ಚಿಕ್ಕಬಳ್ಳಾಪುರ: ರಸ್ತೆ ಡಾಂಬರೀಕರಣ ಮಾಡುವ ವೇಳೆ ಕಾರ್ಮಿಕನ ಮೇಲೆ ಟ್ರ್ಯಾಕ್ಟರ್ ಹರಿದು ಸ್ಥಳದಲ್ಲೇ ಸಾವನ್ನಪಿದ ಘಟನೆ ಜಿಲ್ಲೆಯ ಗುಡಿಬಂಡೆ ತಾಲೂಕಿನ ಪೋಲಂಪಲ್ಲಿ ಗ್ರಾಮದ ಬಳಿ ಘಟನೆ ನಡೆದಿದೆ.
ಗುಡಿಬಂಡೆಯಿಂದ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಡಾಂಬರೀಕರಣ ಮಾಡುವ ಸಂದರ್ಭದಲ್ಲಿ, ಪೋಲಂಪಲ್ಲಿ ಗ್ರಾಮದ ಬಳಿ ರಾತ್ರಿ ಚಾಲಕನ ಅಜಾಗರೂಕತೆಯಿಂದ ರಸ್ತೆ ಕೆಲಸ ಮಾಡುತ್ತಿದ್ದ ಆಂಧ್ರ ಮೂಲದ ಲಕ್ಷ್ಮಣ್ ನಾಯಕ್ ಮೇಲೆ ಟ್ರ್ಯಾಕ್ಟರ್ ಹರಿದಿದೆ. ನಂತರ ಈತ ಸ್ಥಳದಲ್ಲೇ ಸಾವನ್ನಪಿದ್ದಾನೆ. ಇನ್ನು ಇದು ಬೀಚಗಾನಹಳ್ಳಿ ನಿಸಾರ್ ಅಹಮದ್ ಅವರಿಗೆ ಸೇರಿದ ಟ್ರ್ಯಾಕ್ಟರ್ ಎಂದು ತಿಳಿದು ಬಂದಿದೆ.
ಇನ್ನು ಸ್ಥಳಕ್ಕೆ ಆಗಮಿಸಿದ ಗುಡಿಬಂಡೆ ಪೊಲೀಸರು ಪರಿಶೀಲನೆ ನಡೆಸಿ ದೂರು ದಾಖಲಿಸಿದ್ದಾರೆ.