ಚಿಂತಾಮಣಿ: ಕೈವಾರ ಉರ್ದು ಸರ್ಕಾರಿ ಶಾಲೆಯ ವತಿಯಿಂದ ಊರಿನ ಶಾದಿ ಮಹಲ್ನಲ್ಲಿ ಶಾಲೆಗಾಗಿ ನಾವು -ನೀವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಗ್ರಾಮದ ಮುಖಂಡ ಮೊಹಮ್ಮದ್ ರಿಯಾಜ್ ಮಾತನಾಡಿ, ಸರ್ಕಾರಿ ಶಾಲೆಗಳ ಉಳಿವಿಗಾಗಿ ಪೋಷಕರು ಮುಂದಾಗಬೇಕು. ಸರ್ಕಾರದ ಹಲವಾರು ಯೋಜನೆಗಳ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳಬೇಕು. ಸರ್ಕಾರಿ ಶಾಲೆಗಳಿಗೆ ಸರ್ಕಾರದಿಂದ ಕ್ಷೀರಭಾಗ್ಯ, ಸಮವಸ್ತ್ರ, ಶೂ ಭಾಗ್ಯದ ಮೂಲಕ ಇವೆಲ್ಲಾವನ್ನು ಉಚಿತವಾಗಿ ನೀಡಲಾಗುತ್ತಿದೆ. ಆದ್ದರಿಂದ ಎಲ್ಲ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಿ, ಸರ್ಕಾರಿ ಶಾಲೆಗಳನ್ನು ಉಳಿಸಬೇಕೆಂದು ಮನವಿ ನಾಡಿಕೊಂಡರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರದ ದಾದಾಪೀರ್, ಎಸ್ಡಿಎಂಸಿ ಅಧ್ಯಕ್ಷರಾದ ಸೈಯದ್ ಶಬ್ಬೀರ್ ಉಲ್ಲಾ, ಉಪಾಧ್ಯಕ್ಷರಾದ ಮೊಹಮ್ಮದ್ ರಿಯಾಜ್, ಮಸೀದಿ ಅಧ್ಯಕ್ಷರಾದ ಯಾಸಿನ್, ಸೈಯದ್ ರಿಯಾಜ್, ಬಾಷಾ ಸಾಬ್,ಶಾಲೆಯ ಮುಖ್ಯ ಶಿಕ್ಷಕರಾದ ಸಾಜಿದಾ ಬೇಗಂ, ಮುಬೀನಾ, ನಯಾಜ್ ಪಾಷ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.