ETV Bharat / state

ಕಂಡಕ್ಟರ್​ ಸಹೋದರರಿಂದ ಮಹಿಳೆಗೆ ವಂಚನೆ: ದೂರು ನೀಡಿದ್ರೂ ಕ್ರಮ ಕೈಗೊಳ್ಳದ ಪೊಲೀಸರು!

ಕೆಎಸ್​​ಆರ್​ಟಿಸಿ ಬಸ್​​ನಲ್ಲಿ ಮೆಜೆಸ್ಟಿಕ್​ನಿಂದ ಸಿಗಂಧೂರಿಗೆ ಹೋಗುವ ಮಹಿಳೆಯೊಬ್ಬರಿಗೆ ಟಿಕೆಟ್ ಕೊಟ್ಟ ಕಂಡಕ್ಟರ್ ಆಕೆಯ ಬಳಿ 45 ಲಕ್ಷ ರೂಪಾಯಿ ದೋಚಿದ್ದಾನೆ. ಕೊಟ್ಟೋನು ಕೋಡಂಗಿ‌ ಈಸ್ಕೊಂಡೋನು ಈರಭದ್ರ ಅನ್ನೋ‌ ಹಾಗೆ ಕೈಯಲ್ಲಿದ್ದ ಕಾಸೆಲ್ಲ ಕಂಡೆಕ್ಟರ್​​ ಕೈಗೆ ಕೊಟ್ಟ ಮಹಿಳೆ ಹೆಸರು ಅಶ್ವಥಮ್ಮ.

author img

By

Published : Jun 14, 2022, 8:27 PM IST

Cheating at a woman by conductors in Chikkaballapur
ಕಂಡೆಕ್ಟರ್​ ಸಹೋದರರಿಂದ ಮಹಿಳೆಗೆ ವಂಚನೆ

ಚಿಕ್ಕಬಳ್ಳಾಪುರ: ವಂಚನೆಗೊಳಗಾದ ಅಶ್ವಥಮ್ಮ ನಗರದ ವಾರ್ಡ್​ ನಂ.8 ರ ಮರುಳು ಸಿದ್ದೇಶ್ವರಸ್ವಾಮಿ‌ ದೇವಸ್ಥಾನದ ಮುಂದೆ ವಾಸವಿದ್ದಾರೆ. ಚಿಂತಾಮಣಿ ಮೂಲದ ದೊಡ್ಡಗಂಜೂರು ಗ್ರಾಮದ ಸಹೋದರರಾದ ಕೆಎಸ್​ಆರ್​​ಟಿಸಿ ಕಂಡಕ್ಟರ್ ರಮೇಶ ಮತ್ತು ಬಿಎಂಟಿಸಿ ಕಂಡೆಕ್ಟರ್ ಶ್ರೀನಿವಾಸ ವಂಚನೆ ಮಾಡಿದ್ದಾರೆ. ಅಶ್ವಥಮ್ಮನಿಗೆ ಪುಣ್ಯಕ್ಷೇತ್ರಗಳನ್ನು ಸುತ್ತುವ ಹವ್ಯಾಸ ಇತ್ತು. ಹಾಗಾಗಿ ಸಿಗಂಧೂರಿಗೆ ಹೋಗಿ ಚೌಡೇಶ್ವರಿ ದರ್ಶನ ಪಡೆದು ಬರೋಣ ಎಂದು ಮೆಜೆಸ್ಟಿಕ್​ನಲ್ಲಿ ಬಸ್​ಗಾಗಿ ಹುಡುಕಾಟ ನಡೆಸುತ್ತಿದ್ದರು.

ಬಸ್​ಗಾಗಿ ಹುಡುಕುತ್ತಿದ್ದ ಇವರನ್ನು ನೋಡಿದ ಕೆಎಸ್​ಆರ್​ಟಿಸಿ ಕಂಡಕ್ಟರ್ ಈ ಬಸ್​ ಡೈರೆಕ್ಟಾಗಿ ಸಿಗಂಧೂರಿಗೆ ಹೋಗುತ್ತದೆ ಎಂದು ಬಸ್ ಹತ್ತಿಸಿಕೊಂಡಿದ್ದಾನೆ. ಕಷ್ಟ ಸುಖ ಮಾತನಾಡುವ ರೀತಿಯಲ್ಲಿ ಪರಿಚಯ ಮಾಡಿಕೊಂಡಿದ್ದಾರೆ. ಬಳಿಕ ಇಬ್ಬರೂ ಅಣ್ಣ- ತಮ್ಮಂದಿರು ಚಿಂತಾಮಣಿಯಲ್ಲಿ ಫೈನಾನ್ಸ್ ನಡೆಸುತ್ತಿರುವ ಬಗ್ಗೆ ಹೇಳಿದ್ದಾರೆ. ಬಳಿಕ ಫೋನ್​ ಮಾಡಿ, ಇಬ್ಬರೂ ಮನೆಗೆ ಬಂದು ಅವರ ಮನವೊಲಿಸಿ ಅಶ್ವಥಮ್ಮ ಅವರ ಮನೆ ಅಡವಿಟ್ಟು, ಅಕ್ಕಪಕ್ಕದ ಮಹಿಳೆಯರ ಬಳಿ ಒಟ್ಟು 45 ಲಕ್ಷ ರೂ. ಹಣ ದೋಚಿ ವಂಚನೆ ಮಾಡಿದ್ದಾರೆ.

ಈ ಬಗ್ಗೆ‌ ಚಿಕ್ಕಬಳ್ಳಾಪುರದ ನಗರ ಠಾಣೆಯಲ್ಲಿ ದೂರು ನೀಡಿದ್ರೂ, ಪೊಲೀಸರು ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲವಂತೆ. ಎಫ್​ಐಆರ್ ದಾಖಲು ಮಾಡಿದ ಪೊಲೀಸರೇ ಆರೋಪಿಗೆ ಹಣ ವಾಪಸ್​ ಕೊಡಲು ನಾಲ್ಕು ತಿಂಗಳು ಟೈಮ್ ಕೊಡಿಸಿದ್ರಂತೆ. ಆದರೆ ಬಳಿಕವೂ ಹಣ ಅವರ ಕೈಸೇರಿಲ್ಲ. ಹೀಗಾಗಿ ವಂಚನೆಗೊಳಗಾದ ಮಹಿಳೆ ಎಸ್ಪಿ ಮಿಥುನ್ ಕುಮಾರ್ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ಪೊಲೀಸರ ಈ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪತ್ನಿಯ ಸ್ನೇಹಿತೆಯ ಪ್ರೀತಿಸಿ ಕೊಲೆಗೈದ ಆರೋಪಿ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.