಈ ವೇಳೆ ಫೇಸ್​​​​ಬುಕ್​​ನಲ್ಲಿ ಪರಿಚಯವಾಗಿದ್ದ ಯುವಕ ಮದುವೆಯಾಗುವುದಾಗಿ ನಂಬಿಸಿದ್ದಾನೆ. ಜೊತೆಗೆ 15 ಲಕ್ಷ ರೂ. ಪಡೆದು, ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಬಳಿಕ ಯುವಕನ ವರಸೆ ಬದಲಾಗಿದ್ದು, ತನ್ನ ಫೋಟೋಗಳನ್ನು ಬಳಸಿ ಬ್ಲಾಕ್​ಮೇಲ್​​​​ ಮಾಡಲು ಆರಂಭಿಸಿರುವುದಾಗಿ ಮಹಿಳೆ ಆರೋಪಿಸಿದ್ದಾಳೆ.

15 ಲಕ್ಷ ರೂ. ಎಗರಿಸಿ ಬ್ಲಾಕ್​​ಮೇಲ್ ಮಾಡಿದ ಫೇಸ್​​​ಬುಕ್​​ ಪ್ರಿಯಕರ... ನ್ಯಾಯಕ್ಕಾಗಿ ಮಹಿಳೆಯ ಕಣ್ಣೀರು

ಅಲ್ಲದೆ ಮದುವೆಯಾಗುತ್ತೇನೆಂದು ನಂಬಿಸಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಪ್ರತಿನಿತ್ಯ ಕುಡಿದು ಬಂದು ನನ್ನ ಮಕ್ಕಳಿಗೂ ಸಹ ಹೊಡೆದು ಅವರನ್ನು ಕೊಲೆ ಮಾಡುವುದಾಗಿ ಹೆದರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ.

2019ರಲ್ಲಿ ಯುವಕನಿಂದ ಹಿಂಸೆ ತಾಳಲಾರದೆ ವಿಷ ಸೇವಿಸಿದ್ದು, ಚಿಂತಾಮಣಿ ಆಸ್ಪತ್ರೆ ಸೇರಿದಂತೆ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಾಗಿ ಆತ್ಮಹತ್ಯೆ ಪ್ರಯತ್ನದ ಬಗ್ಗೆ ಮಹಿಳೆ ವಿವರಿಸಿದ್ದಾಳೆ.

ದೂರು ಕೊಟ್ಟರೂ ಕ್ರಮವಿಲ್ಲ
ಸತೀಶ್ ವಿರುದ್ಧ ದೂರು ಕೊಟ್ಟಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ರಾಜಕೀಯ ನಾಯಕರ ಕೈವಾಡದಿಂದ ಆರೋಪಿಯನ್ನು ಪೊಲೀಸರು ಇದುವರೆಗೂ ಬಂಧಿಸಿಲ್ಲ ಎಂದು ಮಹಿಳೆ ಆರೋಪಿಸಿದ್ದಾಳೆ.

ಇದನ್ನೂ ಓದಿ: ಬೆಳ್ತಂಗಡಿ: ಕಾಲೇಜ್ ವಿದ್ಯಾರ್ಥಿನಿ ನೇಣುಬಿಗಿದುಕೊಂಡು ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.